Breaking News
Home / Uncategorized / ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ ಇಂಡೋ- ಆಸೀಸ್ `ಸಿಡ್ನಿ’ಟೆಸ್ಟ್

ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ ಇಂಡೋ- ಆಸೀಸ್ `ಸಿಡ್ನಿ’ಟೆಸ್ಟ್

Spread the love

ಸಿಡ್ನಿ, ಜ.5- ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯೆಂದರೆ ಅಲ್ಲಿ ದಾಖಲೆಗಳಿಗೇನೂ ಭರವಿಲ್ಲ, ಈಗ ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲೂ ಪ್ರಮುಖ ದಾಖಲೆಗಳು ಮಾಡಲು ಆಟಗಾರರು ಸಜ್ಜಾಗಿ ದ್ದಾರೆ. ಮೊದಲೆರಡು ಟೆಸ್ಟ್‍ಗಳಿಂದ ತಂಡದಿಂದ ದೂರ ಉಳಿದಿದ್ದ ಸ್ಟಾರ್ ಆಟಗಾರರಾದ ಭಾರತದ ರೋಹಿತ್ ಶರ್ಮಾ ಹಾಗೂ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರು ಸಿಡ್ನಿ ಟೆಸ್ಟ್‍ನಲ್ಲಿ ಆಡುವ ಮೂಲಕ ಕೇಂದ್ರಬಿಂದುವಾಗಿದ್ದು ಅವರು ಕೂಡ ದಾಖಲೆ ಬರೆಯಲು ಉತ್ಸುಕದಲ್ಲಿದ್ದಾರೆ.

6 ಸಾವಿರ ಟೆಸ್ಟ್‍ನತ್ತ ಪೂಜಾರ ಚಿತ್ತ:
ಟೆಸ್ಟ್ ಸ್ಪೆಷಾಲಿಸ್ಟ್ ಎಂದೇ ಗುರುತಿಸಿಕೊಂಡಿರುವ ಭಾರತದ ಚೇತೇಶ್ವರ ಪೂಜಾರ ಅವರು ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡು ಟೆಸ್ಟ್‍ಗಳಲ್ಲೂ ಕಳಪೆ ಪ್ರದರ್ಶನ ನೀಡಿದ್ದರೂ ಕೂಡ ಸಿಡ್ನಿ ಟೆಸ್ಟ್‍ನಲ್ಲಿ 6 ಸಾವಿರ ರನ್ ಗಳಿಸುವ ಹುಮ್ಮಸ್ಸಿನಲ್ಲಿದ್ದಾರೆ

ಪೂಜಾರ ಇದುವರೆಗೂ ಟೆಸ್ಟ್‍ನಲ್ಲಿ 5903 ರನ್ ಗಳಿಸಿದ್ದು ಸಿಡ್ನಿ ಟೆಸ್ಟ್‍ನ ಎರಡೂ ಇನ್ನಿಂಗ್ಸ್‍ಗಳಿಂದ 97 ರನ್ ಗಳಿಸಿದರೆ ವೇಗವಾಗಿ 6 ಸಾವಿರ ರನ್ ಗಳಿಸಿದ ವಿಶ್ವದ 6ನೇ ಆಟಗಾರರಾಗಿ ಗುರುತಿಸಿಕೊಳ್ಳಲಿದ್ದಾರೆ.

ಲಿಯಾನ್- 400:
ಆಸ್ಟ್ರೇಲಿಯಾದ ಸ್ಟಾರ್ ಸ್ಪಿನ್ನರ್ ನಥನ್ ಲಿಯಾನ್ ಅವರು ಟೆಸ್ಟ್ ನಲ್ಲಿ ಈಗಾಗಲೇ 394 ವಿಕೆಟ್ ಕಬಳಿಸಿದ್ದು ಸಿಡ್ನಿ ಟೆಸ್ಟ್‍ನಲ್ಲಿ 6 ವಿಕೆಟ್‍ಗಳನ್ನು ಕಬಳಿಸುವ ಮೂಲಕ 400 ವಿಕೆಟ್ ಗಳಿಸುವ ಮೂಲಕ ಆಸೀಸ್ ಪರ 400 ವಿಕೆಟ್ ಗಳಿಸಿದ 3ನೆ ಬೌಲರ್ ಆಗಿ ಗುರುತಿಸಿಕೊಳ್ಳಲಿದ್ದಾರೆ, ಇದಕ್ಕೂ ಮುನ್ನ ಶೇನ್‍ವಾರ್ನ್ ( 708 ವಿಕೆಟ್) ಹಾಗೂ ಗ್ಲೇನ್‍ಮೆಕ್‍ಗ್ರಾತ್( 563 ವಿಕೆಟ್) ಕಬಳಿಸಿದ್ದಾರೆ.

ಸೆಹ್ವಾಗ್ ದಾಖಲೆ ಮೆಟ್ಟಿನಿಲ್ಲಲು ರಹಾನೆ ಕಾತರ:
ಅಡಿಲೇಡ್ ಟೆಸ್ಟ್‍ನಲ್ಲಿ ಹೀನಾಯ ಸೋಲು ಕಂಡಿದ್ದ ಭಾರತ ತಂಡಕ್ಕೆ ಗೆಲುವಿನ ಚೈತನ್ಯ ಮೂಡಿಸಿರುವ ನಾಯಕ ಅಜೆಂಕಾ ರಹಾನೆ ಸಿಡ್ನಿ ಪಂದ್ಯವನ್ನೂ ಗೆಲ್ಲುವ ಹುಮ್ಮಸ್ಸಿನ ನಡುವೆ ವೀರೇಂದ್ರ ಸೆಹ್ವಾಗ್ ಮಾಡಿರುವ ಶತಕಗಳ ದಾಖಲೆಯನ್ನು ಮೆಟ್ಟಿನಿಲ್ಲುವತ್ತಲೂ ಗಮನ ಹರಿಸಿದ್ದಾರೆ.

ವೀರೇಂದ್ರ ಸೆಹ್ವಾಗ್ ಆಸ್ಟ್ರೇಲಿಯಾ ವಿರುದ್ಧ 3 ಶತಕ (195,155,151 ರನ್),ಗಳಿಸಿದ್ದು, ರಹಾನೆ 2 (147,112ರನ್)ಶತಕಗಳನ್ನು ಬಾರಿಸಿದ್ದಾರೆ, ಸಿಡ್ನಿ ಟೆಸ್ಟ್‍ನಲ್ಲಿ ರಹಾನೆ ಮತ್ತೊಂದು ಶತಕ ಗಳಿಸಿದರೆ ಸೆಹ್ವಾಗ್ ದಾಖಲೆಯನ್ನು ಸಮಬಲಗೊಳಿಸಬಹುದು, ಎರಡೂ ಇನ್ನಿಂಗ್ಸ್‍ನಲ್ಲೂ ಶತಕ ಗಳಿಸಿದರೆ ಅವರ ದಾಖಲೆಯನ್ನು ಮೆಟ್ಟಿನಿಲ್ಲಬಹುದು.


Spread the love

About Laxminews 24x7

Check Also

ಕ್ಯಾನ್ಸರ್‌ ರೋಗಿಗಳಿಗೆ ಸಿಹಿಸುದ್ದಿ: 72 ಲಕ್ಷ ರೂ. ನ Cancer ಔಷಧ ಇನ್ಮುಂದೆ 3 ಲಕ್ಷಕ್ಕೆ ಸಿಗುತ್ತೆ

Spread the love ನವದೆಹಲಿ : ಕ್ಯಾನ್ಸರ್‌ ರೋಗಿಗಳಿಗೆ ಝೈಡಸ್‌ ಕಂಪನಿ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಹೌದು 72 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ