ಗ್ರಾಹಕರ ಆಯೋಗದ ಬೆಳಗಾವಿ ಪೀಠಕ್ಕೆ ಖಾಯಂ ನ್ಯಾಯಾಧೀಶರನ್ನು ನೇಮಿಸಿ
ಸುವರ್ಣಸೌಧದ ಎದುರು ಬೆಳಗಾವಿಯ ವಕೀಲ ಸಂಘದಿಂದ ಪ್ರತಿಭಟನೆ
ಗ್ರಾಹಕರ ಆಯೋಗದ ಬೆಳಗಾವಿ ಪೀಠ
ಖಾಯಂ ನ್ಯಾಯಾಧೀಶರನ್ನು ನೇಮಿಸಿ
ಬೆಳಗಾವಿಯ ವಕೀಲ ಸಂಘದಿಂದ ಆಗ್ರಹ
ಸುವರ್ಣಸೌಧದ ಎದುರು ಪ್ರತಿಭಟನೆ
ಬೆಳಗಾವಿಯ ಗ್ರಾಹಕರ ಆಯೋಗದ ಬೆಳಗಾವಿ ಪೀಠಕ್ಕೆ ಖಾಯಂ ನ್ಯಾಯಾಧೀಶರನ್ನು ನೇಮಿಸಬೇಕೆಂದು ಆಗ್ರಹಿಸಿ ನ್ಯಾಯಾಲಯದ ಕಲಾಪದಿಂದ ಹೊರಗುಳಿದು, ಸುವರ್ಣಸೌಧದ ಎದುರು ಬೆಳಗಾವಿಯ ವಕೀಲ ಸಂಘವು ಪ್ರತಿಭಟಿಸಿತು.
ಇಂದು ಬೆಳಗಾವಿಯ ಸುವರ್ಣಸೌಧದ ಎದುರು ವಕೀಲ ಸಂಘವು ಪ್ರತಿಭಟನೆಯನ್ನು ನಡೆಸಿ, ಬೆಳಗಾವಿಯ ಗ್ರಾಹಕರ ಆಯೋಗದ ಬೆಳಗಾವಿ ಪೀಠಕ್ಕೆ ಖಾಯಂ ನ್ಯಾಯಾಧೀಶರನ್ನು ನೇಮಿಸಬೇಕೆಂದು ಆಗ್ರಹಿಸಿತು.
ಈ ವೇಳೆ ಮಾತನಾಡಿದ ಬೆಳಗಾವಿಯ ಗ್ರಾಹಕರ ಆಯೋಗದ ಬೆಳಗಾವಿ ಪೀಠ ಸ್ಥಾಪನೆಯಾಗಿ 10 ತಿಂಗಳುಗಳಾಗಿವೆ. ಖಾಯಂ ನ್ಯಾಯಾಧೀಶರನ್ನು ನೇಮಿಸಿ, ಗ್ರಾಹಕರಿಗೆ ನ್ಯಾಯ ಒದಗಿಸಬೇಕು. ಅಲ್ಲದೇ ಹಿರಿಯ ಮತ್ತು ಕಿರಿಯ ವಕೀಲರಿಗೆ ಸಮಾನ ಅವಕಾಶವನ್ನು ನ್ಯಾಯಾಲಯದಲ್ಲಿ ನೀಡಬೇಕು. ಕಾಗದರಹಿತ ಕಲಾಪಗಳನ್ನು
ನಡೆಸಲು ಒತ್ತು ನೀಡಬೇಕೆಂದು ಹಿರಿಯ ವಕೀಲರಾದ ಎಸ್.ಎಸ್. ಕಿವಡಸಣ್ಣವರ ಆಗ್ರಹಿಸಿದರು. ಬೈಟ್
ಇನ್ನು ವೈ.ಕೆ. ದೀವಟೆ ಅವರು ಕೂಡ ಸರ್ಕಾರವು ಬೆಳಗಾವಿ ಗ್ರಾಹಕರ ಆಯೋಗದ ಬೆಳಗಾವಿ ಪೀಠಕ್ಕೆ ಶೀಘ್ರದಲ್ಲೇ ಖಾಯಂ ನ್ಯಾಯಾಧೀಶರನ್ನು ನೇಮಿಸಬೇಕೆಂದು ಆಗ್ರಹಿಸಿದರು. ಬೈಟ್
ಈ ಸಂದರ್ಭದಲ್ಲಿ ಬಸವರಾಜ್ ಮುಗಳಿ, ಶೀತಲ್ ರಾಮಶೆಟ್ಟಿ, ವಿಜಯಕುಮಾರ ಪಾಟೀಲ್. ವಿಶ್ವನಾಥ್ ಸುಲ್ತಾನಪೂರಿ, ಸುಮೀತಕುಮಾರ್ ಅಗಸಗಿ ಇನ್ನುಳಿದವರು ಭಾಗಿಯಾಗಿದ್ಧರು.
Laxmi News 24×7