ಹುಬ್ಬಳ್ಳಿ(ಧಾರವಾಡ): ಹುಬ್ಬಳ್ಳಿ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುವುದು. ಅದರ ಜೊತೆಗೆ ಉತ್ತರ ಕರ್ನಾಟಕ ಭಾಗದ ಪ್ರಮುಖ ರೈಲು ಯೋಜನೆಗಳಾದ ಹುಬ್ಬಳ್ಳಿ-ಅಂಕೋಲಾ, ಧಾರವಾಡ-ಬೆಳಗಾವಿ, ಗದಗ-ಯಲವಗಿ ಸೇರಿದಂತೆ ಎಲ್ಲ ಯೋಜನೆಗಳನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರಲಾಗುವುದು” ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದ ರೈಲ್ವೆ ಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಹುಬ್ಬಳ್ಳಿ ರೈಲ್ವೆ ನಿಲ್ದಾಣ ಅಪಗ್ರೇಡ್ ಮಾಡಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ರೈಲ್ವೆ ಬೋರ್ಡ್ಗೆ ಪ್ರಸ್ತಾವನೆ ಕಳುಹಿಸಿಕೊಡಲಾಗುವುದು. ಹುಬ್ಬಳ್ಳಿ – ಅಂಕೋಲಾ ರೈಲ್ವೆ ಯೋಜನೆಗೆ ಅರಣ್ಯ ಇಲಾಖೆ, ವನ್ಯಜೀವಿ ಮಂಡಳಿ ಸಲಹೆ ಪಡೆಯಲಾಗಿದೆ. ಎಲ್ಲ ಸಲಹೆ ಪಡೆದು ಹೊಸ ಡಿಪಿಆರ್ ಸಿದ್ಧ ಮಾಡಲಾಗಿದೆ. 17,000 ಕೋಟಿ ವೆಚ್ಚದಲ್ಲಿ ಜಾರಿಗೊಳಿಸಲಾಗುತ್ತದೆ. ಕ್ಯಾಬಿನೆಟ್ ಅಪ್ರೂವ್ ಆದ ನಂತರ ಜಾರಿಗೆ ಬರೋ ವಿಶ್ವಾಸವಿದೆ” ಎಂದರು.
“ಅಂಕೋಲಾ ಹತ್ತಿರ ಎರಡು ಬಂದರು ನಿರ್ಮಾಣ ಮಾಡೋ ಪ್ಲ್ಯಾನ್ ಇದೆ. ಇದರಿಂದ ಈ ಭಾಗದಲ್ಲಿ ಹೆಚ್ಚಿನ ಕೈಗಾರಿಕಾ ಬೆಳವಣಿಗೆಯಾಗುತ್ತದೆ. ಧಾರವಾಡ – ಬೆಳಗಾವಿ ನಡುವಿನ ಮಾರ್ಗಕ್ಕೆ ಭೂಸ್ವಾಧೀನ ಸಮಸ್ಯೆಯಾಗಿದೆ. ಅದನ್ನು ಬಗೆಹರಿಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ತುಮಕೂರು ಚಿತ್ರದುರ್ಗ ಮಾರ್ಗದ 28 ಕಿ.ಲೋ. ಮೀಟರ್ ಕಾಮಗಾರಿ ಕೆಲವೇ ತಿಂಗಳಲ್ಲಿ ಮುಗಿಯಲಿದೆ. ಗದಗ -ಯಲವಗಿ ಡಿಪಿಆರ್ ಡಿಸೆಂಬರ್ ತಿಂಗಳಲ್ಲೊ ಸಲ್ಲಿಸಲಾಗುವುದು” ಎಂದರು.
ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ ಅಂತ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ನಾನೇ ಸಿಎಂ ಇರ್ತೇನೆ ಅಂತ ಹೇಳುವುದು ಅಸ್ತಿರತೆಯೇ ಮೊದಲ ಲಕ್ಷಣ. ಯಾಕೆ ಅವರಿಗೆ ವಿಶ್ವಾಸವಿಲ್ಲವಾ..? ಬದುಕಿದ್ದವನು, ನಾನು ಬದುಕಿದ್ದೇನೆ ಬದುಕಿದ್ದೇನೆ ಅಂತ ಯಾಕೆ ಹೇಳುತ್ತಾನೆ. ಕ್ರಾಂತಿ ಸ್ವಲ್ಪ ಆ ಕಡೆ ಈ ಕಡೆ ಆಗಬಹುದು. ಕ್ರಾಂತಿ ಬಗ್ಗೆ ನಾವಲ್ಲಾ ಕಾಂಗ್ರೆಸ್ ಅವರೇ ಹೇಳಿದ್ದಾರೆ. ಅದನ್ನು ತಪ್ಪಿಸಲು ಜಾತಿ ಗಣತಿ ಆರಂಭಿಸಿದ್ದಾರೆ. ಮುಜಾವರ್ ಮುಸ್ಲಿಂ ಬ್ರಾಹ್ಮಣ ಅಂತ ಸೇರಿಸಿದ್ದಾರೆ. ಎಲ್ಲಿಂದ ತಂದಿದ್ದಾರೆ, ಅವರು ಯಾವುದಾದರು ಸಂಘಟನೆ ಸದಸ್ಯರಾಗಿದ್ದಾರಾ ಅನ್ನೋ ಪ್ರಶ್ನೆಯಿದೆ” ಎಂದರು.
ಜಿಎಸ್ಟಿ ಪರಿಹಾರ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, “ಈ ಮೊದಲು ಮನವಿ ಮೇಲೆ ಮನವಿ ಕೊಟ್ಟರು ರಾಜ್ಯ ಸರ್ಕಾರದ ಪಾಲು ಕೊಡುತ್ತಿರಲಿಲ್ಲ. ಆದರೆ, ನಾವು ಮೊದಲೇ ಕೊಡುತ್ತಿದ್ದೇವೆ. ಆದರೆ ಅವರು ಆರ್ಥಿಕವಾಗಿ ಸರ್ಕಾರವನ್ನು ಸರಿಯಾಗಿ ನಡೆಸಲು ಆಗುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ” ಎಂದರು.
Laxmi News 24×7