Breaking News

ಮರ್ಯಾದೆ ಹೆಸರಿನಲ್ಲಿ ದೌರ್ಜನ್ಯ ತಡೆಯಲು ರಾಜ್ಯ ಸರ್ಕಾರ ಪ್ರತ್ಯೇಕ ಮಸೂದೆ ಜಾರಿಗೆ ತರುವ ಅವಶ್ಯಕತೆ ಇಲ್ಲ- ಗೋವಿಂದ ಕಾರಜೋಳ…!

Spread the love

ಮರ್ಯಾದೆ ಹೆಸರಿನಲ್ಲಿ ದೌರ್ಜನ್ಯ ತಡೆಯಲು ರಾಜ್ಯ ಸರ್ಕಾರ ಪ್ರತ್ಯೇಕ ಮಸೂದೆ ಜಾರಿಗೆ ತರುವ ಅವಶ್ಯಕತೆ ಇಲ್ಲ- ಗೋವಿಂದ ಕಾರಜೋಳ…!May be an image of one or more people, people studying and text
ಮರ್ಯಾದೆ ಹೆಸರಿನಲ್ಲಿ ದೌರ್ಜನ್ಯ ತಡೆಯಲು ರಾಜ್ಯ ಸರ್ಕಾರ ಪ್ರತ್ಯೇಕ ಮಸೂದೆ ಜಾರಿಗೆ ತರುವ ಅವಶ್ಯಕತೆ ಇಲ್ಲ. ಇಂತಹ ಘಟನೆ ನಡೆಯದಂತೆ ಸರ್ಕಾರ ಕ್ರಮಕೈಗೊಳ್ಳಬೇಕು. ಹೊಸ ಕಾನೂನು ತರುವುದಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.May be an image of dais and text that says "TOBAY INDIA TODA GNT ZEE ANS TANS wire DAILY SALAR छ ゅ一 54 BHARAT"
ಮೃತ ಮಾನ್ಯ ದೊಡ್ಡಮನಿ ಅವರ ಗ್ರಾಮವಾದ ಇನಾಂ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ಬಳಿ‌ಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಲಿತರ ದೌರ್ಜನ್ಯ ತಡೆಗೆ ಅನೇಕ ಕಾನೂನುಗಳಿವೆ. ಜನರಿಗೆ ರಕ್ಷಣೆ ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಹೊಸ ಮಸೂದೆ ತಂದರೆ‌ ನೂರಾ ಎಂಟರಲ್ಲಿ ಇದೊಂದು ಕಾನೂನು ಆಗಲಿದೆ ಹೊರತು ಅದರಿಂದ ಏನು ಪ್ರಯೋಜನವಾಗಲ್ಲ ಎಂದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಮಾಜವೇ ತಲೆ ತಗ್ಗಿಸುವಂತಹ ಹತ್ಯೆಯಾಗಿದೆ. ಸಮಾಜ ಬಹಳ ಮುಂದುವರೆದಿದ್ದು, ಸಮಾಜವನ್ನು ಅರಿಯದವರು ಇಂತಹ ಕೃತ್ಯ ಮಾಡುತ್ತಾರೆ. ಇದು ಅಮಾನವೀಯ ಘಟನೆಯಾಗಿದೆ‌‌ ಎಂದು ತಿಳಿಸಿದರು.
ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಬದುಕಿದ ನಾಡಿದು. ಬಸವಣ್ಣನವರು ಜಾತಿ ರಹಿತ ಸಮಾಜ ನಿರ್ಮಿಸಿದ್ದರು. ಅಷ್ಟಾಗಿಯು ಇಂತಹ ಘಟನೆ ನಡೆಯಬಾರದಿತ್ತು ಎಂದು ಹೇಳಿದರು. ಹೊಸ ಕಾನೂನು ಅವಶ್ಯಕತೆ ಇಲ್ಲ.‌ಇದ್ದ ಕಾನೂನು‌ ಪರಿಣಾಮಕಾರಿಯಾಗಿ ಜಾರಿಯಾಗಲಿ ಎಂದರು.

Spread the love

About Laxminews 24x7

Check Also

ಮಕ್ಕಳಿಂದ ಅಪ್ಪ ಅಮ್ಮನ ಪಾದಪೂಜೆ

Spread the loveಶಿವಮೊಗ್ಗ: ತಂದೆ – ತಾಯಿ ಪ್ರತ್ಯಕ್ಷ ದೇವರು. ಹೆತ್ತವರ ಮೇಲೆ ಮಕ್ಕಳಿಗೆ ಗೌರವದ ಜೊತೆಗೆ ಪ್ರೀತಿ ಬಾಂಧವ್ಯ ಬೆಸೆಯುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ