ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಡೆಲಿವರಿ ಬಾಯ್ಗಳಿಂದ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವ ಸಂಬಂಧ ಸ್ವಿಗ್ಗಿ- ಜೊಮ್ಯಾಟೋ ಸೇರಿದಂತೆ ನಗರದ ವಿವಿಧ ಇ-ಕಾಮರ್ಸ್ ಕಂಪನಿಗಳೊಂದಿಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಸಭೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಸಭೆಯಲ್ಲಿ 40ಕ್ಕೂ ಹೆಚ್ಚು ಇ-ಕಾಮರ್ಸ್ ಕಂಪನಿಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ನಗರದಲ್ಲಿ ಕೆಲಸ ಮಾಡುತ್ತಿರುವ ಡೆಲಿವರಿ ಬಾಯ್ಗಳಿಂದ ಅಪರಾಧ ಹೆಚ್ಚಾಗುತ್ತಿವೆ. ಪೂರ್ವಾಪರ ತಿಳಿಯದೇ ಕೆಲಸಕ್ಕೆ ನೇಮಿಸುತ್ತಿರುವುದರಿಂದ ಗ್ರಾಹಕರೊಂದಿಗೆ ಅನುಚಿತ ವರ್ತನೆ ತೋರುವುದು, ರೋಡ್ ರೇಜ್ನಲ್ಲಿ ಭಾಗಿ, ಡೆಲಿವರಿ ವಿಳಂಬದ ಬಗ್ಗೆ ಪ್ರಶ್ನಿಸಿದರೆ ಗ್ರಾಹಕರ ಮೇಲೆ ಹಲ್ಲೆ, ಸರಗಳ್ಳತನ, ಗ್ರಾಹಕರು ಆರ್ಡರ್ ಮಾಡುವ ವಸ್ತು ಕಳ್ಳತನ ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ ಡೆಲಿವರಿ ಬಾಯ್ಗಳು ಭಾಗಿಯಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಡೆಲಿವರಿ ಬಾಯ್ಗಳು ಅಪರಾಧ ಕೃತ್ಯಗಳಲ್ಲಿ ತೊಡಗಿರುವುದು ಕಂಡು ಬಂದರೆ ಕಂಪನಿಗಳ ಮುಖ್ಯಸ್ಥರು ಅಥವಾ ಸಿಇಒ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಆಯುಕ್ತರು ಖಡಕ್ ಎಚ್ಚರಿಕೆ ನೀಡಿದರು.
Laxmi News 24×7