Breaking News

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್​ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ

Spread the love

ಮೈಸೂರು: “ಸಂಗೀತವು ಮನಸ್ಸಿನ ಸಂಘರ್ಷಗಳನ್ನು ಶಾಂತಗೊಳಿಸುವ, ಹಿಂಸೆಯನ್ನು ಕರುಣೆಯಾಗಿ ಪರಿವರ್ತಿಸುವ ಮತ್ತು ಮಾನವೀಯತೆಯನ್ನು ಏಕತೆಯಲ್ಲಿ ಬಂಧಿಸುವ ಶಕ್ತಿಯನ್ನು ಹೊಂದಿದೆ” ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್​ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, “ಕಲೆಯ ಉದ್ದೇಶ ಕೇವಲ ಅದನ್ನು ಪ್ರದರ್ಶಿಸುವುದಲ್ಲ, ಬದಲಾಗಿ ಸಮಾಜದಲ್ಲಿ ಸಂವೇದನೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವುದಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಸಂಗೀತ ಮತ್ತು ಕಲೆಗೆ ಬಹಳ ಉನ್ನತ ಸ್ಥಾನವಿದೆ. ನಮ್ಮ ವೇದಗಳು “ನಾದೋಸ್ಮಿ ಪರಂ ಬ್ರಹ್ಮ ಎಂದು ಹೇಳುತ್ತವೆ. ಅಂದರೆ ಶಬ್ದವೇ ಪರಮಾತ್ಮ. ಈ ಶಬ್ದವು ಮಾನವರಲ್ಲಿ ಅಡಗಿರುವ ಸೌಂದರ್ಯ, ಕರುಣೆ ಮತ್ತು ಪ್ರೀತಿಯನ್ನು ಜಾಗೃತಗೊಳಿಸುವ ಶಕ್ತಿಯಾಗಿದೆ. ಸಂಗೀತವು ಹೃದಯವನ್ನು ಮೃದುಗೊಳಿಸುತ್ತದೆ. ಆಲೋಚನೆಗಳನ್ನು ಶುದ್ಧೀಕರಿಸುತ್ತದೆ ಮತ್ತು ಆತ್ಮವನ್ನು ಉನ್ನತೀಕರಿಸುತ್ತದೆ” ಎಂದು ತಿಳಿಸಿದರು.

MYSURU  GOVERNOR THAWAR CHAND GEHLOT  GANGUBHAI HANGAL MUSIC UNIVERSITY  ಥಾವರ್ ಚಂದ್ ಗೆಹ್ಲೋಟ್

“ಸಮಾಜವು ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಯುಗದಲ್ಲಿ, ಕಲಾವಿದರು ಮನುಷ್ಯರಲ್ಲಿ ಸಂವಹನ, ಸಹಾನುಭೂತಿ ಮತ್ತು ಸಾಮರಸ್ಯಕ್ಕೆ ದಾರಿ ಮಾಡಿಕೊಡುವ ಸೇತುವೆಯಾಗಿದ್ದಾರೆ. ಪ್ರಸ್ತುತ ವಿದ್ಯಾಮಾನದಲ್ಲಿ ತಂತ್ರಜ್ಞಾನ, ಡಿಜಿಟಲ್ ಮತ್ತು ಜಾಗತಿಕ ಪ್ರವೃತ್ತಿಗಳು ವೇಗವಾಗಿ ಬದಲಾಗುತ್ತಿರುವಾಗ, ನಮ್ಮ ಸಂಪ್ರದಾಯಗಳು, ನಮ್ಮ ಜಾನಪದ ಕಲೆಗಳಿಗೆ ಮರಳುವ, ಅವುಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅವುಗಳಿಂದ ಸ್ಫೂರ್ತಿ ಪಡೆಯುವ ಅವಶ್ಯಕತೆಯಿದೆ” ಎಂದು ಅಭಿಪ್ರಾಯಪಟ್ಟರು.

“ಭಾರತ ಅಭಿವೃದ್ಧಿ ಹೊಂದಿದ ಭಾರತದತ್ತ ಸಾಗುತ್ತಿರುವಾಗ, ಸೃಜನಶೀಲ ಯುವಕರ ಪಾತ್ರ ಬಹಳ ಮುಖ್ಯ. ವಿದ್ಯಾರ್ಥಿಗಳೇ, ನಿಮ್ಮ ಕಲೆಯನ್ನು ಸಾರ್ವಜನಿಕ ಕಲ್ಯಾಣ ಮತ್ತು ರಾಷ್ಟ್ರ ನಿರ್ಮಾಣದ ಉದ್ದೇಶಕ್ಕೆ ಬಳಸಿಕೊಳ್ಳಿ. ನೆನಪಿಡಿ, ಕಲೆಯು ಮಾನವೀಯತೆಯ ಸೇವೆಗೆ ಸಮರ್ಪಿತವಾದಾಗ ಮಾತ್ರ ಅದು ಪೂರ್ಣಗೊಳ್ಳುತ್ತದೆ. ನಿಮ್ಮ ಸಂಗೀತ, ನೃತ್ಯ, ನಾಟಕ ಮತ್ತು ಪ್ರದರ್ಶನ ಕಲೆಗಳ ಮೂಲಕ ನೀವು ದೇಶದ ಸಾಂಸ್ಕೃತಿಕ ಏಕತೆ ಬಲಪಡಿಸಬಹುದು” ಎಂದು ಹೇಳಿದರು.


Spread the love

About Laxminews 24x7

Check Also

25 ಸಾವಿರ ಲಂಚ ಪಡೆದು ರೆಡ್ ಹ್ಯಾಂಡಾಗಿ ಲೋಕಾ ಬಲೆಗೆ  ಸಿಕ್ಕಿಬಿದ್ದ ಪಿಡಿಓ

Spread the loveಬಾಕಿ ಸಂಬಳ ನೀಡಲು ಲಂಚ ಪಡೆದ ಪಿಡಿಓ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಹುಣಸೂರು ತಾಲೂಕು ಮುಳ್ಳೂರು ಗ್ರಾಮ ಪಂಚಾಯ್ತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ