ಬೆಂಗಳೂರು(ಡಿ.21): ಶಿಕ್ಷಣ ಇಲಾಖೆ ವಿರುದ್ಧ ಹೋರಾಟಕ್ಕೆ ಮುಂದಾಗಿರುವ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ, ಇಂದಿನಿಂದ ರುಪ್ಸಾ ಅಡಿಯಲ್ಲಿ ಬರುವ ಎಲ್ಲಾ ಶಾಲೆಗಳ ಆನ್ಲೈನ್ ಮತ್ತು ಆಫ್ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿದೆ. ಜೊತೆಗೆ ಸಂಪೂರ್ಣ ಶೈಕ್ಷಣಿಕ ವರ್ಷವನ್ನು ಸ್ಥಗಿತ ಮಾಡಲು ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ನಿರ್ಧರಿಸಿದೆ. ಸರ್ಕಾರ ಶಾಲೆಗಳನ್ನು ಪುನರಾರಂಭಿಸುವ ಸಮಯದಲ್ಲಿ ಶಾಲೆಗಳನ್ನು ಮುಚ್ಚಲು ಖಾಸಗಿ ಶಿಕ್ಷಣ ಮಂಡಳಿ ಮುಂದಾಗಿದೆ. ಇಂದಿನಿಂದ ರುಪ್ಸಾ ಅಡಿಯ ಖಾಸಗಿ ಶಾಲೆಗಳ ಆನ್ ಲೈನ್ ಕ್ಲಾಸ್ ಬಂದ್ ಆಗಲಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು 2 ಹಂತದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿವೆ. ರಾಜ್ಯದಲ್ಲಿ ಒಟ್ಟು 12,800 ಶಾಲೆಗಳ ಶೈಕ್ಷಣಿಕ ವರ್ಷ ಬಂದ್ ಆಗಲಿದೆ. ರುಪ್ಸಾ ಸಂಘಟನೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹೋರಾಟಕ್ಕಿಳಿದಿದೆ. ರುಪ್ಸಾ-ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ- RUPSA: Recognized Unaided Private School Association. ರುಪ್ಸಾ ಒಕ್ಕೂಟ ಸರ್ಕಾರಕ್ಕೆ ಡಿ.31ರವರೆಗೆ ಡೆಡ್ ಲೈನ್ ಕೊಟ್ಟಿದೆ. ಬೇಡಿಕೆ ಈಡೇರಿಸದಿದ್ದರೆ ಜ.6ರಿಂದ ಉಪವಾಸ ಸತ್ಯಾಗ್ರಹ ಮಾಡುವ ಎಚ್ಚರಿಕೆಯನ್ನು ನೀಡಿದೆ. ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದೆ.
ಸತ್ಯಾಗ್ರಹ ಮಾಡಲು ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ನಿರ್ಧರಿಸಿದೆ. ರಾಜ್ಯಾದ್ಯಂತ ಶಾಲೆಗಳನ್ನು ಬಂದ್ ಮಾಡಿ ಹೋರಾಟ ಪ್ರಾರಂಭಿಸಲು ಮುಂದಾಗಿದೆ.
ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟಿ ಮಾತನಾಡಿ, ರಾಜ್ಯದ ವಿವಿಧ ಮೂಲೆಗಳ ಶಾಲೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ಇವತ್ತು ಹಲವಾರು ಸಮ್ಯಸೆಗಳ ಬಗ್ಗೆ ವಿಸ್ತೃತ ವಾಗಿ ಚರ್ಚೆ ಮಾಡಿದ್ದೇವೆ. ಶಿಕ್ಷಣ ಇಲಾಖೆ ಜಾಣ ಕುರುಡುತನ ಮಾಡಿದೆ. ಶಿಕ್ಷಣ ಸಚಿವರು ತಪ್ಪು ಮಾಡುತ್ತಿದ್ದಾರೆ. ನಿನ್ನೆ ಸಿಎಂ ಬಳಿ ವರದಿ ಕೊಟ್ಟಿದ್ದಾರೆ. ಆದ್ರೆ ನಮ್ಮ ಯಾವ ಬೇಡಿಕೆಗಳನ್ನು ಈಡೇರಿಸಿಲ್ಲ ದಾಖಲಾತಿ ವಿಚಾರವಾಗಿಯೂ ಗೊಂದಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.ಭಾನುವಾರ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಅಧಿಕೃತ ನಿರ್ಧಾರವನ್ನು ರುಪ್ಸಾ ಪ್ರಕಟಿಸಿದೆ. ರುಪ್ಸಾ ಅಡಿಯಲ್ಲಿ ಬರುವ ಎಲ್ಲಾ ಶಾಲೆಗಳ ಆನ್ಲೈನ್ ಮತ್ತು ಆಫ್ಲೈನ್ ತರಗತಿಗಳನ್ನು ಬಂದ್ ಮಾಡಲು ಸುದ್ದಿಗೋಷ್ಠಿಯಲ್ಲಿ ನಿರ್ಧಾರ ಮಾಡಲಾಗಿದೆ. ಜೊತೆಗೆ ಜನವರಿ 6ರಿಂದ ಬೆಂಗಳೂರಿನಲ್ಲಿ ಉಪವಾಸ
Laxmi News 24×7