Breaking News

ಹಾಡಹಗಲೇ ಚಿನ್ನಾಭರಣ ತಯಾರಿಕಾ ಅಂಗಡಿ ದರೋಡೆ ; 3 ಕೆಜಿ ಚಿನ್ನ ಹೊತ್ತೊಯ್ದ ದುಷ್ಕರ್ಮಿಗಳು

Spread the love

ಕಲಬುರಗಿ : ರಾಜ್ಯದಲ್ಲಿ ಇತ್ತೀಚೆಗೆ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ. ವಿಜಯಪುರ, ಬೀದರ್​, ದಾವಣಗೆರೆ, ಮಂಗಳೂರು ಬ್ಯಾಂಕ್​ ದರೋಡೆ ಪ್ರಕರಣಗಳು ಮಾಸುವ ಮುನ್ನವೇ ಈಗ ಕಲಬುರಗಿಯಲ್ಲಿ ಚಿನ್ನಾಭರಣ ತಯಾರಿಕಾ ಅಂಗಡಿಯನ್ನು ದೋಚಲಾಗಿದೆ. ನಗರದ ಜನದಟ್ಟಣೆ ಪ್ರದೇಶವಾದ ಸರಾಫ್ ಬಜಾರ್‌ನಲ್ಲಿ ಹಾಡಹಗಲೇ ಚಿನ್ನದ ಆಭರಣ ತಯಾರಿಸುವ ಅಂಗಡಿಗೆ ನುಗ್ಗಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದರೋಡೆ ಮಾಡಿರುವ ಘಟನೆ ನಡೆದಿದೆ‌.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಗರ ಪೊಲೀಸ್​ ಆಯುಕ್ತ ಶರಣಪ್ಪ: ಮಾಲಿಕ್ ಎಂಬ ಹೆಸರಿನ ಚಿನ್ನದ ಆಭರಣ ತಯಾರಿಸುವ ಅಂಗಡಿಗೆ ನಾಲ್ವರು ಮುಸುಕುದಾರಿ ದರೋಡೆಕೋರರು ಗನ್‌ ಹಾಗೂ ಚಾಕು ಸಹಿತ ನುಗ್ಗಿ, ಅಂಗಡಿ ಮಾಲಿಕರಿಗೆ ಬೆದರಿಕೆ ಹಾಕಿದ್ದಾರೆ. ನಂತರ ಹಗ್ಗದಿಂದ ಅವರ ಕೈಕಾಲು ಕಟ್ಟಿ, ಲಾಕರ್ ತೆರೆಸಿದ್ದಾರೆ. ತದನಂತರ ಅಂದಾಜು 3 ಕೆಜಿಯಷ್ಟು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್. ಡಿ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ ಪೊಲೀಸ್​: ಐದು ತಂಡಗಳ ರಚನೆ: ಈ ಕುರಿತು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್. ಡಿ ಅವರು ಮಾತನಾಡಿದ್ದು, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಬೆರಳಚ್ಚು ತಜ್ಞರು ಹಾಗೂ ಡಾಗ್ ಸ್ಕ್ವಾಡ್‌ನ್ನು ಕರೆಸಿ ಪರಿಶೀಲನೆ ನಡೆಸಲಾಗಿದೆ. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಪೊಲೀಸರ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ಎಲ್ಲ ತಂಡಗಳು ದುಷ್ಕರ್ಮಿಗಳ ಬಂಧನಕ್ಕಾಗಿ ಶೋಧ ಕಾರ್ಯ ಆರಂಭಿಸಿವೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು’ ಎಂದು ತಿಳಿಸಿದ್ದಾರೆ.

ದರೋಡೆ ನಡೆದ ಬಗ್ಗೆ ಚಿನ್ನದಂಗಡಿ ಮಾಲೀಕ ಹೇಳಿದ್ದು ಇಷ್ಟು: ಈ ಕುರಿತು ದರೋಡೆಕೋರರ ಕೈಗೆ ಸಿಲುಕಿದ ವ್ಯಕ್ತಿಯ ಸಹೋದರ ಮರ್ತುಲ್ಲಾ ಮಾಲಿಕ್ ಅವರು ಮಾತನಾಡಿದ್ದು, ನನ್ನ ಸಹೋದರ ಸುಮಾರು 12 ಗಂಟೆ ವೇಳೆಗೆ ಅಂಗಡಿ ಬಾಗಿಲು ತೆರೆದು ಕುರ್ಚಿಯಲ್ಲಿ ಕುಳಿತ್ತಿದ್ದರು. ಆಗ ನಾಲ್ಕು ಜನ ಮುಸುಕುದಾರಿಗಳು ನಮ್ಮ ಅಂಗಡಿಗೆ ನುಗ್ಗಿದ್ದರು. ಅದರಲ್ಲಿ ಇಬ್ಬರು ಬಂದೂಕು ತೋರಿಸಿ ಬೆದರಿಸಿದ್ದರು, ಅಷ್ಟರಲ್ಲಿ ಮತ್ತೊಬ್ಬ ಚಾಕು ತೋರಿಸಿದ್ದ, ಆ ಬಳಿಕ ಹಗ್ಗದಿಂದ ಅವರ ನನ್ನ ಸಹೋದರನ ಕೈಕಾಲು ಕಟ್ಟಿ, ಲಾಕರ್ ತೆರೆಸಿದ್ದಾರೆ. ಇಷ್ಟು ಮಾಡಿದ ಬಳಿಕ ಅವರು ಅಂಗಡಿಯಲ್ಲಿದ್ದ ಚಿನ್ನವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಘಟನೆ ಬಗ್ಗೆ ಮಾಹಿತಿ ನೀಡಿದರು. ಆದರೆ ಎಷ್ಟು ಕಳವುವಾಗಿದೆ ಎಂಬ ಬಗ್ಗೆ ಅವರು ಹೇಳಲು ನಿರಾಕರಿಸಿದರು. ಈ ಬಗ್ಗೆ ಪುಸ್ತಕದಲ್ಲಿ ಎಲ್ಲವನ್ನು ಬರೆದಿಟ್ಟಿದ್ದೇವೆ ಅದನ್ನು ನೋಡಿದರೆ ಎಷ್ಟು ಕಳವಾಗಿದೆ ಎಂದು ತಿಳಿಯುತ್ತದೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಚಿನ್ನಯ್ಯನಿಗೆ ಎಸ್​ಐಟಿ ಗ್ರಿಲ್: ‘ಬುರುಡೆ’ ಕೊಟ್ಟಿದ್ದೇ ಜಯಂತ್! ಮತ್ತಷ್ಟು ಸ್ಫೋಟಕ ಸಂಗತಿ ಬಹಿರಂಗ

Spread the loveಬೆಂಗಳೂರು, ಸೆಪ್ಟೆಂಬರ್ 1: ಧರ್ಮಸ್ಥಳ (Dharmasthala) ಪ್ರಕರಣದಲ್ಲಿ ‘ಬುರುಡೆ ಗ್ಯಾಂಗ್‌’ನ ಬುರುಡೆಯಾಟ ಬಗೆದಷ್ಟು ಬಯಲಾಗುತ್ತಿದೆ. ಬೆಂಗಳೂರಿನ ಬಾಗಲುಗುಂಟೆ ಜಯಂತ್‌ ಮನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ