ಖಾನಾಪೂರ ತಾಲೂಕಿನ ಐತಿಹಾಸಿಕ ನಂದಗಡ ಗ್ರಾಮದಲ್ಲಿರುವ ಜೆ ಸಿಎಸ್ ಆವರಣದಲ್ಲಿ ಉರ್ದು, ಕನ್ನಡ ಮತ್ತು ಮರಾಠಿ ಭಾಷೆಗಳ ಸರ್ಕಾರಿ ಶಾಲೆಗಳಿಗೆ ಅನಾಥಪ್ರಜ್ಞೆ ಕಾಡುತ್ತಿದೆ.
ಖಾನಾಪೂರ ತಾಲೂಕಿನ ಐತಿಹಾಸಿಕ ನಂದಗಡ ಗ್ರಾಮದಲ್ಲಿರುವ ಜೆ ಸಿಎಸ್ ಆವರಣದಲ್ಲಿ ಉರ್ದು, ಕನ್ನಡ ಮತ್ತು ಮರಾಠಿ ಭಾಷೆಗಳ ಸರ್ಕಾರಿ ಶಾಲೆಗಳಿವೆ. ಈ ಶಾಲೆಗಳ ಪ್ರಸ್ತುತ ಸ್ಥಿತಿಯನ್ನು ನೋಡಿದರೆ, ಯಾವುದೇ ಜವಾಬ್ದಾರಿ ಯುತ ವ್ಯವಸ್ಥೆ ಇಲ್ಲದಂತಾಗಿದೆ. ಶಾಲಾ ಆವರಣ ಅಸ್ವಚ್ಛತೆಯಿಂದ ಕೂಡಿದ್ದು , ಗಿಡ ಗಂಟೆಗಳು ಗಗನಕ್ಕೇರಿದಂತೆ ಬೆಳೆದಿವೆ. ಕಿಡಕಿ ಪಕ್ಕಗಳಲ್ಲಿ ಮಿನಿ ಕಾಡೇ ನಿರ್ಮಾಣಗೊಂಡಂತಾಗಿದೆ.
ವಿದ್ಯಾರ್ಥಿಗಳು ಈ ರೀತಿಯ ಅಸ್ವಚ್ಛ ವಾತಾವರಣದಲ್ಲಿ ಅಧ್ಯಯನ ನಡೆಸುತ್ತಿರುವುದು ವಿಪರ್ಯಾಸವೇ ಸರಿ. ಶಾಲೆಗಳ ಆವರಣಗಳು ಅಸ್ವಚ್ಛವಾಗಿದ್ದು, ಶಾಲೆಗಳ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕೆಂದು ಪರಿಕಲ್ಪನೆ ಹೊಂದಿದ್ದರೂ, ನಿಜ ಜೀವನದಲ್ಲಿ ಅದು ಇಲ್ಲದಂತಾಗಿದೆ. ಈ ಶಾಲೆಗಳ ಪರಿಸ್ಥಿತಿ ಯಾರು ಕೇಳುವವರಿಲ್ಲ, ಯಾರು ಹೇಳುವವರಿಲ್ಲ ಎಂಬಂತಹ ಸ್ಥಿತಿಯಲ್ಲಿ ನಿರ್ಮಾಣವಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ತಕ್ಷಣ ಕಾರ್ಯನಿರ್ವಹಿಸಬೇಕಿದೆ. ಶಾಲಾ ಆವರಣವನ್ನು ಸ್ವಚ್ಛವಾಗಿರಿಸಿ, ಆರೋಗ್ಯಕರ ವಾತಾವರಣದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಸೌಕರ್ಯ ಒದಗಿಸುವುದು ಅತೀ ಅಗತ್ಯವಾಗಿದೆ.