Breaking News

ಮಾಜಿ ಸಚಿವನಿಗೆ ನವಿಲಿನ ಗರಿ ಹಾರ ಹಾಕಿದ ಅಭಿಮಾನಿಗಳು; ದೂರು ದಾಖಲಾಗ್ತಿದ್ದಂತೆ ಸ್ಪಷ್ಟನೆ ಕೊಟ್ಟ ಶಿವನಗೌಡ ನಾಯಕ್​​

Spread the love

ರಾಯಚೂರು : ಮಾಜಿ ಸಚಿವ ಕೆ. ಶಿವನಗೌಡ ನಾಯಕ ಜನ್ಮದಿನದಂದು ಅಭಿಮಾನಿಗಳು ನವಿಲುಗರಿ ಹಾರ ಹಾಕಿರುವ ವಿಚಾರಕ್ಕೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ವನ್ಯಜೀವಿ ಸಂರಕ್ಷಣಾ ಕಾಯಿದೆ ಉಲ್ಲಂಘನೆ ಕುರಿತು ಈ ಮೇಲ್ ದೂರು ನೀಡಿದ್ದಾರೆ.

2025 ಜುಲೈ 14 ರಂದು ಕೆ. ಶಿವನಗೌಡ ನಾಯಕ ಅವರ ಹುಟ್ಟುಹಬ್ಬವಿತ್ತು. ಅಂದು ರಾಷ್ಟ್ರಪಕ್ಷಿ ನವಿಲಿನ ಗರಿಯಿಂದ ಸಿದ್ದಪಡಿಸಿದ್ದ ಹಾರವನ್ನ ಧರಿಸಿ ಸಾರ್ವಜನಿಕವಾಗಿ ಫೋಟೋ ಪ್ರದರ್ಶನ ಮಾಡಲಾಗಿದೆ. ಇದರಿಂದ ಜನರಲ್ಲಿ ತಪ್ಪು ಸಂದೇಶ ರವಾನಿಸಿ ಇತರರು ಕೂಡ ಪ್ರೇರಿತರಾಗುವ ಆತಂಕವಿದೆ. ಈ ಮೂಲಕ ವನ್ಯಜೀವಿ ಸಂರಕ್ಷಣಾ ಕಾಯಿದೆ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ. ನವಿಲು ಗರಿಯ ಮೂಲ ಪತ್ತೆ ಹಚ್ಚಿ ಸಂಬಂಧಿಸಿದವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮಾಜಿ ಸಚಿವ ಕೆ‌. ಶಿವನಗೌಡ ನಾಯಕ್ ಸ್ಪಷ್ಟನೆ : ‘ಹುಟ್ಟು ಹಬ್ಬದ ಹಿನ್ನೆಲೆ ಯಾರೋ ಅಭಿಮಾನಿಗಳು ನಿಜವಾದ ನವಿಲು ಗರಿಯ ಹಾರ ತಂದು ಹಾಕಿದ್ದಾರೆ. ಅಭಿಮಾನದಿಂದಾಗಿ ತಂದು ಹಾಕಿದ್ದಾರೆ. ಅದನ್ನು ಯಾರೋ ಅಭಿಮಾನಿಗಳು ಲಿಂಗಸುಗೂರಿಗೆ ತೆಗೆದುಕೊಂಡು ಹೋಗಿದ್ದರು. ಅದನ್ನು ವಾಪಸ್​ ತರಿಸಿ ಅರಣ್ಯ ಇಲಾಖೆಯವರಿಗೆ ಹಸ್ತಾಂತರಿಸುತ್ತೇವೆ. ಜವಾಬ್ದಾರಿಯುತವಾದ ಸ್ಥಾನದಲ್ಲಿರುವ ನಾವುಗಳು ಇದನ್ನು ಸ್ವೀಕಾರ ಮಾಡಬಾರದು. ಆದರೆ ಜನಜಂಗುಳಿಯ ವೇಳೆ ಇದನ್ನು ಸ್ವೀಕರಿಸಿದ್ದೇವೆ. ಅರಣ್ಯ ಇಲಾಖೆಯವರು ಏನಾದರೂ ನೋಟಿಸ್ ಕೊಟ್ರೆ ಅದಕ್ಕೆ ಪ್ರತಿಕ್ರಿಯೆ ಕೊಡುತ್ತೇವೆ’ ಎಂದಿದ್ದಾರೆ.


Spread the love

About Laxminews 24x7

Check Also

ರಾಯಚೂರು : ಜಿಲ್ಲೆಯ ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಶಿಶುಗಳ ಅದಲು ಬದಲಾದ ಆರೋಪ

Spread the loveರಾಯಚೂರು : ಜಿಲ್ಲೆಯ ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರದಂದು ಇಬ್ಬರು ಮಹಿಳೆಯರಿಗೆ ಹೆರಿಗೆಯಾಗಿದ್ದು, ಇವೆರಡು ಮಕ್ಕಳನ್ನು ಸಿಬ್ಬಂದಿ ಅದಲು-ಬದಲು ಮಾಡಿದ್ದಾರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ