ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ಗೋಕಾಕ : ರಾಜ್ಯದಲ್ಲಿಯೇ ಎರಡನೇಯ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲೆ ರಚನೆಮಾಡುವಂತೆ ಆಗ್ರಹಿಸಿ ಮತ್ತು ಈ ಕುರಿತು ಮಾನ್ಯ ಮುಖ್ಯಮಂತ್ರಿಗಳಲ್ಲಿ ನಿಯೋಗವನ್ನು ಒಯ್ಯುವ ಕುರಿತು ಮನವಿ ಮಾಡಲು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿಯವರಿಗೆ ಗೋಕಾಕ ಜಿಲ್ಲಾ ಚಾಲನಾ ಸಮೀತಿಯ ಅಧ್ಯಕ್ಷರಾದ ಪೂಜ್ಯ ಶ್ರೀ ಮುರುಘರಾಜೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ಗೋಕಾಕ ನ್ಯಾಯವಾದಿಗಳ ಸಂಘದ ಸಹಯೋಗದೊಂದಿಗೆ ಗೋಕಾಕ ಹಿಲ್‍ಗಾರ್ಡನದಲ್ಲಿರುವ ಅವರ ಸ್ವಗೃಹದ ಕಚೇರಿಯಲ್ಲಿ ಮನವಿಯನ್ನು ಸಲ್ಲಿಸಿದರು.
ಸಮೀತಿ ಪರವಾಗಿ ಹಿರಿಯ ರಾಜಕೀಯ ಧುರೀಣ ಅಶೋಕ ಪೂಜಾರಿ ಮತ್ತು ಗೋಕಾಕ ನ್ಯಾಯವಾದಿ ಸಂಘದ ಅಧ್ಯಕ್ಷರಾದ ಸುಭಾಸಗೌಡ ಪಾಟೀಲ ಮನವಿಯನ್ನು ಸಲ್ಲಿಸಿದರು.