Breaking News

ಲಾಲ್ ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಚೆನ್ನಮ್ಮ, ರಾಯಣ್ಣಿಗೆ ಗೌರವ

Spread the love

ಬೆಂಗಳೂರು, (ಜುಲೈ 15): ಸ್ವಾತಂತ್ರ್ಯೋತ್ಸವ (Independence Day) ಮತ್ತು ಗಣರಾಜ್ಯೋತ್ಸವ ಅಂಗವಾಗಿ ಪ್ರತಿ ವರ್ಷ ಒಂದೊಂದು ರೀತಿಯ ವಿಷಯವಸ್ತುವಿನ ಆಧಾರದಲ್ಲಿ ತೋಟಗಾರಿಕೆ ಇಲಾಖೆ ಬೆಂಗಳೂರಿನ (Bengaluru) ಸಸ್ಯಕಾಶಿ ಲಾಲ್​​ಬಾಗ್​​ನಲ್ಲಿ ಫಲಪುಷ್ಪ ಪ್ರದರ್ಶನ (Lalbagh Flower Show) ಆಯೋಜಿಸುತ್ತದೆ. ಅದರಂತೆ, ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಪ್ರತಿವರ್ಷದಂತೆ ಈ ವರ್ಷವೂ ಸಹ ಲಾಲ್ ಬಾಗ್​​ ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಸಿದ್ದತೆ ನಡೆಸಿದ್ದು, ಇದೇ ಆಗಸ್ಟ್ 7ರಿಂದ ಆಗಸ್ಟ್ 18ರ ವರೆಗೆ ಹಮ್ಮಿಕೊಳ್ಳಲಾಗಿದೆ. ಈ ಬಾರಿ 218ನೇ ಫ್ಲವರ್​ ಶೋನಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ (Rani Chennamma) ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (Sangolli Rayanna) ವಿಷಯಾಧಾರಿತ ಪ್ರದರ್ಶನವಿರಲಿದೆ.

ಚೆನ್ನಮ್ಮ, ರಾಯಣ್ಣಿಗೆ ಗೌರವ

ಆಗಸ್ಟ್‌ 15 ಮತ್ತು ಜನವರಿ 26ರಂದು ನಡೆಯುವ ಫಲಫುಷ್ಪ ಪ್ರದರ್ಶನಕ್ಕೆ ನೆರೆ ರಾಜ್ಯ ಮತ್ತು ವಿದೇಶಗಳಿಂದಲೂ ಜನರು ಬರುತ್ತಾರೆ. ಈ ವರ್ಷದ ಈ ಬಾರಿ ಲಾಲ್‌ಬಾಗ್‌ನಲ್ಲಿ ನಡೆಯುವ ಪುಷ್ಪ ಪ್ರದರ್ಶನವು ಕರ್ನಾಟಕದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರಾದ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನಿಗೆ ಗೌರವ ಸಲ್ಲಿಸಲಾಗುತ್ತದೆ.

ಆಗಸ್ಟ್ 7 ರಿಂದ ಆಗಸ್ಟ್ 17 ರವರೆಗೆ ನಡೆಯಲಿರುವ ಈ 218 ನೇ ಪುಷ್ಪ ಪ್ರದರ್ಶನದಲ್ಲಿ, ಚೆನ್ನಮ್ಮ ಮತ್ತು ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ ಕಥೆಯನ್ನು ಹೂವಿನ ಅಲಂಕಾರಗಳಿಂದ ಪ್ರದರ್ಶಿಸಲಾಗುತ್ತದೆ. ಈ ಬಾರಿ 11 ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಲಾಲ್‌ಬಾಗ್‌ನ ಜಂಟಿ ನಿರ್ದೇಶಕರಾದ ಎಂ. ಜಗದೀಶ್ ಮಾಹಿತಿ ನೀಡಿದ್ದಾರೆಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರು 1820ರ ದಶಕದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡಿದ್ದರು. ಚೆನ್ನಮ್ಮ ಕಿತ್ತೂರಿನ ರಾಣಿಯಾಗಿದ್ದರೆ, ರಾಯಣ್ಣ ಆಕೆಯ ಸೈನ್ಯದ ಮುಖ್ಯಸ್ಥರಾಗಿದ್ದರು. ಈ ಇಬ್ಬರು ಮಹಾನ್ ವ್ಯಕ್ತಿಗಳ ಹೋರಾಟದ ಕಥೆಯನ್ನು ಈ ಪುಷ್ಪ ಪ್ರದರ್ಶನದಲ್ಲಿ ಹೂವಿನ ಮೂಲಕ ತೋರಿಸಲಾಗುತ್ತದೆ. ಇದು ಪ್ರೇಕ್ಷಕರಿಗೆ ಒಂದು ವಿಶೇಷ ಅನುಭವ ನೀಡಲಿದೆ.


Spread the love

About Laxminews 24x7

Check Also

ಸಿಂಗದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮ ಶಿಷ್ಟಾಚಾರ ಉಲ್ಲಂಘಿಸಿ ಆಯೋಜಿಸಲಾಗಿದೆ’: ಪ್ರಧಾನಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

Spread the love ಬೆಂಗಳೂರು: ಸಿಗಂದೂರು ಸೇತುವೆ ಲೋಕಾರ್ಪಣೆ ಹಾಗೂ ವಿವಿಧ ಯೋಜನೆಗಳಿಗೆ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ