Breaking News

ನೈಋತ್ಯ ರೈಲ್ವೆ ಟಿಕೆಟ್ ಪರಿಶೀಲನೆ ಪ್ರಕರಣ, ದಂಡ ಸಂಗ್ರಹದಲ್ಲಿ ಹೆಚ್ಚಳ

Spread the love

ಹುಬ್ಬಳ್ಳಿ: ನೈಋತ್ಯ ರೈಲ್ವೆ ತನ್ನ ವ್ಯಾಪ್ತಿಯಾದ್ಯಂತ ಟಿಕೆಟ್ ಪರಿಶೀಲನೆ ಮತ್ತು ನಿಯಮ ಜಾರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ ಪರಿಣಾಮವಾಗಿ, ಈ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಟಿಕೆಟ್ ರಹಿತ ಮತ್ತು ಅಕ್ರಮ ಪ್ರಯಾಣ ಪ್ರಕರಣಗಳು ಗಣನೀಯವಾಗಿ ಪತ್ತೆಯಾಗಿದ್ದು, ಇಲಾಖೆಗೆ ದಂಡದ ರೂಪದಲ್ಲಿ ಬಂದ ಆದಾಯ ಹೆಚ್ಚಳವಾಗಿದೆ.

67 ಸಾವಿರ ಪ್ರಕರಣಗಳಿಂದ 5.36 ಕೋಟಿ ರೂಪಾಯಿ ದಂಡ ಸಂಗ್ರಹ: 2025-26ರ ಪ್ರಸಕ್ತ ಆರ್ಥಿಕ ವರ್ಷದ ನವೆಂಬರ್ ತಿಂಗಳಿನಲ್ಲಿ (2025) ಒಟ್ಟು 67,000 ಟಿಕೆಟ್ ತಪಾಸಣಾ ಪ್ರಕರಣಗಳನ್ನು ನೈಋತ್ಯ ರೈಲ್ವೆ ದಾಖಲಿಸಿದ್ದು, ಇದರಿಂದ ಬರೋಬ್ಬರಿ 5.36 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷದ (ನವೆಂಬರ್ 2024) ಇದೇ ಅವಧಿಗೆ ಹೋಲಿಸಿದರೆ, ಪ್ರಕರಣಗಳ ಸಂಖ್ಯೆಯಲ್ಲಿ ಶೇ. 24ರಷ್ಟು ಮತ್ತು ಆದಾಯದಲ್ಲಿ ಶೇ. 60ರಷ್ಟು ದಾಖಲೆಯ ಏರಿಕೆ ಕಂಡುಬಂದಿದೆ. ನವೆಂಬರ್ 2024 ರಲ್ಲಿ 54,000 ಪ್ರಕರಣಗಳಿಂದ 3.35 ಕೋಟಿ ರೂ. ಸಂಗ್ರಹವಾಗಿತ್ತು.

ಏಪ್ರಿಲ್ 1 ರಿಂದ ನವೆಂಬರ್ 30, 2025 ರವರೆಗಿನ ಸಂಚಿತ ಅವಧಿಯಲ್ಲಿ, ಎಸ್​ಡಬ್ಲ್ಯೂಆರ್ 5.57 ಲಕ್ಷ ಟಿಕೆಟ್ ತಪಾಸಣಾ ಪ್ರಕರಣಗಳನ್ನು ಪತ್ತೆ ಮಾಡಿದೆ. ಈ ಮೂಲಕ ಒಟ್ಟು 45.89 ಕೋಟಿ ರೂ. ಆದಾಯ ಗಳಿಸಿದೆ. ಹಿಂದಿನ ಆರ್ಥಿಕ ವರ್ಷದ (2024–25) ಅನುಗುಣವಾದ ಅವಧಿಯಲ್ಲಿ 4.8 ಲಕ್ಷ ಪ್ರಕರಣಗಳಿಂದ 32.87 ಕೋಟಿ ರೂ. ಆದಾಯವಿತ್ತು. ಇದರರ್ಥ, ಈ ಅವಧಿಯಲ್ಲಿ ಪ್ರಕರಣಗಳ ಪತ್ತೆಯಲ್ಲಿ ಶೇ. 16ರಷ್ಟು ಮತ್ತು ದಂಡ ಸಂಗ್ರಹ ಆದಾಯದಲ್ಲಿ ಶೇ. 40ರಷ್ಟು ಹೆಚ್ಚಳವಾಗಿದೆ.

ನಿರಂತರವಾಗಿ ನಡೆಸಿದ ಟಿಕೆಟ್ ತಪಾಸಣಾ ಅಭಿಯಾನಗಳು, ವಿಶೇಷ ತಪಾಸಣೆಗಳು ಮತ್ತು ರೈಲು ನಿಲ್ದಾಣಗಳಲ್ಲಿ ಹಾಗೂ ಪ್ರಯಾಣಿಸುವ ರೈಲುಗಳಲ್ಲಿ ಹಠಾತ್ ತಪಾಸಣೆಗಳನ್ನು ನಡೆಸಿದ ಫಲಿತಾಂಶವೇ ಈ ಸುಧಾರಿತ ಸಾಧನೆಗೆ ಕಾರಣವಾಗಿದೆ. ಈ ಉಪಕ್ರಮಗಳು ಅನಧಿಕೃತ ಪ್ರಯಾಣವನ್ನು ತಡೆಯುವ ಮತ್ತು ನಿಯಮಗಳ ಅನುಸರಣೆಯನ್ನು ಖಚಿತಪಡಿಸುವ ಗುರಿ ಹೊಂದಿವೆ.


Spread the love

About Laxminews 24x7

Check Also

ಧಾರವಾಡ 10ನೇವಾರ್ಡನ್ ಶಿವಶಕ್ತಿ ನಗರದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ.. 41 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ ಶಾಸಕ ಅರವಿಂದ ಬೆಲ್ಲದ.

Spread the love ಧಾರವಾಡ 10ನೇವಾರ್ಡನ್ ಶಿವಶಕ್ತಿ ನಗರದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ.. 41 ಕುಟುಂಬಗಳಿಗೆ ಹಕ್ಕು ಪತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ