Breaking News

ಪರಮಾತ್ಮನ ಮಹಾಬೆಳಕನ್ನು ಹೃದಯದಲ್ಲಿ ಪ್ರತಿಷ್ಠಾಪಿಸೋಣ: ಡಾ ಗುರುದೇವಿ ಹುಲೆಪ್ಪನವರಮಠ ಅಭಿಮತ ಮಹಾಸಭೆಯಲ್ಲಿ ಅಮಾವಾಸ್ಯೆ ಅನುಭಾವ ಗೋಷ್ಠಿ

Spread the love

ಬೆಳಗಾವಿ 20: ಪರಮಾತ್ಮನನ್ನು ನಮ್ಮ ಹೃದಯ ಕಮಲದಲ್ಲಿ ನೆಲೆಗೊಳಿಸಿಕೊಂಡು ಸಂತೃಪ್ತಿಯನ್ನು ಕಾಣಬೇಕು. ನಮ್ಮ ಹೃದಯದ ಕಲ್ಮಶವನ್ನು ಕಿತ್ತು ಹಾಕುವ ಶಕ್ತಿ ಪರಮಾತ್ಮನ ದಿವ್ಯಸಾನ್ನಿಧ್ಯದಲ್ಲಿದೆ ಎಂದು ಶರಣರು ಪರಮಾತ್ಮನನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿ ಮನದ ಕಲ್ಮಶವನ್ನು ಕಿತ್ತು ಹಾಕಿದರೆಂದು ಖ್ಯಾತ ಚಿಂತಕಿ ಡಾ. ಗುರುದೇವಿ ಹುಲೆಪ್ಪನವರಮಠ ಹೇಳಿದರು.
ಅವರು ಬೆಳಗಾವಿಯ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಅಮವಾಸ್ಯೆ ಅನುಭವ ಗೋಷ್ಠಿಯಲ್ಲಿ ‘ಮನೆಯೊಳಗೆ ಮನೆಯ ಒಡೆಯ ನಿದ್ದಾನೋ ಇಲ್ಲವೋ’ ಉಪನ್ಯಾಸವನ್ನ ನೀಡಿದರು. ‘ಮನೆಯಲ್ಲಿ ಒಡೆಯನಿಲ್ಲದೆ ಇದ್ದರೆ ಕಸ ಕಡ್ಡಿಗಳಿಂದ ಹೇಗೆ ಅಸ್ತವ್ಯಸ್ತವಾಗಿ ಕಾಣುತ್ತದೆಯೋ ಹಾಗೆ ಮನದಲ್ಲಿ ಹುಸಿ, ವಿಷಯಂಗಳAತಹ ಕಲ್ಮಶಗಳು ಬೆರೆತು ಹೋಗಿದ್ದರೆ ಸದ್ ವಿಚಾರಗಳು ಮೂಡಲಾರವು. ಮನದ ಮೈಲಿಗೆಯನ್ನು ತೊಡೆದುಹಾಕಿ ಪರಮಾತ್ಮನನ್ನು ಅಲ್ಲಿ ನೆಲೆಸಿಕೊಳ್ಳಬೇಕಾಗಿದೆ. 12ನೇ ಶತಮಾನದ ಬಸವಾದಿ ಶರಣರು ಮನದ ಮೈಲಿಗೆಯನ್ನು ತೊಡೆದು ಹಾಕಿದ ದಾರ್ಶನಿಕರು. ಬದುಕಿನ ಅಸಂಖ್ಯೆ ಜಂಜಡಗಳಿAದ, ಆಸೆ ಆಮೀಷಗಳಿಂದ ಮನೋವಿಕಾರಗಳು ಹೆಚ್ಚಾಗಿವೆ, ಬದುಕು ನೆಮ್ಮದಿಯನ್ನು ಕಳೆದುಕೊಂಡು ಹತಾಸೆಗುಳುತ್ತಿರುವುದು. ಅದಕ್ಕೆ ದಿವೌಷಧಿ ಎಂದರೆ ದೇವರ ಧ್ಯಾನ. ಅದು ನಮ್ಮ ಮನದ ಮೈಲಿಗೆಯನ್ನು ನಿವಾರಿಸಲು ಸಾಧ್ಯ. ಇಂಥ ಅದ್ಭುತ ಮನೋಔಷಧಿಯನ್ನು ನಿರೂಪಿಸಿದವರು ಬಸವಣ್ಣನವರು. ಎಂಟು ವರ್ಷಗಳಾದರೂ ಅವರು ಹೇಳಿದ ಮಾತುಗಳು ಇಂದಿಗೂ ಜೀವಂತವೆನಿಸಿದೆ. ನಮ್ಮ ಸುಂದರ ಬದುಕಿಗೆ ವಿಕಾಸಕ್ಕೆ ಅಂತರAಗವನ್ನು ಶುದ್ಧವಾಗಿಟ್ಟುಕೊಳ್ಳುವುದು ಅಷ್ಟೇ ಮುಖ್ಯ. ಈ ಜೀವನವನ್ನು ಹಸನಾಗಿಸಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ. ಅದಕ್ಕಾಗಿ ಮನದೊಳಗೆ ದೇವರನ್ನು ಪ್ರತಿಷ್ಠಾಪಿಸಿಕೊಳ್ಳೋಣ’ ಎಂದು ಬಹು ಸಾಂದರ್ಭಿಕವಾಗಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಮಾತನಾಡುತ್ತಾ ‘ದೀಪಾವಳಿಯ ಸಂದರ್ಭದಲ್ಲಿ ನಮ್ಮೆಲ್ಲರ ಮನಮನೆಗಳಿಗೆ ಡಾ. ಗುರುದೇವಿಯವರು ದೀಪದ ಮಹಾಬೆಳಕನ್ನು ಮೂಡಿಸಿದ್ದಾರೆ. ಬಸವಣ್ಣವರ ವಿಚಾರಗಳು ತಾರ್ಕಿಕವಾಗಿದ್ದು ಅವುಗಳನ್ನು ತಳಸ್ಪರ್ಶಿಯಾಗಿ ಅಭ್ಯಾಸಬೇಕಾಗಿದೆ. ಅತ್ಯಂತ ಸರಳವಾಗಿ ಸುಂದರವಾಗಿ ಜೀವನಕೆ ಬೇಕಾದ ಮೌಲ್ಯಗಳನ್ನು ಹೇಳಿದ್ದಾರೆ. ಅವರ ಸಂದೇಶಗಳು ನಮ್ಮ ನಡೆ ನುಡಿಯ ಅನುಕರಣೆಯಲ್ಲಿ ಬಂದರೆ ಜೀವನ ಸಾರ್ಥಕ ಅನ್ನಿಸುವುದು. ದೀಪಾವಳಿ ಬೆಳಕಿನ ಹಬ್ಬ. ನಮ್ಮ ಮನಗಳಿಗೆ ಜ್ಞಾನವೆಂಬ ಬೆಳಕನ್ನು ತೊಡಗಿಸಿಕೊಳ್ಳಬೇಕಾಗಿದೆ. ಜಾತಿ ಮತ ಪಂಗಡ ಎಂಬ ವರ್ತುಲದಲ್ಲಿ ಸುತ್ತುತ್ತಿದ್ದೇವೆ ಇದರ ಆಚೆ ಬದುಕಿನ ಸೌಂದರ್ಯವನ್ನು ಕಂಡುಕೊಳ್ಳಬೇಕಾಗಿರುವುದು ಇಂದಿನ ಅಗತ್ಯ. ಸಮಾನತೆ ಶರಣರ ವಚನಗಳ ಜೀವಾಳ. ಅದನ್ನು ಅನುಕರಣೆಯ ರೂಪವನ್ನಾಗಿಸಬೇಕಾಗಿದೆ. ದೀಪಾವಳಿಯು ಸಕಲರಿಗೂ ಒಳಿತನ್ನು ಉಂಟುಮಾಡಲಿ’ ಎಂದು ಶುಭ ಕೋರಿದರು.
ಆಶೀರ್ವಚನ ನೀಡಿದ ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿಯವರು, ‘ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡೆಯ್ಯ, ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ ಎಂದು ಹೇಳಿದವರು ಬಸವಣ್ಣವರು. ಅವರ ಮಾತು ವಿಶ್ವಸತ್ಯವಾಗಿದೆ. ಜ್ಞಾನ ಎಂಬ ಬೆಳಕು ಬಿತ್ತಿ ಬೆಳೆಯಬೇಕಾಗಿರುವುದು ಹಿಂದಿನ ಅಗತ್ಯವಾಗಿದೆ. 21ನೇ ಶತಮಾನದಲ್ಲಿ ನಾವು ಅಜ್ಞಾನಿಗಳ ಹಾಗೆ ವರ್ತಿಸುತ್ತಿರುವುದು ಸಲ್ಲದು. ಮನದ ಕತ್ತಲೆಯನ್ನು ಕಿತ್ತುಹಾಕಿ ಜ್ಞಾನದ ಬೆಳೆಯನ್ನು ಬೆಳೆಯಬೇಕಾಗಿದೆ’ ಎಂದು ಕರೆ ನೀಡಿದರು.
ಹೀರಾ ಚೌಗುಲೆ ವಚನ ಪ್ರಾರ್ಥನೆ ಮಾಡಿದರು. ನ್ಯಾಯವಾದಿ ಆರ್. ಪಿ. ಪಾಟೀಲ್ ಸ್ವಾಗತಿಸಿದರು. ಮಂಗಳ ಕಾಕತಿಕರ್ ವಚನ ವಿಶ್ಲೇಷಣೆ ಮಾಡಿದರು. ಸರೋಜಿನಿ ನಿಶಾನ್ದಾರ್ ಪರಿಚಯಿಸಿದರು. ವಿ. ಕೆ. ಪಾಟೀಲ್ ವಂದಿಸಿದರು. ವಿದ್ಯಾ ಗೌಡರ ನಿರೂಪಿಸಿದರು. ಡಾ. ಎಚ್ ಬಿ ರಾಜಶೇಖರ್, ಡಾ.ಎಫ್ ವ್ಹಿ. ಮಾನ್ವಿ, ಬಾಲಚಂದ್ರ ಬಾಗಿ, ಜ್ಯೋತಿ ಬಾದಾಮಿ, ಶಂಕರ್ ಪಟ್ಟೇದ ಮೊದಲಾದವರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ