Breaking News

ಗಣಿತದಲ್ಲಿ ಗಿನ್ನಿಸ್ ರೆಕಾರ್ಡ್​ಗೆ ಹಾವೇರಿಯ ಮೂವರು ವಿದ್ಯಾರ್ಥಿಗಳಿಂದ ತಯಾರಿ

Spread the love

ಹಾವೇರಿ: ಗಣಿತ ಅಂದರೆ ಸಾಕು ಕೆಲ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ. ಕೆಲವರಿಗೆ ನೀರು ಕುಡಿದಷ್ಟೇ ಸುಲಭ. ಅದೇ ರೀತಿ ಹಾವೇರಿ ನಗರದ ಮೂರು ವಿದ್ಯಾರ್ಥಿಗಳು ಗಣಿತದಲ್ಲಿ ವಿಶ್ವದಾಖಲೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಹಾವೇರಿಯ ಗಣಿತ ತಜ್ಞೆ ಉಷಾರಾಣಿ ಈ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ.

ಅನರ್ಘಾ ರಾಜು ಗೌಳಿ, ಆರವ್ ಜವಳೇಕರ್ ಮತ್ತು ಹರೀಶ್ ಸುರಳೇಶ್ವರ ಈ ಮೂವರು ಸಾಧನೆ ಮಾಡಲು ಹೊರಟಿರುವ ವಿದ್ಯಾರ್ಥಿಗಳು. ಇವರೇ ಗಣಿತದ ಲೆಕ್ಕಗಳನ್ನು, ಮಗ್ಗಿಗಳನ್ನು ನೀರು ಕುಡಿದಷ್ಟೇ ಸುಲಭವಾಗಿ ಹೇಳುತ್ತಾರೆ. ಅಂಕಿಗಳನ್ನು ಹೇಳುತ್ತಿದ್ದಂತೆ ಯಾವುದೇ ಉಪಕರಣಗಳಿಲ್ಲದೇ ಕಣ್ಣುಮುಚ್ಚಿ ಲೆಕ್ಕ ಮಾಡಲು ನಿಂತರೆ ಮೂವರು ಪಟಾಫಟ್​​​ ಉತ್ತರಿಸುತ್ತಾರೆ.

2ನೇ ತರಗತಿಯಲ್ಲೇ ಸಾಧನೆಗೆ ಹೊರಟ ಅನರ್ಘಾ: ಇವರ ಲೆಕ್ಕಾಚಾರ ನೋಡಿ ಗಣಿತ ಶಿಕ್ಷಕರೇ ನಿಬ್ಬೆರಗಾಗುತ್ತಾರೆ. ಅನರ್ಘಾ ಗೌಳಿ ಪ್ರಸ್ತುತ 7 ವರ್ಷದ ಬಾಲಕಿಯಾಗಿದ್ದು ಎರಡನೇಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಇವಳು ಒಂದು ಅಂಕಿ ಎರಡು ಅಂಕಿ ಮೂರು ಅಂಕಿ ಲೆಕ್ಕಗಳ ಸಂಕಲನ ವ್ಯವಕಲನ ಕಣ್ಣುಮುಚ್ಚಿ ತಗೆಯುವದರಲ್ಲಿ ಒಪ್ಪಿಸುತ್ತಾಳೆ. ಒಂದಂಕಿ ಎರಡಂಕಿ ಮೂರಂಕಿ ಲೆಕ್ಕಗಳನ್ನು ಮನಸ್ಸಿನಲ್ಲಿ ಮಾಡುತ್ತಾರೆ. ನೂರರವರೆಗೆ ಮಗ್ಗಿ ಹೇಳುತ್ತಾಳೆ ಐವತ್ತರವರೆಗೆ ಮಗ್ಗಿಗಳನ್ನು ಉಲ್ಟಾ ಹೇಳುತ್ತಾಳೆ.

5000ವರೆಗೆ ಮಗ್ಗಿ ಹೇಳುವ ಆರವ್​: ಆರವ್​​​ ಜವಳೇಕರ್​​​ 5000ದವರೆಗಿನ ಮಗ್ಗಿಗಳನ್ನು ಕರಗತ ಮಾಡಿಕೊಂಡಿದ್ದಾನೆ. ಒಂದರಿಂದ ಹಿಡಿದು 5000ವರೆಗಿನ ಯಾವುದೇ ಅಂಕಿಯನ್ನು ನೀವು ಹೇಳಿದರೆ ಸಾಕು ಕ್ಷಣಮಾತ್ರದಲ್ಲಿ ಮಗ್ಗಿ ಒಪ್ಪಿಸುತ್ತಾರೆ. ನೀವು ಒಂದಂಕಿಯಾದರೂ ಹೇಳಿ ಎರಡಂಕಿಯಾದರು ಹೇಳಿ ಮೂರಂಕಿಯಾದರು ಹೇಳಿ ನಾಲ್ಕಂಕಿಯಾದರು ಸರಿ ಯಾವುದು ಹೇಳಿದರು ಮಗ್ಗಿ ಸಿದ್ಧವಾಗಿರುತ್ತದೆ. ಕಡಿಮೆ ಅಂಕಿ ಯಿಂದ ಅಧಿಕ ಅಂಕಿಯಾದರೂ ಸರಿ. ಹೆಚ್ಚು ಅಂಕಿಯಿಂದ ಕಡಿಮೆ ಅಂಕಿಯಾದರು ಸರಿ ಕಣ್ಣುಮುಚ್ಚಿ ಹೇಳಲಾರಂಭಿಸಿದರೆ ಎಂತಹವರಿದ್ದರು ತಲೆದೂಗಲೇಬೇಕು.

ಉಲ್ಟಾ ಮಗ್ಗಿ ಹೇಳುವ ಹರೀಶ್ ಸುರಳೇಶ್ವರ: ಇನ್ನು ಹರೀಶ್​ ಸುರಳೇಶ್ವರ ಕೂಡ ಸುಮಾರು ಸಾವಿರ ಅಂಕಿಯವರೆಗೆ ಮಗ್ಗಿಗಳನ್ನು ಹೇಳುತ್ತಾರೆ. ಒಂದರಿಂದ ಮುನ್ನೂರು ಅಂಕಿಯವರೆಗೆ ಮಗ್ಗಿಗಳನ್ನು ಉಲ್ಟಾ ಹೇಳುತ್ತಾರೆ. ಒಂದಂಕಿ, ಎರಡಂಕಿ, ಮೂರಂಕಿ, ನಾಲ್ಕಂಕಿ ಲೆಕ್ಕಗಳನ್ನು ಯಾವುದೇ ಉಪಕರಣದ ಸಹಾಯವಿಲ್ಲದ ಬಿಡಿಸುತ್ತಾರೆ. ಯಾವುದೇ ಉಪಕರಣ ಸಹಾಯ ಇಲ್ಲದೆ ಮನಸ್ಸಿನಲ್ಲಿ ವ್ಯವಕಲನ ಸಂಕಲನ ಭಾಗಾಕಾರ ಸೇರಿದಂತೆ ವಿವಿಧ ಲೆಕ್ಕಗಳನ್ನು ಹರೀಶ್ ನೀರು ಕುಡಿದಷ್ಟೇ ಸುಲಭವಾಗಿ ಮಾಡುತ್ತಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ