ಗೋವಾ ಅಪಘಾತದಲ್ಲಿ ಖಾನಾಪೂರದ ಯುವಕ ಸಾವು
ಗೋವಾದ ಫೋಂಡಾದಲ್ಲಿ ಎರಡು ದ್ವಿಚಕ್ರ ವಾಹನಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಜನರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಮೃತರಲ್ಲಿ ಓರ್ವ ಯುವಕ ಖಾನಾಪೂರ ತಾಲೂಕಿನವನಾಗಿದ್ದಾನೆ.
ಗುರುವಾರ ಮಧ್ಯಾನ್ಹ ಫೋಂಡಾ ಬೆತೋಡಾ ಪ್ರದೇಶದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಖಾನಾಪೂರ ತಾಲೂಕಿನ ಯುವಕ ಆದಿತ್ಯ ದೇಸಾಯಿ (22) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜೊತೆಗಿದ್ದ ಯುವಕ ಯೋಗೇಶ್ ಪಾಟೀಲ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಈ ಯುವಕರು ದ್ವಿಚಕ್ರ ವಾಹನದ ಮೇಲೆ ಚಲಿಸುತ್ತಿದ್ದಾಗ ಎದುರಿನಿಂದ ಬಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. ಅಲ್ಲದೇ ಇನ್ನೊಂದು ಬೈಕಿನಲ್ಲಿದ್ದ ಇಶಾ ಗಾವಸಕೇರಿ ಸತ್ತರಿ ಕೂಡ ಸಾವನ್ನಪ್ಪಿದ್ದು, ಅವರೊಂದಿಗದ್ದ ಅದಿತಿ ಮಾಂಜರೇಕರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಡಿಕ್ಕಿ ರಭಸಕ್ಕೆ ದ್ವಿಚಕ್ರ ವಾಹನಗಳು ನಜ್ಜುಗುಜ್ಜಾಗಿವೆ. ಗಾಯಾಳುಗಳನ್ನು ಫೋಂಡಾ ಉಪ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ರವಾನಿಸಲಾಗಿದೆ.
Laxmi News 24×7