Breaking News

ಜಮಖಂಡಿಯಲ್ಲಿ ಚಿರತೆ ಪತ್ತೆ!!! ಗ್ರಾಮಸ್ಥರಲ್ಲಿ ಮೂಡಿದ ಆತಂಕ

Spread the love

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕೆಡಿ ಜಂಬಗಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಯ ಓಡಾಟ ಗ್ರಾಮಸ್ಥರಲ್ಲಿ ಆತಂಕವನ್ನು ಸೃಷ್ಠಿಸಿದೆ. ಕಳೆದ ಎರಡು ದಿನಗಳಲ್ಲಿ ಗ್ರಾಮದ ಹಲವೆಡೆ ಮೇಕೆ, ನಾಯಿ ಗಳ ಮೇಲೆ ದಾಳಿ ನಡೆಸಿದ ಈ ಚಿರತೆ, ಕೆಲವನ್ನು ಎಳೆದೊಯ್ದು, ಅರ್ದಂಮರ್ದಾ ತಿಂದ ಘಟನೆಗಳು ಗ್ರಾಮದಲ್ಲಿ ಭಯದ ವಾತಾವರಣವನ್ನು ನಿರ್ಮಿಸಿವೆ.
ಬಿರಾದಾರ್ ವಸ್ತಿಯ ತೋಟದ ಸುತ್ತಲಿನ ಭಾಗದಲ್ಲಿ ಮೇಕೆಗಳ ಕಳೆಬರಹಗಳು ಪತ್ತೆಯಾಗಿದ್ದು, ಇದುವರೆಗೆ ನಾಲ್ಕು ಮೇಕೆಗಳ ಮೇಲೆ ದಾಳಿ ನಡೆಸಿರುವ ಚಿರತೆಯ ಉಂಟುಮಾಡಿದ ಭೀತಿಯಿಂದ, ಜನರು ಜಮೀನಿಗೆ ತೆರಳಲು ಸಹ ಹೆದರುತ್ತಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಜಮಖಂಡಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಚಿರತೆಯ ಹೆಜ್ಜೆಗಳ ಗುರುತುಗಳನ್ನು ಪರಿಶೀಲಿಸಿದ್ದಾರೆ. ಗ್ರಾಮಸ್ಥರು ಅರಣ್ಯಾಧಿಕಾರಿಗಳೊಡನೆ ಚರ್ಚಿಸಿ, ಚಿರತೆಯನ್ನು ಶೀಘ್ರದಲ್ಲಿ ಸೆರೆಹಿಡಿಯಲು ಕೋರಿದ್ದಾರೆ.ಗ್ರಾಮದ ಜನರು ಮಕ್ಕಳನ್ನು ಏಕಾಂಗಿಯಾಗಿ ಹೊರಬಿಡದೆ ಜಾಗರೂಕತೆ ವಹಿಸುತ್ತಿದ್ದು, ತಕ್ಷಣದ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.
ಇದೀಗ ಈ ಪ್ರದೇಶದಲ್ಲಿ ಅರಣ್ಯ ಇಲಾಖೆಯ ತಂಡ ಬೀಡು ಬಿಟ್ಟಿದ್ದು, ಚಿರತೆಯನ್ನು ಸೆರೆ ಹಿಡಿಯಲು ಪ್ರಯತ್ನ ನಡೆಸುತ್ತಿದೆ.

Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ