Breaking News

5 ಗಾಂಜಾ ಮಾರಾಟ ಪ್ರಕರಣ ಬೇಧಿಸಿ 11 ಜನರ ಬಂಧನ

Spread the love

5 ಗಾಂಜಾ ಮಾರಾಟ ಪ್ರಕರಣ ಬೇಧಿಸಿ 11 ಜನರ ಬಂಧನ
5 ಅಕ್ರಮ ಗಾಂಜಾ ಮಾರಾಟ ಪ್ರಕರಣಗಳನ್ನು ಬೇಧಿಸಿದ ಬೆಳಗಾವಿ ಪೊಲೀಸರು ಒಟ್ಟು 11 ಜನರನ್ನು ಬಂಧಿಸಿ ಒಟ್ಟು 1 ಲಕ್ಷ 3000 ರೂಪಾಯಿ ಮೌಲ್ಯದ 3 ಕಿಲೋ 132 ಗ್ರಾಂ. ಗಾಂಜಾ ಮತ್ತು 1 ಲಕ್ಷ 55 ಸಾವಿರ ಮೌಲ್ಯದ ಬೈಕ್’ಗಳನ್ನು ವಶಕ್ಕೆ ಪಡೆದಿದ್ದಾರೆ.
ಬೈಲಹೊಂಗಲ ತಾಲೂಕಿನ ಮರಕಟ್ಟಿಯಲ್ಲಿ ಬೈಕ್’ನಲ್ಲಿ ಅನಧಿಕೃತವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮಂಜುನಾಥ ಕುರೇರನನ್ನು ಬಾಗೇವಾಡಿ ಪಿ.ಎಸ್.ಐ ಅವರ ನೇತೃತ್ವದಲ್ಲಿ ಬಂಧಿಸಿ 50 ಸಾವಿರ ಮೌಲ್ಯದ 2.6 ಕಿಲೋ ಗಾಂಜಾ ಸೇರಿದಂತೆ ಒಟ್ಟು 1,33,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಳಗಾವಿ ಕ್ಯಾಂಪ್’ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ರಾಜು ಉಚಗಾಂವಕರನನ್ನು ಕ್ಯಾಂಪ್ ಪಿ ಎಸ್ ಐ ರುಕ್ಮೀಣಿ ಅವರ ನೇತೃತ್ವದಲ್ಲಿ ಬಂಧಿಸಿ ಒಟ್ಟು 1,30,320 ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ.
ಬೆಳಗಾವಿ ಗ್ಯಾಂಗವಾಡಿ ಸರ್ಕಲ್ ಬಳಿ ಗಾಂಜಾ ಸೇವಿಸುತ್ತಿದ್ದ ಜಾಫರ್ ಸೊಲ್ಲಾಪುರೆನನ್ನು ಮಾಳಮಾರುತಿ ಪಿ ಎಸ್ ಐ ಶ್ರೀಶೈಲ್ ಹುಳಗೇರಿ ಅವರ ನೇತೃತ್ವದಲ್ಲಿ ಬಂಧಿಸಿ ಕ್ರಮಕೈಗೊಳ್ಳಲಾಗಿದೆ.
ಬೆಳಗಾವಿ ಶ್ರೀನಗರ ಗಾರ್ಡನ್ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಹಜರತ್’ಸಾಬ್ ಮಕಾನದಾರನನ್ನು ಮಾಳ ಮಾರುತಿ ಪಿ ಎಸ್ ಐ ಹೊನ್ನಪ್ಪ ತಳವಾರ ಅವರ ನೇತೃತ್ವದಲ್ಲಿ ಬಂಧಿಸಿ ಕ್ರಮಕೈಗೊಳ್ಳಲಾಗಿದೆ.
ಇನ್ನು ಬೆಳಗಾವಿಯ ಖಂಜರ್ ಗಲ್ಲಿಯಲ್ಲಿ ಮಟ್ಕಾ ಆಡುತ್ತಿದ್ದ ಮೊಹ್ಮದಶಫಿ ತಾಶೀಲ್ದಾರ, ಪರಶುರಾಮ ಹೊಸಕೋಟಿ, ಪ್ರಕಾಶ ಪಾಟೀಲ್, ರಫೀಕ್ ಮುಲ್ಲಾ ಮತ್ತು ಅಮ್ಜದಖಾನ್ ಪಠಾಣನನ್ನು ಮಾರ್ಕೇಟ್ ಪಿ.ಎಸ್.ಐ ವಿಠ್ಠಲ ಹಾವನ್ನವರ ನೇತೃತ್ವದಲ್ಲಿ ಬಂಧಿಸಿ ಒಟ್ಟು 3,100 ರೂಪಾಯಿ ನಗದು ಮತ್ತು ಓ.ಸಿ ಚೀಟಿಗಳನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ಬೆಳಗಾವಿಯ ಹೊಸ ವಂಟಮೂರಿ ಹತ್ತಿರ ಮಟ್ಕಾ ಆಡುತ್ತಿದ್ದ ರಾಜು ನಾಯಕನನ್ನು ಕಾಕತಿ ಠಾಣೆಯ ಪಿ.ಎಸ್. ಐ ಮೃತ್ಯುಂಜಯ ಮಠದ ನೇತೃತ್ವದಲ್ಲಿ ಬಂಧಿಸಿ ಒಟ್ಟು 790 ರೂಪಾಯಿ ನಗದು ಮತ್ತು ಓ.ಸಿ ಚೀಟಿಗಳನ್ನು ವಶಕ್ಕೆ ಪಡೆಯಲಾಗಿದೆ.

Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ