Breaking News

ಇಂಗ್ಲೆಂಡ್​ ವಿರುದ್ಧ ನಡೆದ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು ಸಾಧಿಸಿದೆ

Spread the love

ಇಂಗ್ಲೆಂಡ್​ ವಿರುದ್ಧ ನಡೆದ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 2-2 ರಿಂದ ಭಾರತ- ಇಂಗ್ಲೆಂಡ್​ ಸಮಬಲ ಸಾಧಿಸಿವೆ. 

ಲಂಡನ್‌ನಲ್ಲಿರುವ ಕೆನ್ನಿಂಗ್ಟನ್‌ನ ಓವಲ್ ಸ್ಟೇಡಿಯಂನಲ್ಲಿ ನಡೆದ 5ನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ಕ್ಯಾಪ್ಟನ್​ ಆಲಿ ಪೋಪ್ ಟಾಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಹೀಗಾಗಿ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ್ದ ಶುಭ್​ಮನ್ ಗಿಲ್ ನೇತೃತ್ವದ ಭಾರತ ತಂಡ ಆರಂಭದಲ್ಲಿ ಸಂಕಷ್ಟಕ್ಕೆ ಒಳಗಾಗಿತ್ತು. ಏಕೆಂದರೆ ಜೈಸ್ವಾಲ್​ ಕೇವಲ 2 ರನ್​ಗೆ ಔಟ್ ಆದ್ರೆ ಕನ್ನಡಿಗ ರಾಹುಲ್ ಅವರು ಕೇವಲ 14 ರನ್​ಗಳಿಗೆ ಔಟ್ ಆಗಿ ನಿರಾಸೆ ಮೂಡಿಸಿದ್ದರು.

ನಾಯಕ ಶುಭ್​ಮನ್ ಗಿಲ್ ಕೂಡ 21 ರನ್​ಗೆ ರನೌಟ್ ಆಗಿದ್ದರು. ಧೃವ್ ಜುರೆಲ್ ಹಾಗೂ ವಾಷಿಂಗ್ಟನ್​ ಸುಂದರ್ ಕೆಲ ಸಮಯ ಬ್ಯಾಟಿಂಗ್ ಮಾಡಿದರೂ ಇಂಗ್ಲೆಂಡ್​ ದಾಳಿಗೆ ವಿಕೆಟ್​ ಒಪ್ಪಿಸಿದರು. ಆದರೆ ಇನ್ನೊಬ್ಬ ಕನ್ನಡಿಗ ಕರುಣ್ ನಾಯರ್​ ಅವರ ಅಮೋಘವಾದ ಅರ್ಧಶತಕ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 224 ರನ್​ಗೆ ಆಲೌಟ್ ಆಗಿತ್ತು.

ಇದಾದ ಮೇಲೆ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್​ ಆರಂಭದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿತ್ತು. ಓಪನರ್​ ಜಾಕ್ ಕ್ರಾಲಿ ಅರ್ಧಶತಕ ಬಾರಿಸಿದ್ದರು. ಹ್ಯಾರಿ ಬ್ರೂಕ್​ 53 ರನ್​ ಸಿಡಿಸಿದ್ದರು. ಕೊನೆಯಲ್ಲಿ ಬ್ಯಾಟಿಂಗ್​ನಲ್ಲಿ ವಿಫಲತೆ ಹೆಚ್ಚಾಯಿತು. ಉಳಿದ ಬ್ಯಾಟರ್ಸ್​ ಉತ್ತಮ ಬ್ಯಾಟಿಂಗ್ ಮಾಡದ ಕಾರಣ ಆಂಗ್ಲ ಪಡೆ ಕೇವಲ 247 ರನ್​ಗೆ ಆಲೌಟ್ ಆಗಿತ್ತು. ಆದರೆ ಇನ್ನಿಂಗ್ಸ್​​ನಲ್ಲಿ 23 ರನ್​ಗಳ ಮುನ್ನಡೆ ಕಾಯ್ದುಕೊಂಡಿದ್ದರು. 

ನಂತರ 2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿತ್ತು. ಆರಂಭಿಕ ಬ್ಯಾಟರ್​ ಯಶಸ್ವಿ ಜೈಸ್ವಾಲ್ 118 ರನ್​ಗಳ ಚಚ್ಚಿ ಭಾರತಕ್ಕೆ ನೆರವಾಗಿದ್ದರು. ಇನ್ನು ಈ ಇನ್ನಿಂಗ್ಸ್​ನಲ್ಲೂ ಕೆ.ಎಲ್ ರಾಹುಲ್ (7)​ ವಿಫಲ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದರು. ಆಲ್​ರೌಂಡರ್​ ಪ್ರದರ್ಶನ ನೀಡುವ ಆಕಾಶ್ ದೀಪ್ 66 ರನ್​ ಗಳಿಸಿ ಕ್ಯಾಚ್​ ಔಟ್ ಆಗಿದ್ದರು.


Spread the love

About Laxminews 24x7

Check Also

25 ಸಾವಿರ ಲಂಚ ಪಡೆದು ರೆಡ್ ಹ್ಯಾಂಡಾಗಿ ಲೋಕಾ ಬಲೆಗೆ  ಸಿಕ್ಕಿಬಿದ್ದ ಪಿಡಿಓ

Spread the loveಬಾಕಿ ಸಂಬಳ ನೀಡಲು ಲಂಚ ಪಡೆದ ಪಿಡಿಓ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಹುಣಸೂರು ತಾಲೂಕು ಮುಳ್ಳೂರು ಗ್ರಾಮ ಪಂಚಾಯ್ತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ