ಬೆಂಗಳೂರು: ಬಿಜೆಪಿಯ ಕಳಪೆ ಪ್ರಾಡಕ್ಟ್ಗಳಿಗೆ ನಾನು ಬೇಕಾಗಿದೆ. ಮಾಜಿ ಸಂಸದ ಪ್ರತಾಪ್ ಸಿಂಹ ನಾನು ಟ್ಯಾಲೆಂಟ್ ಅಂತಾರೆ. ಮತ್ತೇಕೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿಯವರು ಟಿಕೆಟ್ ಕೊಡಲಿಲ್ಲ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಆಡಿಯೋ ಕೇಳಿದ್ರಾ? ಅಥವಾ ಮೊಬೈಲ್ ಸೀಸ್ ಆಗಿದ್ದಾಗ ಏನಾದ್ರು ಸಿಕ್ತಾ? ಯಾಕೆ ನಿಮಗೆ ಟಿಕೆಟ್ ಕೊಡಲಿಲ್ಲ ಅನ್ನೋದನ್ನು ಹೇಳಲಿ. ನಾನು ಕೇಳುವ ಯಾವುದೇ ಪ್ರಶ್ನೆಗೆ ಅವರು ಉತ್ತರ ಕೊಡುವುದಿಲ್ಲ. ವಿಷಯ ಡೈವರ್ಟ್ ಮಾಡ್ತಾರೆ. ಏನಾದ್ರೂ ಕೇಳಿದ್ರೆ ಪಿಯುಸಿ ಓದಿರೋದು ಪ್ರಿಯಾಂಕ್ ಅಂತಾರೆ. ಹೌದು, ನಾನು ಪಿಯುಸಿ ಓದಿದ್ದೇನೆ. ಹಾಗಾದ್ರೆ ಮೋದಿಯವರು ಏನು ಓದಿದ್ದಾರೆ?. ಅವರ ಜೊತೆ ಓದಿದವರು ಯಾರು ಹೇಳಿ? ಎಂದು ಕುಟುಕಿದರು.ಮಾತೆತ್ತಿದರೆ ಖರ್ಗೆ ಹೆಸರು ಹೇಳ್ತಾರೆ ಅಂತ ಪ್ರತಾಪ್ ಸಿಂಹ ಹೇಳ್ತಾರೆ. ಹೌದು, ಖರ್ಗೆ ಹೆಸರು ಹೇಳುವುದಕ್ಕೆ ನನಗೆ ಹೆಮ್ಮೆ ಇದೆ. ನಮ್ಮ ಅಪ್ಪನ ಹೆಸರು ಹೇಳುವುದಕ್ಕೆ ನನಗೆ ಹೆಮ್ಮೆ ಇದೆ. ನಿಮ್ಮ ಅಪ್ಪನ ಹೆಸರು ಹೇಳೋದಕ್ಕೆ ಆಗಿಲ್ಲ ಅಂದರೆ ನಾನೇನು ಮಾಡಲಿ?. ಅವರಪ್ಪ ಸರಿಯಾಗಿ ಕೆಲಸ ಮಾಡಿಲ್ಲ ಅಂದರೆ ನಾನೇನು ಮಾಡಲಿ? ಎಂದು ಪ್ರತಾಪ್ ಸಿಂಹ ವಿರುದ್ದ ವಾಗ್ದಾಳಿ ನಡೆಸಿದರು.