Breaking News

ಹಾಸನ: ಹತ್ತು ಶಿಕ್ಷಕರಿಗೆ ಕೋವಿಡ್‌ 19 ದೃಢ, ಏಳು ಶಾಲೆಗಳಿಗೆ ರಜೆ

Spread the love

ಹಾಸನ: ಜಿಲ್ಲೆಯಲ್ಲಿ ಶಾಲೆಗಳು ಆರಂಭಗೊಂಡ ಬಳಿಕ ಹತ್ತು ಶಿಕ್ಷಕರಿಗೆ ಕೋವಿಡ್‌ 19 ದೃಢಪಟ್ಟಿರುವುದರಿಂದ ಏಳು ಶಾಲೆಗಳಿಗೆ ಶಿಕ್ಷಣ ಇಲಾಖೆ ರಜೆ ಘೋಷಿಸಿದೆ. ‌

ಪ್ರಾಥಮಿಕ ಶಾಲೆಯ ಏಳು ಮತ್ತು ಪ್ರೌಢಶಾಲೆಯ ಮೂವರು ಶಿಕ್ಷಕರಿಗೆ ಸೋಂಕು ತಗುಲಿದ್ದು, ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿದೆ. ಶಾಲೆ ಆರಂಭಕ್ಕೂ ಮುನ್ನ ಮೂವರು ಶಿಕ್ಷಕರಿಗೆ ಪಾಸಿಟಿವ್‌ ಪತ್ತೆಯಾಗಿತ್ತು. ಹಾಗಾಗಿ ಸೋಂಕಿತ ಶಿಕ್ಷಕರು ಶಾಲೆಗೆ ಹಾಜರಾಗಿರಲಿಲ್ಲ.

‘ಚನ್ನರಾಯಪಟ್ಟಣ ತಾಲ್ಲೂಕಿನ ಮೂವರು, ಹಾಸನ ತಾಲ್ಲೂಕಿನ ಇಬ್ಬರು ಹಾಗೂ ಹೊಳೆನರಸೀಪುರ ತಾಲ್ಲೂಕಿನ ಇಬ್ಬರು ಶಿಕ್ಷಕರಿಗೆ ಸೋಂಕು ತಗುಲಿದೆ. ಏಳು ಶಾಲೆಗಳಿಗೆ ಶುಕ್ರವಾರದವರೆಗೂ ರಜೆ ನೀಡಲಾಗಿದೆ. ಬಳಿಕ ಪರಿಸ್ಥಿತಿ ನೋಡಿಕೊಂಡು ಶಾಲೆ ತೆರೆಯಲು ನಿರ್ಧರಿಸಲಾಗಿದೆ. ಶಾಲೆಗಳಲ್ಲಿ ಸ್ಯಾನಿಟೈಸ್‌ ಮಾಡಲು ಸೂಚಿಸಲಾಗಿದೆ. ಎಲ್ಲ ಶಿಕ್ಷಕರಿಗೂ ಕೋವಿಡ್‌ ಪರೀಕ್ಷೆಗೆ ಒಳಪಡಿಸಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಸ್‌.ಪ್ರಕಾಶ್‌ ತಿಳಿಸಿದರು.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಖಾಕಿ ಆರ್ಭಟ: ಮದ್ಯದ ಮಾಫಿಯಾ, ಬೈಕ್ ಕಳ್ಳರು ಹಾಗೂ ಮಾದಕ ವ್ಯಸನಿಗಳ ವಿರುದ್ಧ ಸರಣಿ ದಾಳಿ!

Spread the love ಬೆಳಗಾವಿಯಲ್ಲಿ ಖಾಕಿ ಆರ್ಭಟ: ಮದ್ಯದ ಮಾಫಿಯಾ, ಬೈಕ್ ಕಳ್ಳರು ಹಾಗೂ ಮಾದಕ ವ್ಯಸನಿಗಳ ವಿರುದ್ಧ ಸರಣಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ