Breaking News

ಎರಡು ನೂರಾ ಒಂದನೇ ಜಯಂತೋತ್ಸವ ವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಅರ್ಥಪೂರ್ಣವಾಗಿ ಆಚರಿಸಬೇಕೆಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಭಿವೃದ್ಧಿಪರ ಹೋರಾಟ ಸಮಿತಿಯು ಆಗ್ರಹ

Spread the love

ಬೆಳಗಾವಿ: ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗಿಸಿದ ವೀರರಾಣಿ ಕಿತ್ತೂರ ಚನ್ನಮ್ಮಾಜಿಯವರ ೨೦೦ನೇ ಜಯಂತಿಯನ್ನು ಕಳೆದ ವರ್ಷ ಅದ್ದೂರಿಯಾಗಿ ಆಚರಿಸಲಾಗಿದೆ ಈ ಬಾರಿಯೂ ಈ ಬಾರಿಯೂ ಎರಡು ನೂರಾ ಒಂದನೇ ಜಯಂತೋತ್ಸವ ವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಅರ್ಥಪೂರ್ಣವಾಗಿ ಆಚರಿಸಬೇಕೆಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಭಿವೃದ್ಧಿಪರ ಹೋರಾಟ ಸಮಿತಿಯು ಆಗ್ರಹಿಸಿದೆ
ಈ ಸಂಬಂಧವಾಗಿ ಆರ್ ಸಿ ಯು ಕುಲಪತಿಗಳಾದ ಪ್ರೊ.ಸಿ.ಎಂ. ತ್ಯಾಗರಾಜ ಅವರನ್ನು ಭೇಟಿ ಮಾಡಿದ ನಿಯೋಗವು ಮನವಿಯನ್ನು ಸಲ್ಲಿಸಿದೆ ಕಿತ್ತೂರಿನ ಸ್ವಾತಂತ್ರ ಹೋರಾಟದಲ್ಲಿ ಸ್ವಾಭಿಮಾನದ ಕಿಡಿ ಹೊತ್ತಿಸಿದ ರಾಣಿ ಚನ್ನಮ್ಮಾಜಿ ಅವರೊಂದಿಗೆ ಅಸಂಖ್ಯಾತ ವೀರರು ತಾಯಿನಾಡಿಗಾಗಿ ಹೋರಾಟ ಮಾಡಿದ್ದಾರೆ ವೀರಕೇಸರಿ ಅಮಟೂರು ಬಾಳಪ್ಪ ಸರ್ದಾರ ಗುರು ಸಿದ್ದಪ್ಪ ಬಿಚ್ಚಗತ್ತಿಯ ಚನ್ನಬಸಪ್ಪ ಗಜವೀರ ಕರವೀರ ವಡ್ಡರ ಎಲ್ಲಣ್ಣ ಹೀಗೆ ನೂರಾರು ಜನ ಕಿತ್ತೂರಿನ ಬಂಟರು ತಾಯ್ನಾಡಿಗಾಗಿ ರಕ್ತ ತರ್ಪಣ ನೀಡಿದ್ದಾರೆ
ಹಾಗಾಗಿ ಆ ಎಲ್ಲಾ ಮಹಾಪುರುಷರ ಸ್ವಾಮಿ ನಿಷ್ಠೆ ನಾಡ ಪ್ರೇಮ ಶೂರತನ ಸಮರ್ಪಣಾ ಮನೋಭಾವಗಳ ಬಗ್ಗೆ ಯುವಜನರಲ್ಲಿ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸಬೇಕಿದೆ ನಾಡಿನ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಎಲ್ಲಾ ಕಿತ್ತೂರಿನ ಕಲೆಗಳನ್ನು ಮುಂದಿನ ನಮ್ಮ ಪೀಳಿಗೆಗೆ ಸ್ಮರಿಸಬೇಕಿದೆ ಆದ್ದರಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ರಾಣಿ ಚೆನ್ನಮ್ಮ ಅಧ್ಯಯನ ಪೀಠವು ಈ ಬಗ್ಗೆ ವಿಶೇಷ ಆ ಶಕ್ತಿ ವಹಿಸಿ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ನಿಯೋಗದ ಮುಖಂಡರು ಆಗ್ರಹಿಸಿದರು ಕಿತ್ತೂರಿನ ಇತಿಹಾಸ ಹಾಗೂ ಚನ್ನಮ್ಮಾಜಿಯ ವಿಜಯೋತ್ಸವಕ್ಕೆ ಸಂಬಂಧಿಸಿದಂತೆ ಅಧ್ಯಯನ ಪೀಠದಿಂದ ಕಾರ್ಯಕ್ರಮ ನೀಡುವಂತೆ ಹಿರೇಬಾಗೇವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಳೆದು ಐದು ವರ್ಷಗಳ ಹಿಂದೇನೆ ಮನವಿ ಮಾಡಿದೆ ಆದರೂ ಸಹ ಆರ್ ಸಿ ಯು 2020ರಲ್ಲಿ ನೀಡಲಾಗಿದ್ದ ಮನವಿಗೆ ಈವರೆಗೂ ಸ್ಪಂದಿಸಿಲ್ಲ ಹಾಗಾಗಿ ಈ ಬಾರಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಹೋರಾಟ ಸಮಿತಿಯ ಸಂಚಾಲಕರಾದ ಮಂಜುನಾಥ್ ವಸ್ತ್ರ ಹಾಗೂ ಡಾ.ಅ.ಬ.ಇಟಗಿ ಅವರು ವಿ ಸಿ ಅವರನ್ನು ಆಗ್ರಹಿಸಿದರು
ಹಿರೇಬಾಗೇವಾಡಿಯ ಮಲ್ಲಪ್ಪನ ಗುಡ್ಡದಲ್ಲಿನ ಆರ್ ಸಿ ಯು ನೂತನ ಕ್ಯಾಂಪಸ್ಸಿನಲ್ಲಿನ ಪ್ರಗತಿ ಕಾರ್ಯ ಅಲ್ಲಿನ ಆರಾಧ್ಯ ದೈವ ಮಲ್ಲಯ್ಯ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಸೇರಿದಂತೆ ಹಲವಾರು ರಚನಾತ್ಮಕ ಕಾರ್ಯಗಳ
ಕುರಿತಂತೆ ಕುಲಪತಿ ಪ್ರೊ ಸಿ . ಎಂ ತ್ಯಾಗರಾಜ ಮಾಹಿತಿ ನೀಡಿದರು ಆರ್‌ಸಿಯು ಅಭಿವೃದ್ಧಿ ಬಗ್ಗೆ ಪ್ರಗತಿಪರ ಸಲಹೆ ಮತ್ತು ಸಹಕಾರ ಇರಲಿ ಎಂದು ನಿಯೋಗದ ಮುಖಂಡರಲ್ಲಿ ಆಶಯ ವ್ಯಕ್ತಪಡಿಸಿದರು ರೈತ ಮುಖಂಡರಾದ ಬಿ ಎಸ್ ಗಾಣಿಗಿ ಆರ್ ಸಿ ಯು ಅಭಿವೃದ್ಧಿಪರ ಹೋರಾಟ ಸಮಿತಿಯ ಸಂಚಾಲಕರಾದ ಮಂಜುನಾಥ ವಸ್ತ್ರದ ಆನಂದ ನಂದಿ ಬಸವರಾಜ ಮಠಪತಿ ಉಪಸ್ಥಿತರಿದ್ದರು
ಪೋಟ ರಾಚವಿವಿ ಅಭಿವೃದ್ಧಿಪರ ಹೋರಾಟ ಸಮಿತಿಯು ಕುಲಪತಿ ಪ್ರೊ ಸಿ .ಎಂ ತ್ಯಾಗರಾಜ ಅವರಿಗೆ ಮನವಿ ಸಲ್ಲಿಸಿತು

Spread the love

About Laxminews 24x7

Check Also

25 ಸಾವಿರ ಲಂಚ ಪಡೆದು ರೆಡ್ ಹ್ಯಾಂಡಾಗಿ ಲೋಕಾ ಬಲೆಗೆ  ಸಿಕ್ಕಿಬಿದ್ದ ಪಿಡಿಓ

Spread the loveಬಾಕಿ ಸಂಬಳ ನೀಡಲು ಲಂಚ ಪಡೆದ ಪಿಡಿಓ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಹುಣಸೂರು ತಾಲೂಕು ಮುಳ್ಳೂರು ಗ್ರಾಮ ಪಂಚಾಯ್ತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ