Breaking News

ಹಿಂಡಲಗಾ ಜೈಲಿನಲ್ಲಿ 12 ಮೊಬೈಲ್, ಗಾಂಜಾ, ಚಾರ್ಜರ್ ಪತ್ತೆ, 5 ಪ್ರಕರಣ ದಾಖಲು

Spread the love

ಬೆಳಗಾವಿ: ಹಿಂಡಲಗಾ ಗ್ರಾಮದಲ್ಲಿರುವ ಇಲ್ಲಿನ ಕೇಂದ್ರ ಕಾರಾಗೃಹದ ಗೋಡೆಯ ಮೇಲಿಂದ ಕಿಡಿಗೇಡಿಯೋರ್ವ ಮೊಬೈಲ್, ಡ್ರಗ್ಸ್ ಎಸೆದಿರುವ ಪ್ರಕರಣಕ್ಕೆ ಡಿಐಜಿ ಟಿ.ಪಿ.ಶೇಷ, ನಗರ ಪೊಲೀಸ್​ ಆಯುಕ್ತ ಭೂಷಣ ಬೊರಸೆ ಅವರು ಪ್ರತಿಕ್ರಿಯಿಸಿದ್ದಾರೆ.

ಮೊಬೈಲ್​, ಡ್ರಗ್ಸ್​ ಎಸೆದಿರುವ ಸಿಸಿಟಿವಿ ವಿಡಿಯೋ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ನಗರ ಪೊಲೀಸ್ ಆಯುಕ್ತ‌ ಭೂಷಣ ಬೊರಸೆ ಅವರು ಜೈಲಿಗೆ ದೌಡಾಯಿಸಿದರು. ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಮಾಹಿತಿ ಕಲೆ ಹಾಕಿದರು. ಅಲ್ಲದೇ ಸಿಸಿಬಿ ಪೊಲೀಸರು ಕೂಡ ಪರಿಶೀಲನೆ ನಡೆಸಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಈ ಸಂಬಂಧ ಐದು ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೆ 12 ಮೊಬೈಲ್, 4 ಸಿಮ್ ಕಾರ್ಡ್, 1 ಚಾರ್ಜರ್, 5 ಚಾರ್ಜರ್ ಕೇಬಲ್, 1 ಅಡಾಪ್ಟರ್ ಪತ್ತೆ ಆಗಿವೆ. ಇದರ ಜೊತೆಗೆ 366 ಗ್ರಾಂ ಗಾಂಜಾ‌ ಸಿಕ್ಕಿದೆ. ಜೈಲಿನಲ್ಲಿ ಮೊಬೈಲ್, ಗಾಂಜಾ, ಚಾರ್ಜರ್​ಗಳು ಸಿಕ್ಕಿರುವ ಬಗ್ಗೆ ಡಿ.16, ಡಿ.17, ಡಿ.23, ಡಿ.29 ಮತ್ತು ಡಿ‌.31ರಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ‌ ಐದು ಪ್ರಕರಣಗಳು ದಾಖಲಾಗಿವೆ ಎಂದು ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.MOBILE DRUGS AT HINDALAG JAIL  BELAGAVI  ಹಿಂಡಲಗಾ ಜೈಲು  CRIME

ಈ ಎಲ್ಲಾ ಲೋಪದೋಷದ ಕುರಿತು ವಿವರವಾದ ಮಾಹಿತಿ ನೀಡುವಂತೆ ಬಂಧಿಖಾನೆ ಉತ್ತರ ವಲಯ ಐಜಿಪಿ ಟಿ.ಪಿ. ಶೇಷ, ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ವಿ. ಕೃಷ್ಣಮೂರ್ತಿ ಅವರಿಗೆ ಡಿಜಿಪಿ ಅಲೋಕ್​ ಕುಮಾರ ಸೂಚಿಸಿದ್ದಾರೆ. ಅಲ್ಲದೇ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರಿಂದಲೂ ಮಾಹಿತಿ ಪಡೆದಿದ್ದಾರೆ.

ಬಂಧಿಖಾನೆ ಉತ್ತರ ವಲಯ ಡಿಐಜಿ ಟಿ.ಪಿ. ಶೇಷ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, “ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು ಒಂದು ಅಥವಾ ಎರಡು ತಿಂಗಳ ಹಿಂದಿನದ್ದು. ಈ ಬಗ್ಗೆ ಈಗಾಗಲೇ ಕೇಸ್ ಕೂಡ ಮಾಡಿದ್ದೇವೆ. ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸಿಸಿಟಿವಿ ನಮ್ಮವರೇ ಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಡಿಜಿಯವರು ತನಿಖೆ ಮಾಡಿ ವರದಿ ನೀಡುವಂತೆ ಹೇಳಿದ್ದಾರೆ. ಕೆಎಸ್‌ಐಎಸ್​ಎಫ್ ಸಿಬ್ಬಂದಿಗಳದ್ದು ಮೇಲ್ನೋಟಕ್ಕೆ ಸ್ವಲ್ಪ ಮಟ್ಟಿನ ಕರ್ತವ್ಯಲೋಪ ಕಂಡುಬಂದಿದೆ. ಈಗಾಗಲೇ ಅವರಿಗೆ ಎಚ್ಚರಿಕೆ ಕೂಡ ನೀಡಲಾಗಿದೆ. ಬೇಜವಾಬ್ದಾರಿ ಕಂಡುಬಂದಿದೆ. ಡಿಜಿಯವರ ಸೂಚನೆ ಮೇರೆಗೆ ಮೊನ್ನೆ ದಿನ ಜೈಲು ತಪಾಸಣೆ ಮಾಡಿದ್ದೇವೆ. ಇಲ್ಲಿಯವರೆಗೆ ಹಿಂಡಲಗಾ ಜೈಲಿನಲ್ಲಿ 12 ಮೊಬೈಲ್, 4 ಸಿಮ್, 1 ಚಾರ್ಜರ್, 5 ಚಾರ್ಜರ್ ಕೇಬಲ್ ಸಿಕ್ಕಿವೆ. ಆದರೆ, ಮಾದಕ ವಸ್ತುಗಳು ಪತ್ತೆ ಆಗಿಲ್ಲ” ಎಂದರು.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ