Breaking News

ನಂದಿನಿಯಿಂದ 2 ಹೊಸ ಉತ್ಪನ್ನ ಪರಿಚಯ: ಸೀಡ್ ಡಿಲೈಟ್, ಗುವಾ ಚಿಲ್ಲಿ ಲಸ್ಸಿ ಮಾರುಕಟ್ಟೆಗೆ

Spread the love

ಮಂಗಳೂರು: ಕೆಎಂಎಫ್​ನಿಂದ ನಂದಿನಿ ಬ್ರ್ಯಾಂಡ್​ನಲ್ಲಿ ಹಾಲಿನ ಜೊತೆಗೆ ಹಲವು ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಇದರಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದಿಂದ ಈಗಾಗಲೇ 29 ಉತ್ಪನ್ನಗಳು ಗ್ರಾಹಕರನ್ನು ಸೆಳೆಯುತ್ತಿವೆ. ನವೆಂಬರ್ 16 ರಂದು ಆರೋಗ್ಯಕ್ಕೂ ಉತ್ತಮವಾಗಿರುವ ಇನ್ನೆರಡು ಉತ್ಪನ್ನಗಳ ಬಿಡುಗಡೆಗೆ ನಂದಿನಿ ಸಜ್ಜಾಗಿದೆ.

ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದಿಂದ ಈಗಾಗಲೇ ನಂದಿನಿ ಬ್ರ್ಯಾಂಡ್​ನಲ್ಲಿ 29 ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ನವೆಂಬರ್ 16ರಂದು ನಂದಿನಿ ಸೀಡ್ ಡಿಲೈಟ್ ಮತ್ತು ನಂದಿನಿ ಗುವಾ ಚಿಲ್ಲಿ ಲಸ್ಸಿ ಎಂಬ ಎರಡು ಉತ್ಪನ್ನಗಳು ಮಾರುಕಟ್ಟೆಗೆ ಬರಲಿವೆ. ನಂದಿನಿ ಸೀಡ್ ಡಿಲೈಟ್ಅನ್ನು ವಿವಿಧ ಹಣ್ಣಿನ ಬೀಜಗಳಿಂದ ತಯಾರಿಸಲಾಗಿದ್ದು, ಇದು ಈಗಾಗಲೇ ಮಾರುಕಟ್ಟೆಯಲ್ಲಿರುವ ಬೈಟ್ ಚಾಕೊಲೇಟ್ ರೂಪದಲ್ಲಿರಲಿದೆ. ಇದು 12 ಗ್ರಾಮ್ ಇರಲಿದ್ದು, ಇದಕ್ಕೆ 10 ರೂ. ದರ ನಿಗದಿಪಡಿಸಲಾಗಿದೆ. ನಂದಿನಿ ಗುವಾ ಚಿಲ್ಲಿ ಲಸ್ಸಿಯು 160 ಎಂಎಲ್ ಇರಲಿದ್ದು, ಇದಕ್ಕೆ 15 ರೂ. ನಿಗದಿಪಡಿಸಲಾಗಿದೆ. 72ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಆಚರಣೆಯ ಸಂದರ್ಭದಲ್ಲಿ ನಂದಿನಿ ಈ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದೆ.

ನಂದಿನಿ ಸೀಡ್ ಡಿಲೈಟ್: ಒಕ್ಕೂಟದಿಂದ ಆರೋಗ್ಯದಾಯಕವಾಗಿರುವ ನಂದಿನಿ ಸೀಡ್ಸ್ ಡಿಲೈಟ್ ಉತ್ಪನ್ನವನ್ನು ಉತ್ತಮ ಗುಣಮಟ್ಟದ ಕಲ್ಲಂಗಡಿ ಬೀಜ, ಸಿಹಿ ಕುಂಬಳಕಾಯಿ ಬೀಜ, ಅಗಸೆ ಬೀಜ, ಬಾದಾಮಿ, ಸಕ್ಕರೆ, ನಂದಿನಿ ತಾಲು, ನಂದಿನಿ ತುಪ್ಪ, ನಂದಿನಿ ಕೋವಾ ಬಳಸಿ, ಆಧುನಿಕ ತಾಂತ್ರಿಕತೆಯಿಂದ ತಯಾರಿಸಲಾಗಿದ್ದು, ಪ್ರೊಟೀನ್, ಫೈಬರ್, ವಿಟಮಿನ್ಸ್, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬುಗಳು ಇದರಲ್ಲಿ ಸಮೃದ್ಧವಾಗಿರುತ್ತವೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ