Breaking News

ಮಗಳು ಬರ್ಬೇಡ ಅಂತಾಳೆ,ಮಗ-ಸೊಸೆ‌ ಹಿಂಸೆ‌ ನೀಡ್ತಾರೆ,ಕೃಷ್ಣಾ ನದಿಗೆ ಹಾರಲು ಯತ್ನಿಸಿದ್ದ ವೃಧ್ದನ ಕಣ್ಣೀರ ಕಥೆ

Spread the love

ಮಗಳು ಬರ್ಬೇಡ ಅಂತಾಳೆ,ಮಗ-ಸೊಸೆ‌ ಹಿಂಸೆ‌ ನೀಡ್ತಾರೆ,ಕೃಷ್ಣಾ ನದಿಗೆ ಹಾರಲು ಯತ್ನಿಸಿದ್ದ ವೃಧ್ದನ ಕಣ್ಣೀರ ಕಥೆ
ಚಿಕ್ಕೋಡಿ:ಕೃಷ್ಣಾ ನದಿಗೆ ಹಾರಿ ಜೀವ ತೆಗೆದುಕೊಳ್ಳಲು ಯತ್ನಿಸುತ್ತಿದ್ದ ವೃದ್ಧನನ್ನು ಸ್ಥಳೀಯರು ಕಾಪಾಡಿದಾರೆ. ನಂತರ ಕಷ್ಟ, ಸುಖ ವಿಚಾರಿಸಿದಾಗ ಮಗ ಮಗಳಿಂದಲೇ ದೂರಾವಾದ ಕರುಣಾಜನಕ ಕತೆಯನ್ನು ಹೇಳಿದ್ದಾನೆ.
ಅಂದ್ದಾಗೆ ಈ ಘಟನೆಯು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿದೆ. ಕೃಷ್ಣಪ್ಪ ಗೋಪಾಲಪ್ಪ ಹತ್ತಿಮರದ (77) ನದಿಗೆ ಹಾರಲು ಯತ್ನಿಸಿದ ವೃದ್ಧ. ಇವರು ಮೂಲತಃ ಯಮಕನಮರಡಿ ಗ್ರಾಮದವರು. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಅಂಕಲಿ-ಮಾಂಜರಿ ಬ್ರಿಡ್ಜ್ ಮೇಲಿಂದ ನದಿಗೆ ಹಾರಲು ಯತ್ನಿಸುತ್ತಿರೋದನ್ನು ಸ್ಥಳೀಯರ ಗಮನಕ್ಕೆ ಬಂದಿದೆ. ಕೂಡಲೇ ಅಲ್ಲಿಗೆ ಓಡಿದ ಸಾರ್ವಜನಿಕರು ಆತನ ರಕ್ಷಣೆ ಮಾಡಿದ್ದಾರೆ.
ನೀವು ನನಗೆ ಏನೂ ಕೇಳಬ್ಯಾಡ್ರಿ.. ನಾನು ಹೋಗೇನ್ರಿ.. ಜೀವ ಬ್ಯಾಡ ಆಗಿದೆ.. ನನ್ನ ಮುಟ್ಟಬ್ಯಾಡ್ರಿ.. ನಂಗ ಬ್ಯಾಸರ ಆಗಿದೇರಿ.. ನೀವು ಹೋಗ್ರಿ.. ನನ್ನ ಇಲ್ಲೇ ಬಿಡ್ರಿ.. ಮಗ ಸೊಸೆ ಹಿಂಸೆ ನೀಡ್ತಾರ, ಮಗಳು ಮನೆಗೆ ಬರಬೇಡ ಅಂದಾಳ.
ಮಗ ಮತ್ತು ಸೊಸೆಯಿಂದ ಚಿತ್ರಹಿಂಸೆ ಅನುಭವಿಸಿದ ಕತೆಯನ್ನು ಹೇಳಿದ್ದಾನೆ. ‘ಮಗ-ಸೊಸೆ ಮಾನಸಿಕ ಹಿಂಸೆ ನೀಡಿದರು. ಮಗಳು ಕೂಡ ಮನೆಗೆ ಬರಬೇಡ ಅಂದುಬಿಟ್ಟಳು. ಇನ್ನು, ನನಗೆ ಯಾರು ಗತಿ? ಹೀಗಾಗಿ ದುಡುಕಿನ ನಿರ್ಧಾರಕ್ಕೆ ಮುಂದಾಗಿದ್ದೆ’ ಎಂದು ಕಣ್ಣೀರು ಇಟ್ಟಿದ್ದಾನೆ.
ನಂತರ ಸ್ಥಳೀಯರಿಂದ ಅಂಕಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವೃದ್ಧನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಧುನಿಕತೆಯಲ್ಲಿ ಹಿರಿಜೀವಗಳ ಪ್ರಾಮುಖ್ಯತೆ ಮರೆಯಾಗುತ್ತಿದೆ. ಹೊತ್ತು ಸಾಕಿದ್ದ ತಂದೆ-ತಾಯಿಗಳು ಮಕ್ಕಳಿಗೆ ಬೇಡವಾಗ್ತಿದ್ದಾರೆ. ಅದಕ್ಕೆ ವಯೋವೃದ್ಧರು ಇಂಥ ನಿರ್ಧಾರ ಕೈಗೆತ್ತಿಕೊಳ್ತಿದ್ದಾರೆ. ಇದಕ್ಕೆಲ್ಲ ಕೊನೆಯಾಗಬೇಕಿದೆ.

Spread the love

About Laxminews 24x7

Check Also

ಕಣ್ಮನ ಸೆಳೆದ ಗೋಕಾಕ್​​ ಭಂಡಾರ ಜಾತ್ರೆ 10 ಲಕ್ಷಕ್ಕೂ ಅಧಿಕ ಭಕ್ತರು ಸಾಕ್ಷಿ

Spread the loveಬೆಳಗಾವಿ: ಗ್ರಾಮದೇವಿಗೆ ಜಾತ್ರೆಯ ಸಂಭ್ರಮ.. ಎಲ್ಲಿ ನೋಡಿದರೂ ಜನಸಾಗರ.. ಕಣ್ಮನ ಸೆಳೆವ ಅದ್ಧೂರಿ ಜೋಡು ರಥೋತ್ಸವ.. ಅಲಂಕಾರಗೊಂಡು ಕಂಗೊಳಿಸುತ್ತಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ