ಉಗಾರ ಲಯನ್ಸ್ ಕ್ಲಬ್ ಶಾಖೆಗೆ ಬೆಳಗಾವಿ ಝೊನಲ್ ಚೇರ್ಮನ್ ಮಲ್ಲಾರಿ ದಿವಟೆ ಭೇಟಿ.
ಸಮಾಜದ ವಿವಿಧ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ಇನ್ನೊಬ್ಬರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಉಗಾರದ ಲಯನ್ಸ್ ಕ್ಲಬ್ ಶಾಖೆ ಸದಸ್ಯರ ಸೇವೆ ಇನ್ನುಳಿದ ಶಾಖೆಗೆ ಮಾದರಿಯಾಗಿದೆ. ಎಂದು ಲಯನ್ಸ್ ಕ್ಲಬ್ ಬೆಳಗಾವಿ ಜಿಲ್ಲಾ ಝೋನಲ್ ಚೇರ್ಮನ್ ಮಲ್ಲಾರಿ ದಿವಟೆ ಉಗಾರದಲ್ಲಿ ಹೇಳಿದರು.
ಬುಧವಾರ ಸಂಜೆ ಉಗಾರದ ಲಯನ್ಸ್ ಕ್ಲಬ್ ಶಾಖೆಗೆ ಭೇಟಿ ನೀಡಿ ಶಾಖೆಯ ಪ್ರಗತಿ ಬಗ್ಗೆ ಮಾಹಿತಿ ಪಡೆದು ಮಲ್ಲಾರಿ ಡಿವಟೆ ಸಂತಸ ವ್ಯಕ್ತಪಡಿಸಿದರು. ಲಯನ್ಸ್ ಕ್ಲಬ್‌ನ ಕೆಲ ಯುವ ಸದಸ್ಯರು ಸಮಾಜ ಸೇವೆ ಗಿಂತ ಮೊಬೈಲ್‌ದಲ್ಲಿ ಹೆಚ್ಚಿನ ಕಾಲಹರಣ ಮಾಡಲು ಮುಂದಾಗಿದ್ದಾರೆ. ಇದನ್ನು ಬಿಟ್ಟು ಯುವಕರು ಆಸಕ್ತಿವಹಿಸಿ ಸೇವೆ ಸಲ್ಲಿಸಿರಿ ಎಂದು ಮಲ್ಲಾರಿ ದಿವಟೆ ಕಿವಿಮಾತ ಹೇಳಿದರು.
ಉಗಾರ ಲಯನ್ಸ್ ಕ್ಲಬ್ ಶಾಖೆ ಅಧ್ಯಕ್ಷ ಡಾಕ್ಟರ್ ಸಂಜಯ್ ಸಾಬಡೆ ಸಭೆಯಲ್ಲಿ ಮಾಹಿತಿ ನೀಡುವಾಗ ಕಳೆದ ಆರು ತಿಂಗಳದಲ್ಲಿ ಬೇರೆ ಬೇರೆ ಕಾರ್ಯಗಳು ಕೈಗೊಂಡಿದ್ದೇವೆ ಅದರಲ್ಲಿ ಆರೋಗ್ಯ ತಪಾಸಣೆ, ನೇತೃ ತಪಾಸಣೆ ಶಿಬಿರಗಳನ್ನು ಹಮ್ಮಿಕೊಂಡು ಉಪಚ್ಚರಿಸಲಾಗಿದೆ.
ಕುಡುಚಿಯಲ್ಲಿ ಡಾಕ್ಟರ್ ಸುಭಾಂಗಿ ಕುಲಕರ್ಣಿ ಇವರಿಂದ ಮಹಿಳೆಯರ ಆರೋಗ್ಯ ತಪಾಸಣೆ ಹಾಗೂ ಮಾರ್ಗದರ್ಶನ ನೀಡಲಾಯಿತು, ಅಲ್ಲದೆ ಕಿವಿಗಳ ಕಾಯಿಲೆಗಳ ಬಗ್ಗೆ ೧೧೦ ಜನರ ತಪಾಸಣೆ ಮಾಡಿ ಯಂತ್ರಗಳು ನೀಡಲಾಯಿತು.
ವಿದ್ಯಾರ್ಥಿಗಳಿಗೆ ಆಹಾರಗಳ ಕೀಟ ನೀಡಲಾಯಿತು. ಅದರೊಂದಿಗೆ ಅನೇಕ ಬಡ ಕುಟುಂಬಗಳಿಗೆ ಸಹಾಯ ಸಹಕಾರ ನೀಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಟಿಳಕವಾಡಿ ಲಯನ್ಸ್ ಕ್ಲಬ್‌ನ ಸದಸ್ಯ ಪ್ರಕಾಶ್ ಮತ್ತು ರಮೇಶ್ ಅನಿಗೇರಿ, ಉಗಾರ್ ಲಯನ್ಸ್ ಕ್ಲಬ್ಬಿನ ಕಾರ್ಯದರ್ಶಿ ಶುಭಾಷ್ ಹೆಬ್ಬಳ್ಳಿ, ಆನಂದ್ ಕುಂಬಾರ್, ಮಾಜಿ ಅಧ್ಯಕ್ಷ ರಾಹುಲ್ ಶಾಹ, ಡಾಕ್ಟರ್ ಬಿ.ಎ.ಪಾಟೀಲ್, ಜಗದೀಶ್ ಪಟವರ್ಧನ, ಬಿ.ಎನ್.ಚೌಗುಲೆ, ರಾಜೇಂದ್ರ ಪೊತದಾರ, ಮನೋಜ್ ಮಾಲಗತ್ತೆ, ಸಿ.ಎ ಶ್ರೀಕಾಂತ್ ಭಟ್, ಆರ್.ಜಿ.ಕಿಲ್ಲೆದಾರ್, ಪಾಯಪ್ಪಾ ಕೂಡುವಕ್ಕಲಗಿ, ಡಾಕ್ಟರ್ ಅಮೊಲ್ ಸರಡೆ, ಡಾಕ್ಟರ್ ಮಹಾದವಲ ಬೊಮಾಜ, ಡಾಕ್ಟರ್ ಮನೋಜ್ ಮಿಂಣಚಿ, ಪ್ರಾಚಾರ್ಯ ಪಿ.ಬಿ.ಕುಲಕರ್ಣಿ, ಡಾಕ್ಟರ್ ಮೋಹನ್ ಕಟಗೇರಿ ಸೇರಿದಂತೆ ಅನೇಕರು ಇದ್ದರು.
Laxmi News 24×7