Breaking News

ಗ್ರಾಮಕ್ಕೆ ಆಗಮಿಸಿದ್ದ ಹೆಳವ ಅಲೆಮಾರಿ ಜನಾಂಗದ ಜೋಡಿಗೆ ಮದುವೆ ಮಾಡಿದ ಗ್ರಾಮಸ್ಥರು

Spread the love

ಹಾವೇರಿ: ಜಿಲ್ಲೆಯ ಅಗಡಿ ಗ್ರಾಮ ಶನಿವಾರ ವಿಶಿಷ್ಟ ಮದುವೆಗೆ ಸಾಕ್ಷಿಯಾಯಿತು. ಈ ಗ್ರಾಮಕ್ಕೆ ಆಗಮಿಸಿದ್ದ ಹೆಳವ ಅಲೆಮಾರಿ ಸಮುದಾಯದ ಜೋಡಿಯ ಮದುವೆಯನ್ನು ಸುತ್ತಮುತ್ತಲಿನ ಗ್ರಾಮಗಳ ರೈತರೇ ಎಲ್ಲಾ ಜವಾಬ್ದಾರಿ ವಹಿಸಿಕೊಂಡು ನೆರವೇರಿಸಿದರು.

ಬೆಳಗಾವಿ ಜಿಲ್ಲೆ ಗೋಕಾಕ್​ ತಾಲೂಕಿನ ಶಿಲ್ಲತಹಳ್ಳಿ ಗ್ರಾಮದ ಹೆಳವ ಸಂಗಮೇಶ್​​ ಮತ್ತು ಗೋಕಾಕ್​ ತಾಲೂಕು ಕಂಡ್ರಕಟ್ಟಿ ಗ್ರಾಮದ ನೇತ್ರಾವತಿ ಅವರು ಗ್ರಾಮಸ್ಥರ ಮತ್ತು ರೈತರ ಸಮ್ಮುಖದಲ್ಲಿ ನೂತನ ದಾಂಪತ್ಯಕ್ಕೆ ಕಾಲಿಟ್ಟರು. ಅಗಡಿ ಗ್ರಾಮದ ಹೊರವಲಯದಲ್ಲಿ ಹೆಳವರ ತಾತ್ಕಾಲಿಕ ಶೆಡ್ ಬಳಿ ಹಾಕಿದ ಅದ್ಧೂರಿ ಪೆಂಡಾಲ್‌ನಲ್ಲಿ ಸಂಗಮೇಶ್​​ ಮತ್ತು ನೇತ್ರಾವತಿ ಮದುವೆಯಾದರು. ಈ ಮದುವೆಗೆ ಅಗಡಿ ಗ್ರಾಮಸ್ಥರು ಮತ್ತು ರೈತರು ಸಾಕ್ಷಿಯಾದರು.

ರೈತರು ಮತ್ತು ಗ್ರಾಮಸ್ಥರದ್ದೇ ತಯಾರಿ: ಹೆಳವ ಸಂಗಮೇಶ್​​ ದೂರದ ಗೋಕಾಕ್​ ತಾಲೂಕಿನ ಶಿಲ್ಲತಹಳ್ಳಿ ಗ್ರಾಮದವರು. ಇವರ ಒಕ್ಕಲು ಮನೆತನಗಳಿರುವುದು ಹಾವೇರಿ ತಾಲೂಕಿನಲ್ಲಿ. ಇವರು ಮದುವೆಯಾಗುವ ವಿಷಯವನ್ನು ಒಕ್ಕಲು ಮನೆತನದವರಿಗೆ ಹೇಳಿದ್ದರು. ಆದರೆ ಅಗಡಿ ಸೇರಿದಂತೆ ಸುತ್ತಮುತ್ತಲಿನ ರೈತರು ತಮಗೆ ಗೋಕಾಕ್​ಗೆ ಮದುವೆಗೆ ಬರಲು ಸಮಸ್ಯೆಯಾಗುತ್ತದೆ. ಇಲ್ಲಿಯೇ ಮದುವೆ ಮಾಡಿಕೊಳ್ಳಿ. ಎಲ್ಲ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದು ಮಾತು ಕೊಟ್ಟಿದ್ದರು. ಅದರಂತೆ ಗ್ರಾಮಸ್ಥರು ಮತ್ತು ರೈತರು ಮುಂದೆ ನಿಂತು ಸಂಗಮೇಶ್​​ ಮತ್ತು ನೇತ್ರಾವತಿ ಅವರ ಕಲ್ಯಾಣ ಕಾರ್ಯವನ್ನು ನೆರವೇರಿಸಿದ್ದಾರೆ.ಮದುವೆಗೆ ಪಂಡಾಲ್ ಜವಾಬ್ದಾರಿ ಒಬ್ಬರದಾದರೆ, ಭೋಜನದ ಜವಾಬ್ದಾರಿ ಮತ್ತೊಬ್ಬರದ್ದು. ಅದೇ ರೀತಿ ಅಲಂಕಾರದ ವ್ಯವಸ್ಥೆಯ ಜವಾಬ್ದಾರಿಯನ್ನು ಒಬ್ಬರು ತೆಗೆದುಕೊಂಡಿದ್ದಾರೆ. ನೀರು, ಕುರ್ಚಿ, ಅಲಂಕಾರ, ಅಡುಗೆ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ರೈತರೇ ನಿರ್ವಹಿಸಿದ್ದಾರೆ. ಅಲ್ಲದೆ ಅಗಡಿ ಗ್ರಾಮದ ಮಹಿಳೆಯರೇ ಮದುಮಗಳನ್ನು ಅಲಂಕಾರ ಮಾಡಿದ್ದರು.


Spread the love

About Laxminews 24x7

Check Also

ರಾಜ್ಯಪಾಲರ ಭಾಷಣದ ಮೊದಲ 11 ಪ್ಯಾರಾಗಳಲ್ಲಿ ವಿಬಿ ಜಿ ರಾಮ್​ ಜಿ ಕಾಯ್ದೆ ಟೀಕಿಸಿ ಕೇಂದ್ರ ಸರ್ಕಾರದ ವಿರುದ್ಧ ಕಟು ಟೀಕೆ

Spread the loveಬೆಂಗಳೂರು : ರಾಜ್ಯಪಾಲರು ಹಾಗೂ ಸರ್ಕಾರದ ಸಂಘರ್ಷದ ಮಧ್ಯೆ ರಾಜ್ಯಪಾಲರ ಭಾಷಣವನ್ನು ಸದನದಲ್ಲಿ ಮಂಡಿಸಲಾಯಿತು. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ