Breaking News

ಬೆಳಗಾವಿಯಲ್ಲಿ ಖಾಕಿ ಆರ್ಭಟ: ಮದ್ಯದ ಮಾಫಿಯಾ, ಬೈಕ್ ಕಳ್ಳರು ಹಾಗೂ ಮಾದಕ ವ್ಯಸನಿಗಳ ವಿರುದ್ಧ ಸರಣಿ ದಾಳಿ!

Spread the love

ಬೆಳಗಾವಿಯಲ್ಲಿ ಖಾಕಿ ಆರ್ಭಟ: ಮದ್ಯದ ಮಾಫಿಯಾ, ಬೈಕ್ ಕಳ್ಳರು ಹಾಗೂ ಮಾದಕ ವ್ಯಸನಿಗಳ ವಿರುದ್ಧ ಸರಣಿ ದಾಳಿ!
ಬೆಳಗಾವಿ ಪೊಲೀಸರು ನಗರದ ವಿವಿಧೆಡೆ ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಏಳು ಮಂದಿಯನ್ನು ಬಂಧಿಸಿದ್ದಾರೆ. ಮದ್ಯ ಸಾಗಾಟ, ಮಟಕಾ ಜಜೂಜು ಹಾಗೂ ಮಾದಕ ವ್ಯಸನಿಗಳ ವಿರುದ್ಧ ಸಮರ ಸಾರಿದ್ದಾರೆ.
ಬೆಳಗಾವಿ ನಗರದ ಉದ್ಯಮಬಾಗ, ಮಾರಿಹಾಳ, ಹಿರೇಬಾಗೇವಾಡಿ ಮತ್ತು ತಿಲಕವಾಡಿ ಠಾಣಾ ವ್ಯಾಪ್ತಿಯಲ್ಲಿ ಶನಿವಾರದಂದು ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಉದ್ಯಮಬಾಗದಲ್ಲಿ ಗೋವಾ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿ 15 ಲಕ್ಷ ಮೌಲ್ಯದ ಕಿಯಾ ಕಾರನ್ನು ಜಪ್ತಿ ಮಾಡಲಾಗಿದೆ. ಅತ್ತ ಮಾರಿಹಾಳದಲ್ಲಿ ಮಟಕಾ ದಂಧೆಕೋರನಿಗೆ ಬಲೆ ಬೀಸಿದರೆ, ಇತ್ತ ಸಿಸಿಬಿ ಪೊಲೀಸರು 20ಕ್ಕೂ ಹೆಚ್ಚು ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿ ಸಂಜು ಮೆಖಳನನ್ನು ಸೆರೆಹಿಡಿದು, ಸುಮಾರು 2.78 ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾದಕ ದ್ರವ್ಯ ಮುಕ್ತ ನಗರ ನಿರ್ಮಾಣದ ಉದ್ದೇಶದಿಂದ ಹಿರೇಬಾಗೇವಾಡಿ ಮತ್ತು ತಿಲಕವಾಡಿ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ನಾಲ್ವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಂಧಿಸಿದ್ದಾರೆ. ಒಟ್ಟು 6 ಪ್ರಕರಣಗಳಲ್ಲಿ 7 ಆರೋಪಿತರನ್ನು ಜೈಲಿಗಟ್ಟಲಾಗಿದ್ದು, ಸುಮಾರು 17.8 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ. ಪೊಲೀಸ್ ಆಯುಕ್ತರು ಈ ತಂಡದ ಯಶಸ್ವಿ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದು, ನಗರದಲ್ಲಿ ಅಪರಾಧ ತಡೆಗೆ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.

Spread the love

About Laxminews 24x7

Check Also

ಬೆಳಗಾವಿಯಲ್ಲಿ ಶ್ರೀ ಸಮಾದೇವಿ ಜನ್ಮೋತ್ಸವ ಸಂಭ್ರಮ:

Spread the love ಬೆಳಗಾವಿಯಲ್ಲಿ ಶ್ರೀ ಸಮಾದೇವಿ ಜನ್ಮೋತ್ಸವ ಸಂಭ್ರಮ: ಭಕ್ತಿಭಾವದ ಪಲ್ಲಕ್ಕಿ ಉತ್ಸವಕ್ಕೆ ಅದ್ಧೂರಿ ಚಾಲನೆ! ಕುಂದಾನಗರಿ ಬೆಳಗಾವಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ