ಎಲೆಕ್ಟ್ರಿಕ್ ಬೈಕ್ ನಿಂದ ಉಳಿಮೆ,ಚಿಕ್ಕೋಡಿ ರೈತನಿಂದ ವಿನೂತನ ಪ್ರಯೋಗ
ಚಿಕ್ಕೋಡಿ:ಎತ್ತಿನ ಬದಲು ಎಲೆಕ್ಟ್ರಿಕ್ ಬೈಕ್ ಗೆ ಕುಂಟೆ ಜೋಡಿಸಿ ಕಳೆ ಹತೋಟಿಗೆ ಮುಂದಾಗುವ ಮೂಲಕ ರೈತರೊಬ್ಬರು ಗಮನ ಸೆಳೆದಿದ್ದಾರೆ.ಅಷ್ಟಕ್ಕೂ ಆ ರೈತ ಯಾರು ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ
ಸಕಾಲದಲ್ಲಿ ಕೃಷಿ ಕಾರ್ಮಿಕರು ಸಿಗದೇ ಇರುವುದು ಮತ್ತು ಎತ್ತಿನ ಲಭ್ಯತೆ ಇಲ್ಲದ ಕಾರಣ ರೈತ ಅಜಿತ್ ಭೀಮಪ್ಪ ನಿಡಗುಂದಿ ಹೀಗೆ ಬೆಳೆ ಆರೈಕೆ ಮಾಡಿದ್ದಾರೆ. ಕಬ್ಬೂರ ಪಟ್ಟಣದಿಂದ 2 ಕಿಮೀ ದೂರದಲ್ಲಿ 30 ಎಕರೆ ಭೂಮಿ ಅವರಿಗೆ ಇದ್ದು, ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ, ಸರಿಯಾದ ವೇಳೆಗೆ ಕೂಲಿ ಕಾರ್ಮಿಕರು ಬಾರದ ಕಾರಣ ಕಳೆ ಕೀಳಲು ಆಗದ ಸ್ಥಿತಿ ಎದುರಾಗಿತ್ತು. ಕುಂಟೆ ಹೊಡೆಯಲು ಎತ್ತುಗಳು ಕೂಡ ಅವರಲ್ಲಿ ಇರಲಿಲ್ಲ. ಹೀಗಾಗಿ ಕೃಷಿ ಇಲಾಖೆ ನೀಡಿದ ಹೊಸ ಮಾದರಿಯ ಕುಂಟೆಯನ್ನು ತಮ್ಮ ಎಲೆಕ್ಟ್ರಿಕ್ ಬೈಕ್‌ಗೆ ಕಟ್ಟಿಕೊಂಡು ಸೋಯಾಬೀನ್
ಎಲೆಕ್ಟ್ರಿಕ್ ಬೈಕ್‌ನಿಂದ ಕುಂಟೆ ಹೊಡೆಯುತ್ತಿರುವ ರೈತ
ಬೆಳೆಯಲ್ಲಿ ಬಂದ ಕಳೆ ನಿಯಂತ್ರಿಸಲು ಕುಂಟೆ ಹೊಡಿದ್ದಾರೆ.
ಬೈಟ್-1ಅಜಿತ್ ,ಬೈಕ್ ಮೂಲಕ ಕುಂಟೆ ಹೊಡೆಯುತ್ತಿರುವ ರೈತ
ಅಜಿತ್ ಅವರು ಬೈಕ್ ಚಾಲನೆ ಮಾಡಿದರೆ, ಇನ್ನೊಬ್ಬರು ಸೋಯಾಬೀನ್ ಸಾಲಿನ ನಡುವೆ ಕುಂಟೆ ಹಿಡಿದು ಸಾಗಿದ್ದಾರೆ.
ಒಟ್ಟು 5 ಎಕರೆ ಸೋಯಾಬೀನ್ ಬೆಳೆ ಬೆಳೆದಿದ್ದು, ಎಲೆಕ್ಟ್ರಿಕ್ ಬೈಕ್ ನೆರವಿನಿಂದಲೇ ಕುಂಟೆ ಹೊಡೆದಿದ್ದಾರೆ. ಒಂದು ದಿನಕ್ಕೆ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಅವರು ಹೀಗೆ ಕುಂಟೆ ಹೊಡೆದು ಗಮನಸೆಳೆದಿದ್ದಾರೆ.
ಒಟ್ಟಿನಲ್ಲಿ ಎತ್ತುಗಳ ಮೂಲಕ ಕುಂಟೆ ಹೊಡೆಯಬೇಕಾದ ರೈತ,ತಮ್ಮ ಎಲೆಕ್ಟ್ರಿಕ್ ಬೈಕ್ ನ ಮೂಲಕ ಕುಂಟೆ ಹೊಡೆಯುವ ಮೂಲಕ ಎಲ್ಲರ ಹುಬ್ಬು ಎರುವಂತೆ ಮಾಡಿದ್ದಾನೆ.