Breaking News

ಸಕಾರಣ ಇಲ್ಲದೆ ಕಾಂಗ್ರೆಸ್ ಅಧಿವೇಶನ ನಡೆಯಲು ಬಿಡಲಿಲ್ಲ. ಅತ್ಯಂತ ಮಹತ್ವದ ಬಿಲ್ ಗಳಿದ್ದವು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಆರೋಪ

Spread the love

ಸಕಾರಣ ಇಲ್ಲದೆ ಕಾಂಗ್ರೆಸ್ ಅಧಿವೇಶನ ನಡೆಯಲು ಬಿಡಲಿಲ್ಲ. ಅತ್ಯಂತ ಮಹತ್ವದ ಬಿಲ್ ಗಳಿದ್ದವು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಆರೋಪ ಮಾಡಿದರು.
ನಗರದಲ್ಲಿ ಮಾತನಾಡಿದ ಅವರು. ಕೆಲ ಬಿಲ್ ಗಳನ್ನು ಸಾರ್ವಜನಿಕವಾಗಿ. ಸುದೀರ್ಘವಾದ ಚರ್ಚಗೆ ಬಿಟ್ಟಿದ್ದೆವು ಆದಾಯ ತೆರಿಗೆ ಇಲಾಖೆಯ ಹೊಸ ಬಿಲ್ ಸೇರಿ ವಿವಿಧ ಪಾಸ್ ಆದವು
ಸುಳ್ಳು ಸಬೂಬು ಹೇಳಿ ಕಾಂಗ್ರೆಸ್ ಚರ್ಚೆಗೆ ಅವಕಾಶ ನೀಡಲಿಲ್ಲ ಎಂದರು.
ಪ್ರಜಾಪ್ರಭುತ್ವದಲ್ಲಿ ಕಾಂಗ್ರೆಸ್ ಗೆ ವಿಶ್ವಾಸವಿಲ್ಲ
ಆಪರೇಷನ್ ಸಿಂಧೂರ ಬಗ್ಗೆ ಚರ್ಚೆಗೆ ಆಗ್ರಹಿಸಿದರು. ಅವಕಾಶ ಕೊಟ್ಟಾಗ ಪೆಹಾಲ್ಗಮ್ ಚರ್ಚೆ ಮಾಡೋದಾಗಿ ಹೇಳಿದರು ಅದಕ್ಕೂ
ಭಯೋತ್ಪಾದಕ ರನ್ನ, ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸೋ ದೇಶಗಳ ಬಗ್ಗೆ ಕಾಂಗ್ರೆಸ್ ಹೇಗೆ ನಡೆಕೊಂಡಿದೆ ಅಂತ ಎಲ್ಲರಿಗೂ ಗೊತ್ತಿದೆ ಎಂದರು.
ಕಾಂಗ್ರೆಸ್ ನಾವು ಸಿಕ್ಕಿ ಹಾಕಿಕೊಳ್ತೇವೆ ಅಂತ ಗೊತ್ತಾಯಿತು ಪೂರಾ ಎಕ್ಸ್ ಪೋಸ್ ಆಗಿದ್ದರಿಂದ ಕುಪಿತಗೊಂಡು ಕಾಂಗ್ರೆಸ್ ಅಧಿವೇಶನಕ್ಕೆ ಅಡ್ಡಿಪಡಿಸಿತು ಮತ ಪಟ್ಟಿಯಲ್ಲಿ ಸಣ್ಣ ಪುಟ್ಟ ದೋಷ ಇಟ್ಟುಕೊಂಡು ಗದ್ದಲ ಎಬ್ಬಿಸಿತು
ಎರಡೂ ಸದನಗಳಲ್ಲಿ 13 ಬಿಲ್ ಪಾಸ್ ಮಾಡಿದ್ದೇವೆ.
ದೇಶದ ಜನಾದೇಶಕ್ಕೆ ಕಾಂಗ್ರೆಸ್ ಅಪಮಾನ ಮಾಡಿದೆ. ಕಾಂಗ್ರೆಸ್ ಪಾರ್ಲಿಮೆಂಟ್ ನ್ನು ಒಟತ್ತೆಯಾಳಾಗಿ ಇಟ್ಟುಕೊಳ್ಳಲು ಯತ್ನಿಸಿತು
ಅಪರಾಧ ಹಿನ್ನೆಲೆ ಶಿಕ್ಷೆ . ಗುರುತರ ಆರೋಪ ಹೊತ್ತು ಜೈಲಿಗೆ ಹೋದಂಥವರ ಮೇಲೆ ಕ್ರಮ ಕೈಗೊಳ್ಳೋ ಬಿಲ್ ಗೂ ಇವರು ವಿರೋಧ ಮಾಡ್ತಿದ್ದಾರೆ. ಪ್ರಜಾಪ್ರಭುತ್ವ ವೇದಿಕೆಯನ್ನು ಕಾಂಗ್ರೆಸ್ ದುರುಪಯೋಗ ಮಾಡಿಕೊಂಡಿದೆ
ಹತಾಶೆಯಿಂದ ಕಾಂಗ್ರೆಸ್ ವರ್ತಿಸುತ್ತಿದೆ ಎಂದರು.
*ಧರ್ಮಸ್ಥಳ ವಿಚಾರದಲ್ಲಿ ಸರ್ಕಾರ ಬುದ್ಧಿ ಇಲ್ಲದೆ ವರ್ತಿಸ್ತಿದೆ*
ಯೂಟ್ಯೂಬರ್ ನ್ನು ನಂಬಿ ಕಾಂಗ್ರೆಸ್ ಪಕ್ಷದ ಹಳ್ಳಕ್ಕೆ ಬಿದ್ದಿದೆ. ಬುದ್ಧಿಹೀನರೂ ಈ ರೀತಿ ನಡೆದುಕೊಳ್ಳಲು ಸಾಧ್ಯವಿಲ್ಲ. ಇದರಲ್ಲಿ ಷಡ್ಯಂತ್ರ ಇದೆ ಅಂತ ಅಂದೇ ಹೇಳಿದ್ದೆ. ಬೇರೆ ದೇಶಗಳಲ್ಲಿಯೂ ಅಪಪ್ರಚಾರ ನಡೆಯಿತು
ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ತಗ್ಗು ತೆಗೆದಿದ್ದಾರೆ.
ಬುರುಡೆ ತಂದವನ ಹಿಂದೆ ಯಾರಿದ್ದಾರೆ..? ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ಟೂಲ್ ಕಿಟ್ ನ ವ್ಯವಸ್ಥಿತ ದಾಳಿ
ಎಡಚರರು ಇದನ್ನು ಮಾಡಿದೆ
ಇದರ ಹಿಂದೆ ಎಡಪಂಥೀಯರಿದ್ದಾರೆ
ಟೂಲ್ ಕಿಟ್ ಮಾಡಿದವರು ಯಾರು..?
ಕಾಣದ ಕೈಗಳನ್ನು ಪತ್ತೆ ಹಚ್ಚಬೇಕು
ಎನ್.ಐ.ಎ ತನಿಖೆಗೆ ಮುಂಚೆ ಹೈಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ಆಗಬೇಕು
ನಮ್ಮ ಶ್ರದ್ಧಾಕೇಂದ್ರಗಳ ಮೇಲೆ ವ್ಯವಸ್ಥಿತ ದಾಳಿ ನಡೆದಿದೆ ಹಂತ ಹಂತವಾಗಿ ದಾಳಿ ನಡೆದಿದೆ
ವ್ಯವಸ್ಥಿತ ಪಿತೂರಿ ನಡೆದಿದೆ. ರಾಜ್ಯ ಸರ್ಕಾರ ಎನ್.ಐ.ಎ ಗೆ ಕೊಟ್ಟರೆ ತನಿಖೆ
ಸರ್ಕಾರದಲ್ಲಿರುವವರು ಈ ಷಡ್ಯಂತ್ರದಲ್ಲಿ ಭಾಗಿಯಾಗಿರೋ ಸಾಧ್ಯತೆಗಳಿವೆ
ಹೀಗಾಗಿ ಹೈಕೋರ್ಟ್ ಸುಪರ್ದಿಯಲ್ಲಿ ತನಿಖೆಯಾಗಬೇಕು. ಇದರ ಹಿಂದೆ ಸಂಸದ ಸೆಂಥಿಲ್ ಇದಾರೆ ಅನ್ನೋ ಆರೋಪ ಇದೆ
ಹೀಗಾಗಿ ಸಮಗ್ರ ತನಿಖೆ ಆಗಬೇಕು ಎಂದರು.

Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ