ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರ ನನ್ನದ್ದು, ನಾನೇ ಕಟ್ಟಿ ಬೆಳೆಸಿದ ಕ್ಷೇತ್ರ. ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಆಗಿನ ಮುಖನೇ ಬೇರೆ ಈಗೀನ ಮುಖನೇ ಬೇರೆ. ನಾನು ಮುಂದಿನ ಬಾರಿ ಒಬ್ಬ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸುತ್ತೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಆಕೆಯ ಗಾಡ್ ಫಾದರ್ ಇಬ್ಬರೂ ಪ್ರಚಾರ ಪ್ರೀಯರು. ನಾವು ಪ್ರಚಾರ ಪ್ರಿಯನಲ್ಲ, ಸಾಮಾಜಿಕ ಜಾಲತಾಣದಲ್ಲಿ ಏನು ಬೇಕಾದರೂ ಬರೆದುಕೊಳ್ಳಬಹುದು. ಪ್ರಧಾನ ಮಂತ್ರಿ ಎಂದೂ ಬರೆದುಕೊಳ್ಳಬಹುದು. ಆದ್ರೆ ವಾಸ್ತವ ಸ್ಥಿತಿಯೇ ಬೇರೆಯಾಗಿದೆ. ಮಾದ್ಯಮ ಕ್ಷೇತ್ರದಿಂದ ತಿಸ್ಕರಿಸಲ್ಪಟ್ಟ ವ್ಯಕ್ತಿಯೊಬ್ಬನನ್ನು ಪಿಆರ್ ಓ ಮಾಡಿಕೊಂಡು ಅಪಪ್ರಚಾರದ ಫೋಸ್ಟ್ ಹಾಕಿಸುತ್ತಿದ್ದಾರೆ. ಗ್ರಾ.ಪಂ.ಚುನಾವಣೆಯಲ್ಲಿ ಗ್ರಾಮೀಣ ಮತಕ್ಷೇತ್ರದಲ್ಲಿ ಹೆಚ್ಚಿನ ಸದಸ್ಯರು ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ. ಮುಂದಿನ ದಿನದಲ್ಲಿ ಸದಸ್ಯರನ್ನು ಮಾದ್ಯಮದ ಮುಂದೆ ಹಾಜರುಪಡಿಸುತ್ತೇನೆ ಎಂದಿದ್ದಾರೆ.
Laxmi News 24×7