Breaking News

ವಿಜಯಪುರವಾಲ್ಮೀಕಿ ಮೀಸಲಾತಿಗೆ ಅನ್ಯರ ಸೇರ್ಪಡೆ ಬೇಡ

Spread the love

ವಿಜಯಪುರವಾಲ್ಮೀಕಿ ಮೀಸಲಾತಿಗೆ ಅನ್ಯರ ಸೇರ್ಪಡೆ ಬೇಡ; ಬಸವನ ಬಾಗೇವಾಡಿಯಲ್ಲಿ ಪ್ರತಿಭಟನೆ
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ
ಅನ್ಯಜಾತಿಯವರಿಗೆ ಪರಿಶಿಷ್ಟರ ಪ್ರಮಾಣ ಪತ್ರವನ್ನು ನೀಡುವದನ್ನು ನಿಲ್ಲಿಸಬೇಕು. ಅಲ್ಲದೇ ಅನ್ಯಜಾತಿಯನ್ನು ಸೇರ್ಪಡೆ ಮಾಡಕೂಡದು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕಾ ಘಟಕ ದಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ತಾಲೂಕಾ ಅಧ್ಯಕ್ಷ ರವಿ ನಾಯಕೋಡಿ ಮಾತನಾಡಿ, ಕಳೆದ ಏಳು ದಶಕಗಳು ಕಳೆಯುತ್ತಾ ಬಂದರೂ ಸಮಾಜದ ಮೇಲೆ ವಂಚನೆ, ಶೋಷಣೆ, ದಬ್ಬಾಳಿಕೆ ನಿರಂತರ ನಡೆಯತ್ತಾ ಬಂದಿದೆ.
ಬದ್ಧವಾದ ಹಕ್ಕನ್ನು ಪಡೆದುಕೊಳ್ಳುವದಕ್ಕಾಗಿ ಹೋರಾಟಕ್ಕಿಳಿಯಬೇಕಾಗಿ ಬಂದಿರುವುದು ವಿಪರ್ಯಾಸವಾಗಿದೆ.
ಬೇಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೋಲಿ ಇತರೆ ಪಂಗಡದವರು ಪ್ರವರ್ಗ ರಲ್ಲಿ ಬರುತ್ತಿದ್ದು ಅವರಿಗೆಲ್ಲ ಎಸ್‌ಟಿ ಪ್ರಮಾಣ ಪತ್ರವನ್ನು ನೀಡುವದನ್ನು ನಿಲ್ಲಿಸಬೇಕು.
ನಕಲಿ ಪ್ರಮಾಣ ಪತ್ರ ಕೊಟ್ಟ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದೇ ಸಮಯದಲ್ಲಿ ಶೇಖಪ್ಪ ಲಿಂಗದಳ್ಳಿ ಪರುಶು ಬಡಿಗೇರ್ ಶ್ರೀಶೈಲ್ ಜಾಲವಾದಿ ಪಿ ಐ ಕೋಳೂರ ಬಸನಗೌಡ ಪಾಟೀಲ್ ಶ್ರೀಶೈಲ್ ಹೊನ್ನಳ್ಳಿ ಕಾಶಿನಾಥ್ ಬಡಿಗೇರ್ ಸಮಾಜದ ಮುಖಂಡರು ಉಪಸಿತರಿದ್ದರು.

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ