Breaking News

ವಿಜಯಪುರದಲ್ಲಿ ಸಚಿವ ಸಂತೋಷ ಲಾಡ್ ಕ್ರೇಜ್; ಸೆಲ್ಪಿಗಾಗಿ ಮುಗಿಬಿದ್ದ ಕಾರ್ಯಕರ್ತರು

Spread the love

ವಿಜಯಪುರದಲ್ಲಿ ಸಚಿವ ಸಂತೋಷ ಲಾಡ್ ಕ್ರೇಜ್; ಸೆಲ್ಪಿಗಾಗಿ ಮುಗಿಬಿದ್ದ ಕಾರ್ಯಕರ್ತರು
ಕಾರ್ಮಿಕ ಸಚಿವ ಸಂತೋಷ ಲಾಡ್ ಜೊತೆ ಸೆಲ್ಪಿ ಕ್ಲಿಕಿಸಿಕೊಳ್ಳಲು ಕೈ ಪಕ್ಷದ ಕಾರ್ಯಕರ್ತರು ಮುಗಿಬಿದ್ದ ಪ್ರಸಂಗ ನಡೆಯಿತು.
ವಿಜಯಪುರ ನಗರದಲ್ಲಿ ಕಾರ್ಮಿಕ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಜಯಪುರ ಕ್ಕೆ ಆಗಮಿಸಿದ ಕಾರ್ಮಿಕ ಸಚಿವ ಸಂತೋಷ ಲಾಡ್ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶಾಲು ಹೊದಿಸಿ ಹಾರ ಹಾಕಿ ವಿವಿಧ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ವಿಜಯಪುರ ದಲ್ಲಿ ಸಚಿವ ಸಂತೋಷ ಲಾಡ್ ಕ್ರೇಜ್ ಹೆಚ್ಚಾಗಿತ್ತು. ಪ್ರವಾಸಿ ಮಂದಿರದಲ್ಲಿ ನೂರಾರು ಕಾರ್ಯಕರ್ತರಿಂದ ಸಚಿವರಿಗೆ ಸನ್ಮಾನಿಸಿದರು.
ಶಾಸಕ ವಿಠ್ಠಲ ಕಟಕದೊಂಡ, ಕೈ ಮುಖಂಡರಾದ ಮಾಜಿ ಶಾಸಜ ರಾಜು ಆಲಗೂರ, ಹಮೀದ ಮುಶ್ರಫ್, ಜ್ಯೋತಿರಾಮ ಪವಾರ, ರಾಜು ಮತ್ತಿತರರಿಂದ ಸನ್ಮಾನಿಸಿದರು‌‌.
ಇದೇ ಸಂದರ್ಭದಲ್ಲಿವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸಚಿವರನ್ನು ಭೇಟಿ ಮಾಡಿದರು‌. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆನಂದ ಕೆ, ಎಸ್ಪಿ ಲಕ್ಷ್ಮಣ ನಿಂಬರಗಿ ಮತ್ತಿತರರ‌ ಅಧಿಕಾರಿಗಳು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಸಂವಿಧಾನ ಬದಲಿಸಲಿ ಮತ್ತೆ ಮನುಸ್ಮೃತಿ ಜಾರಿಗೆ ತರುವ ಹುನ್ನಾರ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದ ನಡೆದಿದೆ; ಸಚಿವ ಎಂ.ಬಿ.ಪಾಟೀಲ

Spread the love ವಿಜಯಪುರ…ಸಂವಿಧಾನ ಬದಲಿಸಲಿ ಮತ್ತೆ ಮನುಸ್ಮೃತಿ ಜಾರಿಗೆ ತರುವ ಹುನ್ನಾರ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದ ನಡೆದಿದೆ; ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ