ರಾಮದುರ್ಗ : ಪಟ್ಟಾಲೀಜ್ ಹೆಸರಿನಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮರಳು ಸಾಗಿಸುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದೆ.
ಸುಭಾಷ ಬೆಳವಲ ಎಂಬುವವರ ಹೆಸರಿನಲ್ಲಿ ಲೀಜ್ ಆಗಿದೆ ಎಂದು ತಿಳಿದು ಬಂದಿದೆ. ಆದರೆ ಈ ಲೀಜ್ ಆಗಿ ಐದು ವರ್ಷ ಕಳೆಯುತ್ತ ಬಂದಿದ್ದು, ಮಳೆಗಾಳ ಹಾಗೂ ಬೇಸಿಗೆಯಲ್ಲಿ ಮರಳು ಸಿಗದೆ ಇದ್ದ ಸಂಧರ್ಭದಲ್ಲಿ ಈ ಸುಭಾಷ ಅವರು ಆಡಿದ್ದೆ ಆಟ, ಮಾಡಿದ್ದೇ ದರ್ಭಾರ ಎಂಬತ್ತೆ ಕಾನೂನು ಬಾಹಿರವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ.
ಪ್ರತಿ ವರ್ಷ ಮಳೆಗಾಲ ಬಂದರೆ ನದಿ ಪಾತ್ರದ ಗ್ರಾಮಗಳ ಜನರ ಪಾಡು ಹೇಳತಿರದು.
ಮಲಪ್ರಭಾ ನದಿ ಪಾತ್ರದ ಪಕ್ಕದ ಜಮೀನಿನಲ್ಲಿ ಲೀಜ್ ಮಾಡಿ ಸರ್ಕಾರ ಆದೇಶ ಹೋರಡಿಸಿದೆ.
ಸರಕಾರದ ನಿಯಮಾವಳಿಗಳನ್ನು ಹೊರಸಿದ ಸೂಚನೆಗಳನ್ನು ಪಾಲಿಸದೆ ಬೇಕಾಬಿಟ್ಟಿಯಾಗಿ ಯಂತ್ರೋಪಕರಣಗಳು ಬಳಸಿ ಲಾರಿ ಹಾಗೂ ಟಿಪ್ಪರಗನ್ನು ಓರ್ವಲೋಡ್ ಮಾಡಿ ರಸ್ತೆ ಹಾಳು ಮಾಡುತ್ತಿದ್ದಾರೆ. ಅಲ್ಲದೆ ರಸ್ತೆ ಪಕ್ಕದಲ್ಲಿನ ಮನೆಗಳಲ್ಲಿ ವಾಸಿಸುವ ಜನ ಮನೆಗಳೆಲ್ಲ ಲಾರಿ ಹಾಗೂ ಟಿಪ್ಪರ್ ಗಳು ಸಂಚರಿಸುವುದರಿಂದ ನಮಗೆ ಭೂಕಂಪನ ವಾದಂತೆ ಮನೆಗಳು ಅಲ್ಲಾಡುತ್ತಿವೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
೨೦೧೯ ರಲ್ಲಿ ಅತಿವೃಷ್ಠಿಯಿಂದ ಮನೆ ಹಾಗೂ ಜಮೀನುಗಳಲ್ಲಿ ನೀರು ತುಂಬಿ ಬೀದಿಗೆ ಬಂದಿದ್ದು ಇನ್ನೂ ಮಾಚುವಂತಿಲ್ಲ.
ಮಲಪ್ರಭಾ ನದಿಯ ವಡಿಲನ್ನೆ ಬಗೆದು ಹಾಳುಮಾಡಿ ಪಕ್ಕದ ಜಮೀನಿನಲ್ಲಿ ಮರಳುಗಾರಿಕೆ ಮಾಡಿ ಮಲಪ್ರಭಾ ನದಿಯ ಫತವನ್ನೆ ಬದಲಿಸುತ್ತಿದ್ದಾರೆ.
ಈ ಮಲಪ್ರಭಾ ನದಿ ಫತ ಬದಲಾಯಿಸಿದ್ದರಿಂದ ಈ ಹಿಂದೆ ಗೊಣ್ಣಾಗರ ಗ್ರಾಮದ ರೈತರು ತಮ್ಮ ಜಮೀನಿನಲ್ಲಿನ ಬಾಳೆ ತೋಟ ಹಾಗೂ ಇನ್ನುಳಿದ ಫಲವತ್ತಾದ ಭೂಮಿಯನ್ನೆ ಕಳೆದು ಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದರು ಆಶ್ಚರ್ಯ ಪಡುವಂತಿಲ್ಲ.ಗಣಿ ಮತ್ತು ಭೂ ವಿಜ್ಞಾನ ಇಲಾಖೆ
Laxmi News 24×7