Breaking News

ಸುವರ್ಣಸೌಧದೆದುರು ನಮಗೆ ಜಾಗೆ ಮಾತ್ರ ನೀಡಿ ನಾವೇ ಭುವನೇಶ್ವರಿ ಮೂರ್ತಿ ಸ್ಥಾಪಿಸುತ್ತೇವೆ…

Spread the love

ಸುವರ್ಣಸೌಧದೆದುರು ನಮಗೆ ಜಾಗೆ ಮಾತ್ರ ನೀಡಿ ನಾವೇ ಭುವನೇಶ್ವರಿ ಮೂರ್ತಿ ಸ್ಥಾಪಿಸುತ್ತೇವೆ…
ಸುವರ್ಣಸೌಧದೆದುರು ಸರ್ವೋದಯ ಸ್ವಯಂಸೇವಕ ಸಂಘದಿಂದ ಆಗ್ರಹ
ಸುವರ್ಣಸೌಧದೆದುರು ಭುವನೇಶ್ವರಿ ಮೂರ್ತಿ ಸ್ಥಾಪಿಸಿ…
ಇಲ್ಲದಿದ್ದರೇ ಮನೆಮನೆಗಳಿಂದ ಲೋಹ ಸಂಗ್ರಹ ಅಭಿಯಾನ…
ಸರ್ವೋದಯ ಸ್ವಯಂಸೇವಕ ಸಂಘದಿಂದ ಎಚ್ಚರಿಕೆ
ನಮಗೆ ಜಾಗ ಮಾತ್ರ ನೀಡಿ, ನಾವೇ ಮೂರ್ತಿ ಸ್ಥಾಪಿಸುತ್ತೇವೆ
ಇದೇ ಅಧಿವೇಶನದಲ್ಲಿ ಸಿಎಂ ಸಿದ್ಧರಾಮಯ್ಯನವರು ಸುವರ್ಣಸೌಧದ ಎದುರು ನಾಡದೇವತೆ ಶ್ರೀ ಭುವನೇಶ್ವರಿಯ 108 ಅಡಿಯ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಇಲ್ಲದಿದ್ದರೇ, ಮನೆ ಮನೆಯಿಂದ ಲೋಹ ಸಂಗ್ರಹಿಸಿ, ಕನ್ನಡ ಸಂಘಟನೆಗಳೇ ಮೂರ್ತಿಯನ್ನು ಪ್ರತಿಷ್ಠಾಪಿಸಲಿದ್ದು, ಇದಕ್ಕೆ ಜಾಗ ನೀಡಬೇಕೆಂದು ಸರ್ವೋದಯ ಸ್ವಯಂಸೇವಕ ಸಂಘ ಕನ್ನಡ ಪರ ಸಂಘಟನೆಯೂ ಸುವರ್ಣಸೌಧದ ಎದುರು ಪ್ರತಿಭಟನೆಯನ್ನು ನಡೆಸಿತು.
ಇಂದು ಸರ್ವೋದಯ ಸ್ವಯಂಸೇವಕ ಸಂಘ ಕನ್ನಡ ಪರ ಸಂಘಟನೆಯೂ ಸುವರ್ಣಸೌಧದ ಎದುರು ಪ್ರತಿಭಟನೆಯನ್ನು ನಡೆಸಿತು.
2023 ರಲ್ಲಿ ಸರ್ವೋದಯ ಸ್ವಯಂಸೇವಕ ಸಂಘ ಕನ್ನಡ ಪರ ಸಂಘಟನೆಯೂ ಸುವರ್ಣಸೌಧದ ಎದುರು ಬೆಂಗಳೂರು ವಿಧಾನಸೌಧದ ಮಾದರಿಯಲ್ಲಿ ನಾಡದೇವತೆ ಭುವನೇಶ್ವರಿಯ 108 ಅಡಿ ಕಂಚಿನ ಮೂರ್ತಿಯನ್ನು ಸ್ಥಾಪಿಸಬೇಕೆಂದು ಹಲವಾರು ಬಾರಿ ಪ್ರತಿಭಟಿಸಲಾಗಿದೆ. ಸರ್ಕಾರ ಇದೇ ಅಧಿವೇಶನದಲ್ಲಿ ಗುದ್ದಲಿ ಪೂಜೆಯನ್ನು ನೆರವೇರಿಸಬೇಕು. ಗ್ಯಾರಂಟಿಗಳಿಗೆ ಸರ್ಕಾರ ಸಾವಿರಾರು ಕೋಟಿ ವ್ಯಯಿಸುತ್ತಿದೆ.
ಆದ್ದರಿಂದ ತಾಯಿ ಭುವನೇಶ್ವರಿಯ ಪ್ರತಿಮೆಯ ಹೊರೆ ಸರ್ಕಾರದ ಮೇಲೆ ಬೀಳದಿರಲೆಂದು ಕರ್ನಾಟಕದ ಪ್ರತಿ ಮನೆಗೆ ಭೇಟಿ ನೀಡಿ ಲೋಹಗಳನ್ನು ಸ್ವೀಕರಿಸುವ ಅಭಿಯಾನವನ್ನು ಪ್ರಾರಂಭಿಸುತ್ತೇವೆ. 100 ಕೋಟಿ ರೂಪಾಯಿ ಸಂಗ್ರಹ ಮಾಡುತ್ತೇವೆ. ಸರ್ಕಾರ ಮೂರ್ತಿ ಸ್ಥಾಪಿಸುವುದು ಬೇಡ. ನಮಗೆ ಜಾಗ ನೀಡಿ ಕನ್ನಡ ಸಂಘಟನೆಗಳೇ ಮೂರ್ತಿಯನ್ನು ಸ್ಥಾಪಿಸುತ್ತೇವೆಂದು ಶ್ರೀನಿವಾಸ್ ತಾಳೂಕರ ಹೇಳಿದರು. ಬೈಟ್
ಈ ಸಂದರ್ಭದಲ್ಲಿ ಸರ್ವೋದಯ ಸ್ವಯಂಸೇವಕ ಸಂಘ ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು ಭಾಗಿಯಾಗಿದ್ಧರು.

Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ