ಬೆಳಗಾವಿ ಜಿಲ್ಲಾ ದಸರಾ ಈಜು ಸ್ಪರ್ಧೆತನುಜ್ ಸಿಂಗ್ ಮತ್ತು ವೇದಾ ಖಾನೋಲ್ಕರ್’ಗೆ ವೈಯಕ್ತಿಕ ಚಾಂಪಿಯನ್‌ಶಿಪ್ ಪ್ರಶಸ್ತಿಬೆಳಗಾವಿ ಜಿಲ್ಲಾ ದಸರಾ ಈಜು ಸ್ಪರ್ಧೆ
ತನುಜ್ ಸಿಂಗ್ ಮತ್ತು ವೇದಾ ಖಾನೋಲ್ಕರ್’ಗೆ ವೈಯಕ್ತಿಕ ಚಾಂಪಿಯನ್‌ಶಿಪ್ ಪ್ರಶಸ್ತಿಯುವಜನ
ಸೇವಾ ಕ್ರೀಡಾ ಇಲಾಖೆ ಹಾಗೂ
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜನೆ
ಯುವಜನ ಸೇವಾ ಕ್ರೀಡಾ ಇಲಾಖೆ ಹಾಗೂ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಬೆಳಗಾವಿ ಗೋವಾವೇಸ್’ನ ಮಹಾನಗರ ಪಾಲಿಕೆ ಈಜುಕೊಳದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ದಸರಾ ಈಜು ಸ್ಪರ್ಧೆಗಳು ಯಶಸ್ವಿಯಾಗಿ ನಡೆದವು. ತನುಜ್ ಸಿಂಗ್ ಮತ್ತು ವೇದಾ ಖಾನೋಲ್ಕರ್’ಗೆ ವೈಯಕ್ತಿಕ ಚಾಂಪಿಯನ್‌ಶಿಪ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಪುರುಷರ ವಿಭಾಗದಲ್ಲಿ ತನುಜ್ ಸಿಂಗ್ ಹಾಗೂ ಮಹಿಳಾ ವಿಭಾಗದಲ್ಲಿ ವೇದಾ ಖಾನೋಲ್ಕರ್ ಅವರು ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಗೆ ಪಾತ್ರರಾದರು. ಅಲ್ಲದೇ ಪುರುಷರ ವಿಭಾಗದಲ್ಲಿ ತನುಜ್ ಸಿಂಗ್ – 4 ಬಂಗಾರ ಪದಕ, ದರ್ಶನ ವರೂರ್ – 3 ಬಂಗಾರ, ಸ್ವಯಂ ಕಾರೇಕರ – 1 ಬಂಗಾರ, 2 ಕಂಚು, , ಅರ್ಣವ ಕಿಲ್ಲೇಕರ್ – 1 ಬಂಗಾರ, 1 ಕಂಚು, ಆದಿ ಶಿರಸಾಟ – 4 ಬೆಳ್ಳಿ, ಸ್ಮರಣ್ ಮಂಗಳೂರುಕರ – 3 ಬೆಳ್ಳಿ, 1 ಕಂಚು, ಅಭಿನವ್ ದೇಸಾಯಿ – 2 ಬೆಳ್ಳಿ, 2 ಕಂಚು, ಮಯುರೇಶ್ ಜಾಧವ್, ಪ್ರಜಿತ್ ಮಾಯೆಕರ, ಸಿದ್ಧಾರ್ಥ ಕುರುಂದವಾಡ್ – ತಲಾ 1 ಕಂಚು ಪದಕ ಮತ್ತು ಮಹಿಳಾ ವಿಭಾಗದಲ್ಲಿ ವೇದಾ ಖಾನೋಲ್ಕರ್ – 5 ಬಂಗಾರ ಪದಕ, ಶ್ರೇಷ್ಠಾ ರೋಟಿ – 2 ಬಂಗಾರ, 1 ಬೆಳ್ಳಿ, 1 ಕಂಚು, ನಿಧಿ ಮುಚ್ಚಂಡಿ – 1 ಬಂಗಾರ, 2 ಬೆಳ್ಳಿ, 2 ಕಂಚು, ಮನಸ್ವಿ ಮುಚ್ಚಂಡಿ – 1 ಬಂಗಾರ, 1 ಬೆಳ್ಳಿ, ಪ್ರಣಾಲಿ ಜಾಧವ್ – 3 ಬೆಳ್ಳಿ, 1 ಕಂಚು, ವೈಶಾಲಿ ಘಾಟೆಗಸ್ತೀ – 2 ಬೆಳ್ಳಿ, 2 ಕಂಚು ಹಾಗೂ ಓವಿ ಜಾಧವ್ – 2 ಕಂಚು ಪದಕ ಪಡೆದಿದ್ದಾರೆ. ಈ ಸ್ಪರ್ಧೆಯನ್ನು ಯಶಸ್ವಿಯಾಗಿಸಲು ಆಬಾ ಹಿಂದ್ ಸ್ಪೋರ್ಟ್ಸ್ ಕ್ಲಬ್ನ ಎನ್‌ಐಎಸ್ ಈಜು ತರಬೇತುದಾರರು ವಿಶ್ವಾಸ್ ಪವಾರ್, ರಣಜೀತ್ ಪಾಟೀಲ, ಸಂದೀಪ್ ಮೊಹಿತೆ, ಶಿವರಾಜ್ ಮೋಹಿತೆ, ಕಲ್ಲಪ್ಪ ಪಾಟೀಲ, ವಿಜಯ್ ನಾಯ್ಕ್, ಪ್ರಾಂಜಲ್ ಸುಲಧಾಳ್, ಶುಭಾಂಗೀ ಮಂಗಳೂರಕರ, ವಿಜಯಾ ಶಿರಸಾಟ್, ಜ್ಯೋತಿ ಪವಾರ್, ವೈಭವ್ ಖಾನೋಲ್ಕರ್, ವಿಶಾಲ್ ವೇಸಣೆ, ವಿಜಯ್ ಬೋಗನ್, ಕಿಶೋರ್ ಪಾಟೀಲ, ಮೋಹನ್ ಪತ್ತಾರ್, ಓಮ್ ಘಾಡಿ ವಿಶೇಷ ಶ್ರಮವಹಿಸಿದ್ದಾರೆ.