ಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ ಉದ್ಯಾನವನ ಮತ್ತು ಆಟದ ಸಾಮಗ್ರಿಗಳ ಉದ್ಘಾಟನೆಯನ್ನು ನೆರವೇರಿಸಿ, ಮಾತನಾಡಿದೆ.
ಪರಿಸರ ಸಂರಕ್ಷಣೆ, ಮಕ್ಕಳ ಮನೋರಂಜನೆ ಹಾಗೂ ಸಾರ್ವಜನಿಕರ ವಿಶ್ರಾಂತಿಗೆ ನೆರವಾಗುವ ಈ ಉದ್ಯಾನವನವು ಸಮಾಜಕ್ಕೆ ಉಪಯುಕ್ತವಾಗಲಿ. ಸಮೂಹ ಪ್ರಯತ್ನದಿಂದ ನಿರ್ಮಿತವಾದ ಇಂತಹ ಕಾರ್ಯಗಳು ಮುಂದಿನ ಪೀಳಿಗೆಗೆ ಹಸಿರು ಭವಿಷ್ಯವನ್ನು ನೀಡಲಿ ಎಂದು ಈ ಸಂದರ್ಭದಲ್ಲಿ ಆಶಯ ವ್ಯಕ್ತಪಡಿಸಿದೆ.
ಅಥಣಿಯ ಶೆಟ್ಟರ ಮಠದ ಶ್ರೀ ಮ.ನಿ.ಪ್ರ. ಮರುಳಸಿದ್ಧ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿದ್ದರು.
ಮಾಜಿ ಶಾಸಕರುಗಳಾಸ ಶ್ರೀ ಮಹೇಶ ಕುಮಟಳ್ಳಿ, ಶ್ರೀ ಶಹಜಹಾನ ಡೊಂಗರಗಾವ ಮುಖಂಡರಾದ ಶ್ರೀ ಗಜಾನನ ಮಂಗಸೂಳಿ, ರೋಟರಿ ಅಧ್ಯಕ್ಷ ಶ್ರೀ ಸಚಿನ ದೇಸಾಯಿ, ಕಾರ್ಯದರ್ಶಿ ಶ್ರೀ ಶೇಖರ ಕೋಲಾರ,
ಶ್ರೀ ಸಂತೋಷ ಬೊಮ್ಮಣ್ಣವರ, ಶ್ರೀ ಆನಂದ ಟೊಣಪಿ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ಶ್ರೀ ಜ್ಯೋತಿಲಿರ್ಂಗ ದೇವಸ್ಥಾನ ಅಭಿವೃದ್ಧಿ ಸಮಿತಿಯವರು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
Laxmi News 24×7