Breaking News

ಮಕ್ಕಳಿಂದ ಅಪ್ಪ ಅಮ್ಮನ ಪಾದಪೂಜೆ

Spread the love

ಶಿವಮೊಗ್ಗ: ತಂದೆ – ತಾಯಿ ಪ್ರತ್ಯಕ್ಷ ದೇವರು. ಹೆತ್ತವರ ಮೇಲೆ ಮಕ್ಕಳಿಗೆ ಗೌರವದ ಜೊತೆಗೆ ಪ್ರೀತಿ ಬಾಂಧವ್ಯ ಬೆಸೆಯುವ ದೃಷ್ಟಿಯಿಂದ ಅನುಪಿನಕಟ್ಟೆಯ ರಾಮಕೃಷ್ಣ ವಸತಿ ಶಾಲೆಯಲ್ಲಿ ಮಕ್ಕಳಿಂದ ಹೆತ್ತವರಿಗೆ ಪಾದಪೂಜೆಯನ್ನು ಮಾಡಿಸುವ ಪದ್ಧತಿ ರೂಢಿಯಲ್ಲಿದೆ.

ತಮ್ಮ‌ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯಬೇಕೆಂದು ಪೋಷಕರು ಮಕ್ಕಳನ್ನು ವಸತಿ ಶಾಲೆಗೆ ದಾಖಲಿಸುತ್ತಾರೆ. ಇದರಿಂದ ಮಕ್ಕಳ ಹಾಗೂ ಪೋಷಕರ ನಡುವೆ ಬಿರುಕು ಬರಬಾರದು ಹಾಗೂ ಪೋಷಕರ ಮೇಲಿನ ಪ್ರೀತಿ ಹಾಗೆ ಮುಂದುವರೆಯಬೇಕೆಂದು ರಾಮಕೃಷ್ಣ ವಸತಿ ಶಾಲೆಯಲ್ಲಿ ಪ್ರತಿ ವರ್ಷ ಹೊಸ ವರ್ಷದ ದಿನ ಜನವರಿ‌ 1 ರಂದು ವಿದ್ಯಾರ್ಥಿಗಳಿಂದ ಪೋಷಕರ ಪಾದಪೊಜೆ ನಡೆಸಲಾಗುತ್ತದೆ. ಈ ಪಾದಪೊಜೆಗೆ ತಂದೆ ತಾಯಿ ಕಡ್ಡಾಯವಾಗಿ ಭಾಗವಹಿಸುತ್ತಾರೆ.

ದೇವರಿಗೆ ಹೇಗೆ ಪೂಜೆ ಸಲ್ಲಿಸುತ್ತಾರೋ ಅದೇ ರೀತಿ ಇಲ್ಲಿ ಪೂಜೆ ಸಲ್ಲಿಸುತ್ತಾರೆ. ಪೂಜೆಯ ಎಲ್ಲಾ ಸಾಮಾಗ್ರಿಗಳನ್ನು ನೀಡಲಾಗುತ್ತದೆ. ಮೊದಲು ತಟ್ಟೆಯಲ್ಲಿ ಪೋಷಕರ ಕಾಲುಗಳನ್ನು ಸ್ವಚ್ಛವಾಗಿ ತೊಳೆಯುತ್ತಾರೆ. ನಂತರ ವಿಭೂತಿ ಅರಿಶಿಣ ಕುಂಕುಮ ಹಚ್ಚುತ್ತಾರೆ. ಪಾದಗಳಿಗೆ ಹೂವುಗಳನ್ನಿಟ್ಟು ಮಂತ್ರದ ಸಮೇತ ಊದುಬತ್ತಿಯಿಂದ ಪೂಜೆ ಮಾಡುತ್ತಾರೆ. ನಂತರ ಪೋಷಕರಿಂದ ಆಶೀರ್ವಾದ ಪಡೆಯುತ್ತಾರೆ. ಬಳಿಕ ಪೋಷಕರು ತಮ್ಮ ಮಕ್ಕಳು ಚೆನ್ನಾಗಿ ಓದಲಿ ಎಂದು ಕಂಕಣ ಕಟ್ಟಿ ಹಾರೈಸುತ್ತಾರೆ. ಇಲ್ಲಿಗೆ ಪಾದಪೊಜೆ ಮುಕ್ತಾಯವಾಗುತ್ತದೆ. ನಂತರ ಶಾಲೆಯಲ್ಲಿ ಪಾಠ, ಆಟೋಟಗಳಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಬಹುಮಾನ ನೀಡಲಾಗುತ್ತದೆ.

Spread the love

About Laxminews 24x7

Check Also

ತಡರಾತ್ರಿ ಸುಖಾಸುಮ್ಮನೆ ಓಡಾಡುತ್ತಿದ್ದ 200ಕ್ಕೂ ಅಧಿಕ ಮಂದಿಯನ್ನು ಹಿಡಿದು ವಾರ್ನ್ ಮಾಡಿದ ಸಿಸಿಬಿ

Spread the loveಬೆಂಗಳೂರು : ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ತಡರಾತ್ರಿ ಸುಖಾಸುಮ್ಮನೆ ಅಡ್ಡಾದಿಡ್ಡಿ ಓಡಾಡುವ ಯುವಕರ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಸಿಸಿಬಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ