Breaking News

ಅಧಿವೇಶನ ‘ಪಿಕ್ನಿಕ್ ‘ಸ್ಪಾಟ್’ ಆಗಬಾರದು:

Spread the love

ಬೆಳಗಾವಿ ವಿಧಾನಸೌಧ ಅಧಿವೇಶನ ಒಂದು ವಿಶ್ಲೇಷಣೆ! ಡಾಕ್ಟರ್ ಪ್ರಭಾಕರ ಕೋರೆ!
ಸುವರ್ಣ ಸೌಧ ಉದ್ದೇಶ ಈಡೇರಿಲ್ಲ: ಮುಖಂಡರ ವಿಷಾದ
ಉತ್ತರ ಕರ್ನಾಟಕ ಅಭಿವೃದ್ಧಿ; ನಿರೀಕ್ಷೆ ಹುಸಿಯಾಗಿದೆ
ಅಧಿವೇಶನ ‘ಪಿಕ್ನಿಕ್ ‘ಸ್ಪಾಟ್’ ಆಗಬಾರದು: ಆಗ್ರಹ!
₹500 ಕೋಟಿ ಸೌಧ; ಫಲಶೃತಿ ಶೂನ್ಯ
ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವನ್ನು ನಿರ್ಮಿಸಿ 13 ವರ್ಷಗಳಾದರೂ, ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮತೋಲನ ನಿವಾರಿಸುವ ಮೂಲ ಉದ್ದೇಶಗಳು ಈಡೇರಿಲ್ಲ ಎಂದು ಹಿರಿಯ ಮುಖಂಡರು ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಂಜುಂಡಪ್ಪ ವರದಿ ಕುರಿತು ಚರ್ಚಿಸಲು ಮತ್ತು ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸುವರ್ಣ ಸೌಧ ಕಟ್ಟಲಾಯಿತು. 2005ರಲ್ಲಿ ಧರಂಸಿಂಗ್ ಸರ್ಕಾರಕ್ಕೆ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಂತರ, ಎಚ್.ಡಿ. ಕುಮಾರಸ್ವಾಮಿ ಅವರ ಸಮಿಶ್ರ ಸರ್ಕಾರ ಇದನ್ನು ಒಪ್ಪಿ, 2006ರಲ್ಲಿ ಕೆಎಲ್ಇ ಸಂಸ್ಥೆಯ ಆವರಣದಲ್ಲಿ ಮೊದಲು ಐತಿಹಾಸಿಕ ಅಧಿವೇಶನ ನಡೆಯಿತು.
ಬೆಂಗಳೂರಿನ ವಿಧಾನಸೌಧದ ಪ್ರತಿರೂಪವಾಗಿ ಸುಮಾರು ₹500 ಕೋಟಿ ವೆಚ್ಚದಲ್ಲಿ 2012ರಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಲಾಯಿತು.
ಬೆಳಗಾವಿ ಅಧಿವೇಶನವು ಉತ್ತರ ಕರ್ನಾಟಕದ ನೀರಾವರಿ, ಕೈಗಾರಿಕೆ, ಮೂಲಸೌಕರ್ಯ ಮತ್ತು ಉದ್ಯೋಗ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ವೇದಿಕೆಯಾಗಬೇಕಿತ್ತು. ಆದರೆ, ಇಲ್ಲಿಯವರೆಗೆ ನಡೆದ ಅಧಿವೇಶನಗಳು ಜನರ ಮತ್ತು ಸ್ಥಳೀಯ ನಾಯಕರ ನಿರೀಕ್ಷೆಗಳನ್ನು ಭಗ್ನಗೊಳಿಸಿವೆ.
ಅಧಿವೇಶನ ಕೇವಲ ಔಪಚಾರಿಕ ಅಥವಾ ‘ಪಿಕ್’ನಿಕ್ ಸ್ಪಾಟ್’ ಆಗಬಾರದು.
ದುಂದುವೆಚ್ಚಕ್ಕೆ ಬ್ರೇಕ್ ಹಾಕಿ, ಇಲ್ಲಿ ಶಾಸಕರ ಭವನ ಮತ್ತು ಸಿಬ್ಬಂದಿ ವಸತಿಗೃಹಗಳನ್ನು ನಿರ್ಮಿಸಿ ಕನಿಷ್ಠ 20 ದಿನಗಳ ಪೂರ್ಣಾವಧಿಯ ಪರಿಹಾರಾತ್ಮಕ ಅಧಿವೇಶನ ಜರುಗಬೇಕು ಎಂದು ಆಗ್ರಹಿಸಲಾಗಿದೆ.

Spread the love

About Laxminews 24x7

Check Also

ರಾಜ್ಯ ಕಾಂಗ್ರೆಸ್ ನಾಯಕರ ಸಿಎಂ ಕುರ್ಚಿ ಕಿತ್ತಾಟದಿಂದ ಅಭಿವೃದ್ಧಿಗೆ ಎಳ್ಳುನೀರು:ದುರ್ಯೋಧನ ಐಹೊಳೆ

Spread the loveಚಿಕ್ಕೋಡಿ: ರಾಜ್ಯ ಕಾಂಗ್ರೆಸ್ ನಾಯಕರ ಸಿಎಂ ಕುರ್ಚಿ ಕಿತ್ತಾಟದಿಂದ ಅಭಿವೃದ್ಧಿಗೆ ಎಳ್ಳುನೀರು ಬಿಟ್ಟಂತಾಗಿದೆ. ನಾಳೆ ನಡೆಯುವ ಬೆಳಗಾವಿ ಚಳಿಗಾಲದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ