ಗುರುನಾಥ ಕಡಬೂರು ಅವರಿಗೆ ಮಾಧ್ಯಮರತ್ನ ರಾಜ್ಯ ಪ್ರಶಸ್ತಿ: ಪತ್ರಕರ್ತರಿಂದ ಸನ್ಮಾನ
ಗುರುನಾಥ ಕಡಬೂರು ಅವರಿಗೆ ಮಾಧ್ಯಮರತ್ನ ರಾಜ್ಯ ಪ್ರಶಸ್ತಿ
ಪ್ರೇಮಜಿ ಫೌಂಡೇಶನ್ ಅಚೀವರ್ಸ್ ಅವಾರ್ಡ್’ಗೆ ಆಯ್ಕೆ
ಬೆಳಗಾವಿ ವಾರ್ತಾ ಭವನದಲ್ಲಿ ಪತ್ರಕರ್ತರಿಂದ ಅದ್ಧೂರಿ ಸನ್ಮಾನ
ಮಾಧ್ಯಮ ರಂಗದ ಅನುಪಮ ಸೇವೆಗೆ ಸಿಕ್ಕ ಗೌರವ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಗುರುನಾಥ ಕಡಬೂರು ಅವರಿಗೆ ‘ಪ್ರೇಮಜಿ ಅಚೀವರ್ಸ್ ಅವಾರ್ಡ್ – 2025’ರ ಅಂಗವಾಗಿ ‘ಮಾಧ್ಯಮರತ್ನ’ ರಾಜ್ಯ ಪ್ರಶಸ್ತಿ ಲಭಿಸಿದೆ. ಎಲೆಮರೆಯ ಕಾಯಿಯಂತೆ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸುತ್ತಿರುವ ಸಾಧಕರನ್ನು ಗುರುತಿಸುವ ಪ್ರೇಮಜಿ ಫೌಂಡೇಶನ್, ಗುರುನಾಥ ಕಡಬೂರು ಅವರ ಮಾಧ್ಯಮ ರಂಗದ ಸಾಧನೆಯನ್ನು ಪರಿಗಣಿಸಿ ಈ ಗೌರವ ನೀಡಿದೆ.
ಮಾಧ್ಯಮ ರಂಗದಲ್ಲಿ ಹಲವಾರು ಸಾಧನೆಯನ್ನು ನೀಡಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರು ಗುರುನಾಥ ಕಡಬೂರು ಪ್ರೇಮಜಿ ಅಚಿವರ್ಸ್ ಅವಾರ್ಡ್ ಪಡೆದುಕೊಂಡ ಹಿನ್ನಲೆಯಲ್ಲಿ ಅವರಿಗೆ ಇತ್ತೀಚಿಗೆ ಪ್ರೇಮಜಿ ಫೌಂಡೇಶನ್ ಹಾಗೂ ಪಿ ಜಿ ಮೀಡಿಯಾ ಕಮ್ಯುನಿಕೇಶನ್, ಮಾಧ್ಯಮ ಮತ್ತು ಯುನಿವರ್ಸಲ್ ಡಿಜಿಟಲ್ ವಾಹಿನಿ ಆಶ್ರಯದಲ್ಲಿ ಪ್ರೇಮಜಿ ಅಚಿವರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಗುರುನಾಥ ಕಡಬೂರು ಅವರಿಗೆ ಮಾಧ್ಯಮರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ, ಇಂದು ಬೆಳಗಾವಿಯ ವಾರ್ತಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮತ್ತು ನಗರದ ಪತ್ರಕರ್ತರು ಸೇರಿ ಕಡಬೂರು ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪತ್ರಿಕಾ ಮಿತ್ರರು ಹಾಗೂ ವಾರ್ತಾ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಹಾರೈಸಿದರು.
Laxmi News 24×7