Breaking News

ಕ್ರಿಕೆಟ್ ಅಭ್ಯುದಯಕ್ಕೆ ಬಳಸದ ನೂರು ಕೋಟಿ ಸಂಸ್ಥೆಯ ಖಾತೆಯಲ್ಲಿದ್ದರೆ ಪ್ರಯೋಜನವಿಲ್ಲ; ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್

Spread the love

ಕ್ರಿಕೆಟ್ ಅಭ್ಯುದಯಕ್ಕೆ ಬಳಸದ ನೂರು ಕೋಟಿ ಸಂಸ್ಥೆಯ ಖಾತೆಯಲ್ಲಿದ್ದರೆ ಪ್ರಯೋಜನವಿಲ್ಲ; ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್

ಬೆಂಗಳೂರು: ಕ್ರೀಡೆ, ಆಟಗಾರರ ಅಭ್ಯುದಯಕ್ಕೆ ಬಳಸದೇ ನೂರು ಕೋಟಿ ರೂ ಹಣವನ್ನ ಕ್ರಿಕೆಟ್ ಸಂಸ್ಥೆಯ ಖಾತೆಯಲ್ಲಿರಿಸಿಕೊಂಡರೆ ಪ್ರಯೋಜನವೇನು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಪ್ರಶ್ನಿಸಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಯ ಆಡಳಿತ ಮಂಡಳಿ ಆಯ್ಕೆ ಚುನಾವಣೆಯಲ್ಲಿ ಅದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅವರು ತಮ್ಮ ‘ಟೀಂ ಗೇಮ್ ಚೇಂಜರ್ಸ್’ ಬಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಬಹಿರಂಗಗೊಳಿಸಿ ಮಾತನಾಡಿದರು. ವೆಂಕಟೇಶ್ ಪ್ರಸಾದ್ ಬಣಕ್ಕೆ ಭಾರತೀಯ ಕ್ರಿಕೆಟ್ ದಿಗ್ಗಜರಾದ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಎದುರಾಳಿ ಬಣದಲ್ಲಿರುವ ಮತ್ತೋರ್ವ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಾಟೀಲ್ ಅವರ ಬಣದ ಈ ಹಿಂದಿನ ಆಡಳಿತಾವಧಿಯನ್ನ ಕಟುವಾಗಿ ಟೀಕಿಸಿದ ಪ್ರಸಾದ್, ಕ್ರಿಕೆಟ್‌ನ ಬೆಳವಣಿಗೆ, ಆಟಗಾರರಿಗೆ ಅತ್ಯುತ್ತಮ ವಾತಾವರಣ ನಿರ್ಮಾಣಕ್ಕಾಗಿಯೇ ನೂರಾರು ಕೋಟಿ ರೂಪಾಯಿ ಹಣವನ್ನ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೀಡುತ್ತದೆ. ಆ ಹಣವನ್ನ ಸೂಕ್ತವಾಗಿ ಬಳಸದೇ, ಉಳಿಸಿದ್ದೇವೆ ಎನ್ನುವುದರಲ್ಲಿ ಅರ್ಥವಿಲ್ಲ. ಬ್ರಿಜೇಶ್ ಪಟೇಲ್ ಬೆಂಬಲಿತ ಈ ಹಿಂದಿನ ಆಡಳಿತ ಮಂಡಳಿ ರಾಜ್ಯದ ಬಹುತೇಕ ವಲಯಗಳ ಕ್ರಿಕೆಟ್ ಅಕಾಡೆಮಿ, ಮೈದಾನಗಳನ್ನ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದೆ ಎಂದು ಆರೋಪಿಸಿದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ