Breaking News

ಕಾಗವಾಡ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿಯ ಬಸವನಗರ ಬಡಾವಣೆಯಲ್ಲಿ ಅನೇಕ ದಲಿತ ಬಾಂಧವರಿಗೆ ಹಕ್ಕುಪತ್ರಗಳು ನೀಡಿಲ್ಲ

Spread the love

ಕಾಗವಾಡ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿಯ ಬಸವನಗರ ಬಡಾವಣೆಯಲ್ಲಿ ಅನೇಕ ದಲಿತ ಬಾಂಧವರಿಗೆ ಹಕ್ಕುಪತ್ರಗಳು ನೀಡಿಲ್ಲ ಅಲ್ಲದೆ ಮೂಲ ಸೌಕರ್ಯಗಳು ನೀಡಲು ವಿಳಂಬ ಮಾಡುತ್ತಿದ್ದರಿಂದ ಕಾಗವಾಡ ಹಾಗೂ ಅಥಣಿ ದಲಿತ ಸಂಘರ್ಷ ಸಮಿತಿಯ ಸದಸ್ಯರು ಕಾಗವಾಡ ತಹಸಿಲ್ದಾರ ಕಚೇರಿ ಎದುರು ಪ್ರತಿಭಟನೆ ಕೈಗೊಂಡು ತಮ್ಮ ಬೇಡಿಕೆಗಳ ಮನವಿ ತಹಸಿಲ್ದಾರ್ ಗೆ ಅರ್ಪಿಸಿದರು.
ಮಂಗಳವಾರ ರಂದು ಕಾಗವಾಡ ತಹಸಿಲ್ದಾರ ರವೀಂದ್ರ ಹಾದಿಮನಿ ಇವರನ್ನು ಭೇಟಿಯಾಗಿ ಅವರ ಕಚೇರಿ ಎದುರು ಕಾಗವಾಡದ ಬಸವನಗರ ದಲಿತ ಸಮಾಜದ ಪುರುಷರು ಮಹಿಳೆಯರು ತಮ್ಮ ಬೇಡಿಕೆಗಳಗಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಂಜಯ ತಳವಲ್ಕರ ಇವರು ಮಾತನಾಡಿ ಕಾಗವಾಡದ ಬಸವನಗರ ಓನಿಯಲ್ಲಿ ಅಲ್ಲಿಯ ದಲಿತ ಕುಟುಂಬಗಳ ಅನಿಕ ವರ್ಷಗಳಿಂದ ವಾಸಿಸುತ್ತಿದ್ದಾರೆ. ಇವರಿಗೆ ಅವರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿಲ್ಲ. ಆದರೆ ಹಿಂದಿನ ಮಾಜಿ ಸಚಿವ ಎ ಬಿ ಜಕನೂರ್, ನಂತರ ಅಂದಿನ ಶಾಸಕ ಮೋಹನರಾವ ಶಹಾ ಇವರ ನೇತೃತ್ವದಲ್ಲಿ ಮನೆಗಳು ಕಟ್ಟಿಸಲು ಹಕ್ಕುಪತ್ರಗಳು ನೀಡಿದರು. ಬಳಿಕ 2002ರಲ್ಲಿ ಅಂದಿನ ಇಂಧನ ಖಾತೆ ಸಚಿವ ವೀರಕುಮಾರ್ ಪಾಟೀಲ್ ಈ ಎಲ್ಲ ಮನೆಗಳಿಗೆ ವಿದ್ಯುತ ವ್ಯವಸ್ಥೆ ಮಾಡಿದರು, ಆದರೆ ಅಲ್ಲಿಯ ಕುಟುಂಬಗಳ ಸಂಖ್ಯೆ ಹೆಚ್ಚಾಗುವರಿಂದ ಅಲ್ಲಿಯ ಕುಟುಂಬಗಳಿಗೆ ಈಗಲೂ ಸುಮಾರು 400 ಮನೆಗಳು ನಿರ್ಮಿಸಲು ಹಕ್ಕುಪತ್ರಗಳು ನೀಡಬೇಕಾಗಿದೆ, ಅಲ್ಲದೆ ಅವರಿಗೆ ಮೂಲ ಸೌಕರ್ಯದ ಕೊರತೆ ಇದೆ. ಮನೆಗಳಿಗೆ ದೀಪದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ನೀಡುಬೇಕು, ಅಲ್ಲಿಯ ಕೆಲ ಜನ ಈಗಲೂ ಕತ್ತಲೆಯಲ್ಲಿ ಇದ್ದಾರೆ ಇದನ್ನು ಹೇಳಿ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಹಾಗೂ ತಹಸಿಲ್ದಾರ್ ರವೀಂದ್ರ ಹಾದಿಮನಿ ಇವರನ್ನು ಸಂಪರ್ಕಿಸಿ ಮಾಹಿತಿ ನೀಡಿದಾಗ ಈ ಇಬ್ಬರು ಶೀಘ್ರದಲ್ಲಿ ಸಮಸ್ಯೆಗಳಿಗೆ ಸ್ಪಂದಿಸಿ ಎಲ್ಲ ಸೌಕರ್ಯಗಳು ನೀಡುವ ಭರವಸೆ ನೀಡಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದರು.
ಕಾಗವಾಡ ಶ್ರೀಸಿದ್ದೇಶ್ವರ ಶಿಕ್ಷಣ ಸಮಿತಿಯ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ ಇವರು ಪಟ್ಟಣ ಪಂಚಾಯಿತಿ ಮುಖ್ಯಅಧಿಕಾರಿ ಕೆ ಕೆ ಗಾವಡೆ ಇವರಿಗೆ ಅಲ್ಲಿಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ ಕೂಡಲೇ ಕೊಟ್ಟನ ಪಂಚಾಯಿತಿಯಲ್ಲಿ ಇರುವ ಸೋಲಾರ ದೀಪಗಳು ಅವರ ಮನೆಗಳಿಗೆ ನೀಡಬೇಕೆಂದು ಕೇಳಿಕೊಂಡರು.
ದಲಿತ ಸಂಘರ್ಷ ಸಮಿತಿಯ ಕಾಗವಾಡ ತಾಲೂಕ ಅಧ್ಯಕ್ಷ ಸಚಿನ ಪೂಜಾರಿ, ಜನಾರ್ಧನ ಧೊಡಾಂರೆ, ವಿದ್ಯಾದರ ಧೊಡಾಂರೆ ಇವರು ಅಲ್ಲಿಯ ದಲಿತ ಕುಟುಂಬಗಳ ಸಮಸ್ಯೆಗಳ ಬಗ್ಗೆ ಅಧಿಕಾರಿಗೆ ಮಾಹಿತಿ ನೀಡಿದರು.
ತಹಶೀಲ್ದಾರ್ ರವೀಂದ್ರ ಹಾದಿಮನಿ ಮನವಿ ಸ್ವೀಕರಿಸಿ ಅಲ್ಲಿಯ ದಲಿತ ಕುಟುಂಬಗಳಿಗೆ ನೀಡುವ ಮೂಲ ಸೌಕರ್ಯಗಳು ಹಾಗೂ ಅವರ ಮನೆಗಳ ಹಾಕ ಪತ್ರಗಳ ಬೇಡಿಕೆ ಮೇಲಾಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ಈ ಸಮಸ್ಯೆಯನ್ನು ತಂದು ಶೀಘ್ರದಲ್ಲಿ ಸಮಸ್ಯೆಗಳು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಕಾಗವಾಡ ಹಾಗೂ ಅಥಣಿ ತಾಲೂಕಿನ ದಲಿತ ಸಮಾಜದ ಮುಖಂಡರು ಅದರಲ್ಲಿ ಜಿಲ್ಲಾ ಸಂಚಾಲಕ ಸಂಜಯ ತಳವಳ್ಕರ, ತಾಲೂಕ ಅಧ್ಯಕ್ಷ ಸಚಿನ್ ಪೂಜಾರಿ, ಬಾಪು ದೊಂಡರೆ, ರವಿ ಕಾಂಬಳೆ ವಿದ್ಯಾಧರ ಧೊಡಾಂರೆ, ಬಾಲಕೃಷ್ಣ ಭಜಂತ್ರಿ, ಪ್ರಕಾಶ್ ಬಡಿಗೇರ, ಅಶೋಕ್ ಕಾಂಬಳೆ, ಜನಾರ್ಧನ್ ದುಂಡರೆ ಮಹಿಳಾ ಮುಖಂಡರಾದ ದೀಪ ಕಾಂಬಳೆ ರೇಖಾ ಲೊಂಡೆ ಗೀತಾ ಕಾಂಬ್ಳೆ, ಶೋಭಾ ಕಾಂಬಳೆ, ಆಶಾ ಡವರಿ ಜ್ಯೋತಿಕುಮಾರ ಪಾಟೀಲ್ ಗ್ರೇಡ್ 2 ತಹಸಿಲ್ದಾರ್ ರಶ್ಮಿ ಜಕಾತಿ, ಸೇರಿದಂತೆ ಅನೇಕ ದಲಿತ ಕಾರ್ಯಕರ್ತರು ಪಾಲ್ಗೊಂಡಿದ್ದರು.

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ