Breaking News

ಯಲ್ಲಮ್ಮನ ಭಕ್ತನ ಮೇಲೆ ಪೊಲೀಸರಿಂದ ಹಲ್ಲೆ ಈ ವರ್ತನೆಗೆ ಭಕ್ತರು ಗರಂ

Spread the love

ಯಲ್ಲಮ್ಮನ ಭಕ್ತನ ಮೇಲೆ ಪೊಲೀಸರಿಂದ ಹಲ್ಲೆ
ದೇವಿಯ ದರ್ಶನ ಮುಗಿಸಿಕೊಂಡು ದೇವಸ್ಥಾನದಿಂದ ಹೊರಬರುತ್ತಿದ್ದ ಭಕ್ತನ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮನ ದೇವಸ್ಥಾನದಲ್ಲಿ ಶುಕ್ರವಾರ ಜರುಗಿದೆ.
ಶುಕ್ರವಾರ ಇರುವದ್ದರಿಂದ ಯಲ್ಲಮ್ಮನ ದರ್ಶನಕ್ಕೆ ಬಂದಿದ್ದ ಧಾರವಾಡದ ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ ದಂಪತಿಗಳು ಆಗಮಿಸಿದ್ದರು.
ದೇವಿಯ ದರ್ಶನ ಪಡೆದುಕೊಂಡು ಹೊರ ಬರುವ ಗೇಟ ಮಾರ್ಗದಲ್ಲಿ ಮಗು ಅಳ್ಳುತ್ತಿದೆ ಮಗುವಿಗೆ ಅಳು ನಿಲ್ಲಿಸುವ ಉದ್ದೇಶದಿಂದ ಬ್ಯಾಗನಲ್ಲಿದ್ದ ತಿನ್ನಿಸು ಹುಡುಕಲು ನಿಂತಿದ್ದ ತಾಯಿ
ಈ ವೇಳೆ ಇಲ್ಲಿ ನಿಲ್ಲಬೇಡಿ ಹೊರ ನಡೆಯಿರೀ ದೇವಸ್ಥಾನದ ಹೋಮ್ ಗಾರ್ಡ್ ಗದ್ದರಿಸಿದ್ದರಿಂದ ದೇವಸ್ಥಾನ ಹೊರ ಬರುವ ಮಾರ್ಗದಿಂದ ಆಚೆ ಬಂದಿದ್ದ ತಾಯಿ ಮಗು ಹೊರಗಡೆ ಅಂಗಡಿಯೊಂದರಲ್ಲಿ ಕುಳಿತ ಮೇಲೆಯೂ ಅಲ್ಲಿಗು ಬಂದು ಎದ್ದು ಹೋಗಿ ಎಂದು ಮಗು ತಾಯಿಗೆ ಸವದತ್ತಿ ಪೊಲೀಸ ಠಾಣೆ ಸಿಬ್ಬಂದಿ ನಾಗನಗೌಡ ಹಾಗೂ ದೇವಸ್ಥಾನದ ಹೋಮ ಗಾರ್ಡ್ಗಳಿಂದ ಕಿರುಕುಳದ ಆರೋಪ ಕೂಡಲೇ ತನ್ನ ಪತಿಗೆ ವಿಷಯ ತಿಳಿಸಿದ
ಪತ್ನಿ ಈ ವೇಳೆ ಪೊಲೀಸ್ ಸಿಬ್ಬಂದಿ ದುರವರ್ತನೆ ಪ್ರಶ್ನೆ ಮಾಡುವ ವೇಳೆ ಏಕಾಏಕಿ ಪೊಲೀಸ್ ಸಿಬ್ಬಂದಿ ಲಾಠಿಯಿಂದ ಹಲ್ಲೆ ಭಕ್ತ ಅಣ್ಣಪ್ಪನಿಗೆ ತಲೆ ಭಾಗಕ್ಕೆ ಗಂಭೀರ ಗಾಯ ಪೊಲೀಸ್ ಸಿಬ್ಬಂದಿ ಹಲ್ಲೆಯಿಂದ ತಲೆಗೆ ಗಾಯ
ಆಸ್ಪತ್ರೆಗೆ ಸೇರಿಸದೇ ಪೊಲೀಸ್ ಸಿಬ್ಬಂದಿ ಹೋಮ್ ಗಾರ್ಡ ವಾಗ್ವಾದ ಹಲ್ಲೆಗೆ ಒಳಗಾದ ಅಣ್ಣಪ್ಪನನ್ನು ಆಸ್ಪತ್ರೆಗೆ ರವಾನೆ ಮಾಡಿದ ಸ್ಥಳೀಯ ಭಕ್ತರು ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ಅಣ್ಣಪ್ಪ ದಿವಟಗಿ ನೀಡಿದ್ದಾರೆ.
ಪೊಲೀಸ್ ಸಿಬ್ಬಂದಿ ಹಾಗೂ ದೇವಸ್ಥಾನ ಹೋಮ್ ಗಾರ್ಡ ಈ ವರ್ತನೆಗೆ ಭಕ್ತರು ಗರಂ ಆಗಿದ್ದಾರೆ.

Spread the love

About Laxminews 24x7

Check Also

ಒಂದು ಎಕರೆಗೆ 180 ಟನ್ ಕಬ್ಬು ಇಳುವರಿ,ಮಾಜಿ ಶಾಸಕ ಶಾಮ ಘಾಟಕೆಯವರ ಪ್ರಗತಿಪರ ಕೃಷಿ

Spread the love ಚಿಕ್ಕೋಡಿ:ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಮಾಜಿ ಶಾಸಕ ಶಾಮ ಘಾಟಗೆಯವರ ಜಮೀನಿನಲ್ಲಿ ಎಕರೆಗೆ 180 ಟನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ