ಗಂಡನ ಸಾವಿನಿಂದ ಹೊರಬರಲಾರದೆ ಸಾವಿಗೆ ಶರಣಾದ ಮಹಿಳೆ
ಇಸ್ರೇಲ್‌ನಲ್ಲಿ ಕೇರ್ ಟೇಕರ್ ಆಗಿದ್ದ ಕೇರಳ ಮೂಲದ ಜಿನೇಶ್ ಅನುಮಾನಾಸ್ಪದವಾಗಿ ಮೃತಪಟ್ಟ ಒಂದು ತಿಂಗಳಲ್ಲೇ, ಆಘಾತ ತಾಳಲಾರದೆ ಆತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಬುಧವಾರ
ನಡೆದಿದೆ. ದಂಪತಿಯ ಸಾವಿನಿಂದ ಹತ್ತು ವರ್ಷದ ಪುತ್ರಿ ಈಗ ಅನಾಥಳಾಗಿದ್ದು, ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ. ರೇಷ್ಮಾಗೆ ಕೌನ್ಸಲಿಂಗ್ ಮಾಡಲಾಗಿತ್ತು. ಆದರೂ ಆಘಾತದಿಂದ ಹೊರ ಬರಲು ಸಾಧ್ಯವಾಗಿರಲಿಲ್ಲ. ಚೇತರಿಸಿಕೊಳ್ಳದ ರೇಷ್ಮಾ ಬದುಕು ಅಂತ್ಯಗೊಳಿಸಿದ್ದಾರೆ.
Laxmi News 24×7