ಹುಕ್ಕೇರಿ : ಶತ್ರು ರಾಷ್ಟ್ರಕ್ಕೆ ತಕ್ಕ ಉತ್ತರ ನೀಡಿದ ಕಾರ್ಗಿಲ್ ಯುದ್ಧ : ಮಂಜುನಾಥ ಮಹಾರಜರು
ಕಾರ್ಗಿಲ್ ಯುದ್ಧ ಶತ್ರು ರಾಷ್ಟ್ರಗಳಿಗೆ ತಕ್ಕ ಉತ್ತರ ನಿಡಿದ ಅವಿಸ್ಮರಣಿಯ ಘಳಿಗೆಯಾಗಿದೆ ಎಂದು ಹುಕ್ಕೇರಿ ಕ್ಯಾರಗುಡ್ಡದ ಅವುಜಿಕರ ಆಶ್ರಮದ ಅಭಿನವ ಮಂಜುನಾಥ ಮಹಾರಾಜರು ಹೇಳಿದರು.
ಅವರು ಇಂದು ಹುಕ್ಕೇರಿ ನಗರದಲ್ಲಿ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಹಾಲಿ ಮತ್ತು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ಮತ್ತು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಹಮ್ಮಿಕೊಂಡ 26 ನೇ ವರ್ಷದ ಕಾಗಿಲ್ ವಿಜಯೋತ್ಸವ ಮತ್ತು ಆಪರೇಷನ್ ಸಿಂಧೂರ ಯಶಸ್ವಿ ಸಮಾರಂಭವನ್ನು ಭಾರತ ಮಾತೆಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ನಂತರ ಯೋಧರಿಗೆ, ಶಿಕ್ಷಕರಿಗೆ ಸಮಾಜದ ಮುಖಂಡರಿಗೆ ಸತ್ಕರಿಸಿ ಮಾದ್ಯಮಗಳೊಂದಿಗೆ ಮಾತನಾಡಿದ ಮಹಾರಾಜರು ಸೈನಿಕರ ತ್ಯಾಗ, ಹೋರಾಟದ ಪ್ರತಿ ಫಲವಾಗಿ ಕಾರ್ಗಿಲ್ ಯುದ್ಧ ಗೆದ್ದು ಭಾರತದ ಕಿರ್ತಿ ಪಟಾಕೆ ಹಾರಿಸಿ ಶತ್ರು ರಾಷ್ಟ್ರವನ್ನು ಸೋಲಿಸಿ ತಕ್ಕ ಉತ್ತರ ನೀಡಿದ ಈ ಪವಿತ್ರ ದಿನ ವಿಜಯೋತ್ಸವದ ದಿನ ವಾಗಿದೆ, ಇಂದು ಹುಕ್ಕೇರಿ ನಗರದಲ್ಲಿ ಹಾಲಿ ಮತ್ತು ಮಾಜಿ ಸೈನಿಕರ ಸಂಘ ಕಾರ್ಗಿಲ್ ಮತ್ತು ಆಪರೇಷನ್ ಸಿಂಧೂರ ವಿಜಯೋತ್ಸವ ಆಚರಿಸುವ ಮೂಲಕ ದೇಶಕ್ಕಾಗಿ ತ್ಯಾಗ ಮಾಡಿದ ಯೋಧರಿಗೆ ಗೌರವ ಸಲ್ಲಿಸಿದೆ ಎಂದರು
ನಂತರ ಎನ್ ಸಿ ಸಿ ,ಸ್ಕೌಟ ವಿದ್ಯಾರ್ಥಿಗಳು ದೇಶದ ಯೋಧರ ಪರವಾಗಿ ಘೋಷನೆ ಕೂಗಿ ಪುಷ್ಪಾರ್ಪಣೆ ಸಲ್ಲಿಸಿದರು. ಸಂಘದ ಅದ್ಯಕ್ಷ ರಾಯಪ್ಪಾ ಬನ್ನಕ್ಕಗೋಳ ಮಾತನಾಡಿ ಕಾರ್ಗಿಲ್ ಯದ್ದದಲ್ಲಿ ಭಾಗವಹಿಸಿ ತಮ್ಮ ಪ್ರಾಣವನ್ನು ಬಲಿ ನೀಡಿದ ಯೋಧರ ಸ್ಮರಣೆ ಮತ್ತು ಭಾಗವಹಿಸಿದ ಯೋಧರಿಗೆ ಅಭಿನಂದನೆ ಸಲ್ಲಿಸುವ ದರೊಂದಿಗೆ ಇಂದು ಕಾರ್ಗಿಲ್ ವಿಜಯೋತ್ಸವದ ಆಚರಿಸಲಾಗಿದೆ ಎಂದರು
ಈ ಸಂದರ್ಭದಲ್ಲಿ ಹಾಲಿ ಮತ್ತು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅದ್ಯಕ್ಷ ಮಹಾದೇವ ಬನ್ನಕ್ಕಗೊಳ, ಕಾರ್ಯದರ್ಶಿ ರಮೇಶ ಕುಂದನ್ನವರ, ಬಸವ೪ಅಜ ಮಾನಗಾಂವಿ, ನಿರಂಜನ ಕುರಬೇಟ, ಶಶಿಕಾಂತ ಮಾನಸ, ಸುಧಾಕರ ಭೋಕರೆ, ಶ್ರೀಪಾಲ ಕಮತೆ, ಯಾಶೀನ ನದಾಫ, ಎ ಎಸ್ ಆಯ್ ಸಿ ಎಲ್ ಗಸ್ತಿ, ಮಂಜುನಾಥ ಕಬ್ಬೂರಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.