Breaking News

ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ರೈಲು ರಾಮನಾಥಪುರಂವರೆಗೆ ಸಂಚಾರ

Spread the love

ಹುಬ್ಬಳ್ಳಿ, ಜುಲೈ 15: ದಕ್ಷಿಣ ರೈಲ್ವೆಯಲ್ಲಿನ ಕಾರ್ಯಾಚರಣೆಯ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು, 07355/07356 ಸಂಖ್ಯೆಯ ಎಸ್ಎಸ್ಎಸ್ ಹುಬ್ಬಳ್ಳಿ – ರಾಮೇಶ್ವರಂ – ಎಸ್ಎಸ್ಎಸ್ ಹುಬ್ಬಳ್ಳಿ (Hubballi-Rameswaram Train) ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲಿನ ಸಂಚಾರದ ಅವಧಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ (South Western Railway). ಈ ವಿಶೇಷ ರೈಲು ತನ್ನ ಹಿಂದಿನ ನಿಗದಿತ ನಿಲ್ದಾಣವಾದ ರಾಮೇಶ್ವರಂ ಬದಲಿಗೆ ರಾಮನಾಥಪುರಂನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ ಮತ್ತು ಅಲ್ಲಿಂದಲೇ ವಾಪಸ್​ ಬರಲಿದೆ.

ಆದಾಗ್ಯೂ, ಈ ರೈಲುಗಳು ಪ್ರಸ್ತುತ ಸಮಯ ಮತ್ತು ನಿಲುಗಡೆಗಳೊಂದಿಗೆ ಸಂಚಾರವನ್ನು ಮುಂದುವರಿಸಲಿವೆ.ಈ ಹಿಂದೆ ಜುಲೈ 26ರವರೆಗೆ ಸಂಚರಿಸಬೇಕಿದ್ದ, 07355 ಸಂಖ್ಯೆಯ ಎಸ್ಎಸ್ಎಸ್ ಹುಬ್ಬಳ್ಳಿ – ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು, ಈಗ ಆಗಸ್ಟ್ 9 ರಿಂದ 30 ರವರೆಗೆ ಹೆಚ್ಚುವರಿಯಾಗಿ ನಾಲ್ಕು ಟ್ರಿಪ್ ಸಂಚರಿಸಲಿದೆ. ಈ ರೈಲು ಈಗ ರಾಮೇಶ್ವರಂ ಬದಲು ರಾಮನಾಥಪುರಂ ನಿಲ್ದಾಣದಲ್ಲಿ ತನ್ನ ಸಂಚಾರವನ್ನು ಮೊಟಕುಗೊಳಿಸಲಿದೆ.ಅದೇ ರೀತಿ, ಈ ಹಿಂದೆ ಜುಲೈ 27ರವರೆಗೆ ಸಂಚರಿಸಬೇಕಿದ್ದ, 07356 ಸಂಖ್ಯೆಯ ರಾಮೇಶ್ವರಂ – ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್​ಪ್ರೆಸ್ ರೈಲು, ಈಗ ಆಗಸ್ಟ್ 10 ರಿಂದ 31 ರವರೆಗೆ ಹೆಚ್ಚುವರಿಯಾಗಿ ನಾಲ್ಕು ಟ್ರಿಪ್ ಸಂಚರಿಸಲಿದೆ. ಈ ರೈಲು ಈಗ ರಾಮೇಶ್ವರಂ ಬದಲು ರಾಮನಾಥಪುರಂ ನಿಲ್ದಾಣದಿಂದ ಸಂಚಾರವನ್ನು ಪ್ರಾರಂಭಿಸಲಿದೆ.


Spread the love

About Laxminews 24x7

Check Also

ಭಯೋತ್ಪಾದಕರಿಗೆ ಕರ್ನಾಟಕದ ಜೈಲುಗಳು ಸ್ವರ್ಗವಾಗಿವೆ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Spread the love ಭಯೋತ್ಪಾದಕರಿಗೆ ಕರ್ನಾಟಕದ ಜೈಲುಗಳು ಸ್ವರ್ಗವಾಗಿವೆ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೈಲಿನಲ್ಲಿ ಮೊಬೈಲ್ ಸಿಗ್ತಿವೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ