ನಂದಗಡ ಪೋಲಿಸ್ ಠಾಣೆಗೆ ನೂತನ ಎಸ್ ಪಿ ಕೆ ರಾಮರಾಜ್ಯನ್ ಭೇಟಿ ನೀಡಿ ಪರಿಶೀಲನೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು
ಆಂಕರ್ -ಖಾನಾಪೂರ ತಾಲೂಕಿನ ನಂದಗಡ ಪೋಲಿಸ್ ಠಾಣೆಗೆ ಬೆಳಗಾವಿ ಜಿಲ್ಲಾ ನೂತನ ಎಸ್ ಪಿ ಕೆ.ರಾಮರಾಜ್ಯನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು
ಈ ಸಂದರ್ಭದಲ್ಲಿ ನಂದಗಡ ಪೋಲಿಸ್ ಇನ್ಸ್ಪೆಕ್ಟರ್ ರವಿಕುಮಾರ್ ಧರ್ಮಟ್ಟಿ ಅವರು ಗೌರವ ವಂದನೆ ಸಲ್ಲಿಸಿದರು ತದನಂತರದಲ್ಲಿ ಗೌರವ ವಂದನೆ ಸ್ವೀಕರಿಸಿದ ಎಸ್ ಪಿ ಸಾಹೇಬರು ಪೋಲಿಸ್ ಠಾಣೆಯ ಆವರಣ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸಿಬಂದಿಗಳಿಗೆ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು
ನಂತರದಲ್ಲಿ ಪೋಲಿಸ್ ಠಾಣೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ಸ್ನೇಹಿ ಕಾರ್ಯ ಮಾಡಿ ತಮ್ಮ ಪ್ರಯಾಣ ಬೆಳೆಸಿದರು ಈ ಸಂದರ್ಭದಲ್ಲಿ ಬೈಲಹೊಂಗಲ ಡಿವೈಎಸ್ಪಿ ಡಾಕ್ಟರ್ ವೀರಯ್ಯ ಹಿರೇಮಠ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Laxmi News 24×7