ನಾರಾಯಣ ಬರಮನಿ ಬೆಳಗಾವಿಯ ನೂತನ ಡಿಸಿಪಿ
ಬೆಳಗಾವಿಯಲ್ಲಿ ಸಿಂಗಮ್ 3 ಅಧ್ಯಾಯ ಆರಂಭ…
ಬೆಳಗಾವಿಯ ಡಿಸಿಪಿ ರೋಹನ್ ಜಗದೀಶ್ ಅವರ ವರ್ಗಾವಣೆಯ ಬಳಿಕ ನೂತನ ಡಿಸಿಪಿಯಾಗಿ ನಾರಾಯಣ ಬರಮನಿ ಅವರನ್ನು ನೇಮಿಸಲಾಗಿದೆ.
ಬೆಳಗಾವಿಯ ಡಿಸಿಪಿ ರೋಹನ್ ಜಗದೀಶ್ ಅವರನ್ನು ಬೇರೆಡೆ ವರ್ಗಾವಣೆ ಮಾಡಲಾಗಿದ್ದು, ಇಂದು ಧಾರವಾಡದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿದ್ದ, ನಾರಾಯಣ ಬರಮನಿ ಅವರನ್ನು ನೂತನ ಡಿಸಿಪಿಯಾಗಿ ಸರ್ಕಾರ ಆದೇಶಿಸಿದೆ. ಕಳೆದ ಬಾರಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ಧರಾಮಯ್ಯನವರು
ಕೈ ತೋರಿದ ಹಿನ್ನೆಲೆ ಇತ್ತಿಚೇಗಷ್ಟೇ ನಾರಾಯಣ ಬರಮನಿ ಅಸಮಾಧಾನಗೊಂಡು
ಸ್ವಯಂ ನಿವೃತ್ತಿಗೆ ಮುಂದಾಗಿದ್ದರು. ನಂತರ ಸಿಎಂ ಮತ್ತು ಗೃಹ ಸಚಿವರೊಂದಿಗೆ ಮಾತುಕತೆಯಾಗಿ ಮತ್ತೇ ಸೇವೆಗೆ ಮರಳಿದ್ದರು. ಈಗ ಮತ್ತೇ ಬೆಳಗಾವಿಗೆ ಡಿಸಿಪಿಯಾಗಿ ವರ್ಗಾವಣೆಗೊಂಡಿದ್ದಾರೆ.
ಈ ಮೊದಲು ಬೆಳಗಾವಿಯ ಸಬ್ ಇನ್ಸಪೇಕ್ಟರ್ ಆಗಿದ್ದ ನಾರಾಯಣ ಬರಮನಿ ಬೆಳಗಾವಿಯ ಸಿಂಗಮ್ ಎಂದೇ ಖ್ಯಾತಿಯಾಗಿದ್ದರು.