ಸವದತ್ತಿ; ದಾನವೀರ ಶರಣ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ವರ್ಷದ ಜಯಂತ್ಯೋತ್ಸವ ಆಚರಣೆ
ಧಾರವಾಡದ ಮುರುಗಾ ಮಠದ ಪರಮಪೂಜ್ಯ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ನಾಗನೂರು ರುದ್ರಾಕ್ಷಿ ಮಠದ ಪರಮ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು,ಸವತ್ತಿ ಮೂಲಿಮಠದ ಪರಮಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸುಳ್ಳದ ಉಮಾಚಂದ್ರ ಮಂಗಲ ಕಾರ್ಯಾಲಯ, ಸವದತ್ತಿಯಲ್ಲಿ ಜರುಗಿದ ಶ್ರೀ ಲಿಂಗರಾಜ ದೇಸಾಯಿ ಅವರ 165ನೇ ಜಯಂತ್ಯೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದೆ.
ತ್ಯಾಗ, ಸೇವೆ, ಶಿಕ್ಷಣ, ನೀರಾವರಿ ಮತ್ತು ಕೃಷಿ ಕ್ಷೇತ್ರಗಳಲ್ಲಿ ಲಿಂಗರಾಜ ದೇಸಾಯಿ ಅವರ ಮಹತ್ವದ ಕೊಡುಗೆಗಳನ್ನು ಭಕ್ತಿಯಿಂದ ಸ್ಮರಿಸಿದೆ. ಪೂಜ್ಯ ಹಾನಗಲ್ಲ ಕುಮಾರ ಸ್ವಾಮಿಗಳೊಂದಿಗೆ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯನ್ನು ಸ್ಥಾಪಿಸುವ ಮೂಲಕ ಸಮಾಜದ ಅಭಿವೃದ್ದಿಗೆ ಅವರ ಮಹತ್ವದ ಪಾತ್ರ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದೆ.
ಇದೇ ವೇಳೆ ಸಿರಸಂಗಿ ಲಿಂಗರಾಜ ದೇಸಾಯಿ ಅವರ ಕುರಿತಾದ ‘ಸಿರಸಂಗಿ ಸಂಸ್ಥಾನ: ಒಂದು ಅಧ್ಯಯನ’ ಗ್ರಂಥವನ್ನು ಹಾಗೂ ದಿನದರ್ಶಿಯನ್ನು ಬಿಡುಗಡೆಗೊಳಿಸಲಾಯಿತು.
ಶಾಸಕರುಗಳಾದ ಶ್ರೀ ವಿಶ್ವಾಸ್ ವೈದ್ಯ, ಶ್ರೀ ಬಾಬಾ ಸಾಹೇಬ್ ಪಾಟೀಲ್, ಶ್ರೀ ಕೋನರೆಡ್ಡಿ, ಸಮಾಜ ಬಾಂಧವರು, ಲಿಂಗರಾಜರ ಅಭಿಮಾನಿ ಬಳಗ ಸೇರಿದಂತೆ ನೂರಾರು ಜನ ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
#sirasangilingarajaru
Laxmi News 24×7