ಬೆಳಗಾವಿ ಶಿವಗಂಗಾ ರೋಲರ್ ಸ್ಕೇಟಿಂಗ್ ಕ್ಲಬ್’ನಲ್ಲಿ ಸ್ಪರ್ಧೆ ಆರಂಭ
ಬೆಳಗಾವಿ ಜಿಲ್ಲೆಯ ರೋಲರ್ ಸ್ಕೆಟಿಂಗ್ ಅಸೋಸಿಯೇಷನ್ ಮತ್ತು ಕರ್ನಾಟಕ ರೋಲರ್ ಸ್ಕೆಟಿಂಗ್ ಅಸೋಸಿಯೇಷನ್ ಅವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಮೂರನೇ ರ್ಯಾಂಕಿಂಗ್ ಸ್ಕೆಟಿಂಗ್ ಸ್ಪರ್ಧೆಗೆ ಶಿವಗಂಗಾ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಭರ್ಜರಿ ಚಾಲನೆ ದೊರೆತಿದೆ.
ಸ್ಪರ್ಧೆಯ ಮೊದಲ ದಿನವೇ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡಿ ಮುನ್ನಡೆ ಪಡೆದಿದ್ದು, ಕರ್ಣಾಟಕದ 13ಕ್ಕೂ ಹೆಚ್ಚು ಜಿಲ್ಲೆಗಳಿಂದ ಸುಮಾರು 300ಕ್ಕೂ ಅಧಿಕ ಟಾಪ್ ಸ್ಕೆಟರ್ಸ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ.
ಸ್ಪರ್ಧೆಯ ಉದ್ಘಾಟನೆ ಶಿವಗಂಗಾ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷೆ ಜ್ಯೋತಿ ಚಿಂಡಕ್ ಅವರಿಂದ ನೆರವೇರಿತು. ಈ ಸಂದರ್ಭದಲ್ಲಿ ಕರ್ಣಾಟಕ ರೋಲರ್ ಸ್ಕೆಟಿಂಗ್ ಅಸೋಸಿಯೇಷನ್‌ನ ಜಾಯಿಂಟ್ ಸೆಕ್ರೆಟರಿ ಜಯಕುಮಾರ್, ಮುಖ್ಯ ತರಬೇತುದಾರರು ಸೂರ್ಯಕಾಂತ್ ಹಿಂಡಲಗೇಕರ್, ವಿಶ್ವನಾಥ ಯಳ್ಳೂರಕರ್ ಹಾಗೂ ವಿವಿಧ ಜಿಲ್ಲೆಗಳಿಂದ ಬಂದಿರುವ ಸ್ಪರ್ಧಕರು ಮತ್ತು ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಈ ಸ್ಪರ್ಧೆಗೆ ನಿರೀಕ್ಷಕರಾಗಿ ರವಿಶ್ ರಾವ್, ಮುಖ್ಯ ರೆಫರಿ ಸ್ಮೃತಿ ಅವರು ಆಗಮಿಸಿದ್ದರು. ಬೆಳ್ಳಗಾವಿ ಜಿಲ್ಲಾ ತಂಡದಿಂದ ಸೂರ್ಯಕಾಂತ್ ಹಿಂಡಲಗೇಕರ್, ನಿಖಿಲ್ ಚಿಂಡಕ್, ಯೋಗೇಶ್ ಕುಲಕರ್ಣಿ, ವಿಠಲ್ ಗಗಣೆ, ಸಕ್ಷಮ್ ಜಾಧವ್, ಸೋಹಮ್ ಹಿಂಡಲಗೇಕರ್, ಸಶತ್ಯ ತರಳೇಕರ್, ಶ್ರೀ ರೋಕಡೆ ಮುಂತಾದವರು ಸ್ಪರ್ಧೆಯನ್ನು ಯಶಸ್ವಿಗೊಳಿಸಲು ಶ್ರಮಿಸಿದರು.